Advertisements

Category: Politics

ಅವರಿಗೊಬ್ಬರಿಗೇನಾ….ನನಗೂ ಸಿಎಂ ಆಗ್ಬೇಕು…ಪಿಎಂ ಅಗ್ಬೇಕು ಅನ್ನುವ ಕನಸಿದೆ….

ಸಿದ್ದರಾಮಯ್ಯ ಅವರಿಗೆ ಮಾತ್ರ ಸಿಎಂ ಪಟ್ಟ ಕಾದು ಕುಳಿತಿಲ್ಲ. ನನಗೂ ಸಿಎಂ ಆಗಬೇಕು, ಪಿಎಂ ಆಗಬೇಕೆಂಬ ಆಸೆ ಇದೆ. ಪ್ರತಿಯೊಬ್ಬನಿಗೂ ಉನ್ನತ ಸ್ಥಾನಕ್ಕೆ ಹೋಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆ ಆಸೆಗಳನ್ನ ಜನರು ತೀರಿಸಬೇಕು ಎಂದು ಅನರ್ಹ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಕಾಲಿಡುವುದಿಲ್ಲ. ಆ ಪ್ರಶ್ನೆಯೇ ನನ್ನ…

Advertisements

ರೌಡಿ ಶೀಟರ್ ಭೇಟಿಯಾದ ವೇಣುಗೋಪಾಲ್ : ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್ ಯಡಿಯೂರಪ್ಪ ಅವರ ಮೇಲೂ ಸಾಕಷ್ಟು ಪ್ರಕರಣಗಳಿದೆ. ಎಲ್ಲಾ ಪಕ್ಷಗಳಲ್ಲೂ ಸಾಕಷ್ಟು ರಾಜಕಾರಣಿಗಳ ಮೇಲೆ ಕ್ರಿಮಿನಲ್, ಅತ್ಯಾಚಾರ, ದರೋಡೆ ಪ್ರಕರಣಗಳ ಆರೋಪ ಇದೆ ಅನ್ನುವ ಮೂಲಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ರೌಡಿ ಶೀಟರ್ ಇಸ್ತಿಯಾಕ್ ಅಹಮದ್ ಭೇಟಿಯನ್ನು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಇಸ್ತಿಯಾಕ್ ಮೇಲಿರುವ ಪ್ರಕರಣಗಳು ಮುಕ್ತಾಯವಾಗಿವೆ. ಪ್ರಕರಣಗಳ ಆರೋಪದ…

ನನ್ನ ಕಾರಣದಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ…. ! ಇದು ಅನರ್ಹ ಶಾಸಕರೊಬ್ಬರ ಮಾತು

ನನ್ನ ಕಾರಣದಿಂದಾಗಿ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿದ್ದಾರೆ ಎಂದು ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ. ಅವರನ್ನು ಫುಲ್ ಫ್ರೀ ಬಿಟ್ಟಿದ್ದೇವೆ ಅಂದರು. ಇದೇ ವೇಳೆ ಉಪ ಚುನಾವಣೆ ಕುರಿತಂತೆ ಮಾತನಾಡಿದ ವಿಶ್ವನಾಥ್, ಮುಂಬರುವ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ನಾನು ಅಥವಾ ನನ್ನ ಕುಟುಂಬದ…

ಯಡಿಯೂರಪ್ಪ ಬಂದ್ರೆ 5 ಸಾವಿರ ಜನ ಕಟೀಲ್ ಬಂದ್ರೆ 5 ಜನ ಅಂದವನಿಗೆ ಪಕ್ಷದಿಂದಲೇ ಗೇಟ್ ಪಾಸ್

ಕರ್ನಾಟಕ ಬಿಜೆಪಿಗೆ ಇದೀಗ ಸಂಕಷ್ಟದ ದಿನಗಳು ಬಂದಿರುವ ಲಕ್ಷಣ ಗೋಚರಿಸುತ್ತಿದೆ. ಒಂದು ಕಡೆ ಇಡೀ ಕರ್ನಾಟಕ 25 ಸಂಸದರ ವಿರುದ್ಧ ತಿರುಗಿ ಬಿದ್ದಿದೆ. ನೆರೆ ಪರಿಹಾರಕ್ಕೆ ಹಣ ಕೊಡಿಸಿಲ್ಲ ಅನ್ನುವ ಕಾರಣಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದು ಯಡಿಯೂರಪ್ಪ ಅವರು ಹೊಗಳಿ, ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿದ ಕಾರ್ಯಕರ್ತನಿಗೆ ಪಕ್ಷದಿಂದಲೇ ಗೇಟ್ ಪಾಸ್ ನೀಡಲಾಗಿದೆ. ತುಮಕೂರು ಕೊರಟಗೆರೆ ತಾಲೂಕಿನ ಬಿಜೆಪಿ ಮಂಡಲ…

ಹೋಗಲೋ ಸಿದ್ದರಾಮಯ್ಯ…. ಟಗರಿನ ಎದುರು ಮುನಿಯಪ್ಪ ಅವಾಜ್

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಇದೀಗ ಉಪ ಚುನಾವಣೆಗೆ ಸಿದ್ಧವಾಗುತ್ತಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಅನೇಕ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಜೊತೆಗೆ ಕಾಂಗ್ರೆಸ್ ನಾಯಕರ ಜೊತೆಗಿನ ಮುಸುಕಿನ ಗುದ್ದಾಟವೂ ಸೋಲಿಗೆ ಕಾರಣವಾಗಿತ್ತು. ಹೀಗಾಗಿ ಅನೇಕ ನಾಯಕರು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ಆಕ್ರೋಶ ಇಂದು ಕಾಂಗ್ರೆಸ್ ಸಭೆಯಲ್ಲಿ ಸ್ಫೋಟಗೊಂಡಿದೆ. ಉಪಚುನಾವಣೆಗೆ…

ರಾಜ್ಯದಲ್ಲಿ ಉಪಚುನಾವಣೆ : 15 ರಲ್ಲಿ 12ನ್ನು ಗೆಲ್ತಾರಂತೆ ಕಾಂಗ್ರೆಸ್ : ಸಿದ್ಧವಾಯ್ತು ಸಂಭಾವ್ಯರ ಪಟ್ಟಿ

ಶತಾಯಗತಾಯ ವಿಧಾನಸಭೆ ಉಪ ಚುನಾವಣೆಯಲ್ಲಿ ಹೆಚ್ಚು ಸ್ಛಾನಗಳನ್ನು ಗೆಲ್ಲಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಅದಕ್ಕಾಗಿ ರಣತಂತ್ರ ರೂಪಿಸುತ್ತಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೋದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ ಎಂದು ಖಚಿತವಾದ ಹಿನ್ನಲೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ 12ರಲ್ಲಿ ಗೆಲ್ಲುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. 12 ಸ್ಥಾನಗಳನ್ನು ಗೆಲ್ಲಬೇಕಾದರೆ ತನು ಮನ ಧನ ಸಾಕಷ್ಟು ಮುಖ್ಯವಾಗಿದೆ….

ಕಾಂಗ್ರೆಸ್ ಗೆ ಸಾಕಾಯ್ತು ಜೆಡಿಎಸ್ ಸಹವಾಸ : ಉಪ ಚುನಾವಣೆಯಲ್ಲಿ ‘ಕೈ’ ಕೊಟ್ಟ ಕಾಂಗ್ರೆಸ್

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಅನ್ನುವ ಕಾರಣದಿಂದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ರಚಿಸಿತ್ತು. ಹೈಕಮಾಂಡ್ ಮಟ್ಟದಲ್ಲಿ ನಡೆದ ಮೈತ್ರಿಯಿಂದಾಗಿ ಸಮ್ಮಿಶ್ರ ಸರ್ಕಾರ ಟೇಕಾಫ್ ಆಗುವ ಮುನ್ನವೇ ಪತನಗೊಂಡಿತು. ಸರ್ಕಾರ ಉರುಳುತ್ತಿದ್ದಂತೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯ ಕಥೆಯೇನು ಅನ್ನುವ ಪ್ರಶ್ನೆ ಉದ್ಭವಿಸಿತ್ತು. ಕಾಂಗ್ರೆಸ್ ನಾಯಕರು ದಳಪತಿಗಳ ಕಡೆಗೆ ಕೈ ತೋರಿಸಿದರೆ, ದಳಪತಿಗಳು ದೆಹಲಿ ಕಡೆಗೆ ಮುಖ ಮಾಡಿದ್ದರು. ಕೊನೆಗೆ ಈ ಬಗ್ಗೆ ಸ್ಪಷ್ಟಪಡಿಸಿದ್ದ…

ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗೋ ಕನಸು…!

ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು, ಅವರು ಸಿಎಂ ಆಗ್ತಾರೆ ಅನ್ನುವ ಮಾತುಗಳನ್ನು ಅವರ ಬೆಂಬಲಿಗರು ಪದೇ ಪದೇ ಹೇಳುತ್ತಿದ್ದರು. ಇದೀಗ ಕುಮಾರಸ್ವಾಮಿ ಮಾಜಿಯಾಗಿದ್ದಾರೆ, ಯಡಿಯೂರಪ್ಪ ಸಿಎಂ ಕುರ್ಚಿ ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಕನಸು ಪ್ರಾರಂಭವಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಅವರೇ ಮಾತನಾಡಿದ್ದು, ಈ ಸಲ ಕೈ ಬಿಟ್ರಿ, ಮುಂದಿನ ಸಲ ಕೈ…

ಸಿಡಿದೆದ್ದ ಸಿದ್ದು : ನೀಚ ರಾಜಕಾರಣ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟು ಗುಣ

ಬೀಳಿಸುವ ನೀಚ ರಾಜಕಾರಣ ಮಾಡುವವನು ನಾನಲ್ಲ. ಅದೇನಿದ್ರು ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟುಗುಣ. ದೇವೇಗೌಡರು ಬೇರೆ ಸರಕಾರ ಉರುಳಿಸೋದರಲ್ಲಿ ನಿಪುಣರು ಮತ್ತು ಅವರ ಹುಟ್ಟು ಗುಣ. ಧರ್ಮಸಿಂಗ್‌ ಅವರಿಗೆ ಬೆಂಬಲ ಕೊಟ್ಟಿದ್ದರು. ವಿತ್‌ಡ್ರಾ ಮಾಡಿದ್ರು. ಧರ್ಮಸಿಂಗ್‌ ಸರಕಾರ, ಬೊಮ್ಮಾಯಿ ಸರಕಾರದಲ್ಲಿ ಮಂತ್ರಿಯಾಗಿದ್ದುಕೊಂಡು ಬೀಳಿಸಿದ್ದು ಯಾರು? ಇವತ್ತೇನಾದ್ರು ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ನೇರವಾಗಿ ದೇವೇಗೌಡ, ಕುಮಾರಸ್ವಾಮಿ ಕಾರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. …

ಸಿದ್ದು ರಾಜಕೀಯ ಭವಿಷ್ಯ ಅಂತ್ಯಗೊಳಿಸಲು ದಳಪತಿಗಳ ಹೊಸ ಆಟ ಶುರುವಾಯ್ತಲ್ಲ…

ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದ ಯಡಿಯೂರಪ್ಪ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ನಿಮ್ಮನ್ನು ಅಪ್ಪ ಮಕ್ಕಳು ಮುಳುಗಿಸುತ್ತಾರೆ ಅಂದಿದ್ದರು. ಇದೀಗ ಅದೇ ಪರಿಸ್ಥಿತಿ ಉದ್ಭವಿಸಿದೆ. ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಸೈಲೆಂಟ್ ಆಗಿದ್ದ ಕಾಂಗ್ರೆಸ್ ನಾಯಕರು ರಾಜಕೀಯ ಬೆಳವಣಿಗೆ ಕುರಿತಂತೆ ಉಸಿರೆರಲಿಲ್ಲ. ಆದರೆ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಪ್ರಾರಂಭಿಸಿರುವ ಕುಮಾರಸ್ವಾಮಿ ಮತ್ತು ದೇವೇಗೌಡರು ಅಂದು ಯಡಿಯೂರಪ್ಪ ಹೇಳಿದ ಮಾತನ್ನು…