Advertisements

Category: Politics

ಹಾಸನದಲ್ಲಿ ಪ್ರಜ್ವಲ್‌ ಸ್ಪರ್ಧಿಸಿದ್ರೆ ಕಾಂಗ್ರೆಸ್‌ ಬೆಂಬಲ ಬೇಕಿಲ್ಲವಂತೆ

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಬೆಂಬಲ ನೀಡಲ್ಲ ಅನ್ನುವ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಕಾಂಗ್ರೆಸ್‌ನವರ ಬೆಂಬಲ ನಮಗೆ ಬೇಕಾಗಿಯೂ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.  ಹಾಸನದಲ್ಲಿ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿದ ಅವರು ಯಾರಿಗೆ ಯಾರು ಕಲ್ಲು ಹೊಡೀತಾರೋ ಅಂತಿಮವಾಗಿ ಯಾರಿಗೆ ಕಲ್ಲು ಹೊಡೀತಾರೋ ನೋಡೋಣ, ಸರ್ಕಾರ ಅಸ್ಥಿರಗೊಳಿಸಿದ್ದಕ್ಕೆ ತಡೆ ಬಿದ್ದಿದೆ, ಕೆಲವರು ಕೋರ್ಟ್ ನಲ್ಲಿ ತಡೆಯಾಜ್ಞೆ…

Advertisements

12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ರಾಜ್ಯ ಸ್ಥಾನಮಾನ ನೀಡಲಿಲ್ಲ ಎಂದು ಸಿಎಂ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಸೋಮವಾರ (ಫೆ.11) ಪ್ರತಿಭಟನೆ ಆಯೋಜಿಸಿದ್ದರು. ಧರ್ಮ ಹೋರಾಟ ದೀಕ್ಷೆ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆದಿತ್ತು. ಕೇವಲ 12 ತಾಸುಗಳ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಪ್ರತಿಭಟನೆಗಾಗಿ ಜನರನ್ನು ಕರೆದೊಯ್ಯಲು ಶ್ರೀಕಾಕುಲಂ…

ಎಲ್ಲರೂ ಸೇರಿಕೊಂಡು ರೇಪ್ ಮಾಡ್ತಿದ್ದೀರಿ : ಸ್ಪೀಕರ್ ರಮೇಶ್ ಕುಮಾರ್

ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಉದಾಹರಣೆ ಮೂಲಕ ಪ್ರಶ್ನೆ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್…… “ಈಗ ನೀವು ಹೇಳ್ತಿರಲ್ಲ ಸಭಾಧ್ಯಕ್ಷರನ್ನು ಬೀದಿಗೆ…

ಪ್ರಿಯಾಂಕ ರಾಜಕೀಯ ಎಂಟ್ರಿ ಕಂಡು ಭಾವಪರವಶನಾದ ಪತಿ

ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ಪಯಣ ಇಂದು ಭರ್ಜರಿ ರೋಡ್‌ ಶೋ ಮೂಲಕ ಆರಂಭವಾಗಿದೆ. ಈ ಸಂದರ್ಭದಲ್ಲಿ ಆಕೆಯ ಪತಿ ರಾಬರ್ಟ್‌ ವಾದ್ರಾ ಭಾವಪರವಶರಾಗಿದ್ದು ದೇಶದ ಜನರಲ್ಲಿ ತಮ್ಮ ಕೋರಿಕೆ ಮಂಡಿಸಿದ್ದಾರೆ ಈ ಸಂಬಂಧ ಟ್ವೀಟ್ ಮಾಡಿರುವ ವಾದ್ರಾ ‘ಪ್ರಿಯಾಂಕಾಳನ್ನು ನಿಮ್ಮ ಕೈಗೊಪ್ಪಿಸುತ್ತಿದ್ದೇನೆ. ಆಕೆಯ ಸುರಕ್ಷೆಯನ್ನು ದಯವಿಟ್ಟು ನೋಡಿಕೊಳ್ಳಿ’ ಅಂದಿದ್ದಾರೆ. ”ರಾಜಕೀಯ ರಂಗ ಅತ್ಯಂತ ಕೆಟ್ಟು ಹೋಗಿರುವ ಇಂದಿನ ದಿನಗಳಲ್ಲಿ ಪ್ರಿಯಾಂಕಾಳ…

ಕಾನೂನು ಎದುರಿಸುವ ತಾಕತ್ತು ತೋರಿದ ಬಿಎಸ್ವೈ ಮಂಜುನಾಥನ ಮುಂದೆ ಸತ್ಯ ಒಪ್ಪಿಕೊಳ್ಳಬೇಕಾಯ್ತಲ್ಲ

ಯಡಿಯೂರಪ್ಪನವರು ಇತ್ತೀಚಿಗೆ ನಡೆದುಕೊಳ್ಳುವ ರೀತಿ ನೋಡಿದರೆ, ಅವರು ಸಿಎಂ ಕುಮಾರಸ್ವಾಮಿ ಅವರನ್ನು ಓವರ್ ಟೇಕ್ ಮಾಡುವುದು ಖಂಡಿತಾ. ರಾಜ್ಯ ರಾಜಕಾರಣದಲ್ಲಿ Hir and Run, ಯು ಟರ್ನ್ ಪರಿಣಿತರು ಯಾರು ಅಂದರೆ ಮೊದಲಿಗೆ ಬರುವುದು ಕುಮಾರಸ್ವಾಮಿ ಹೆಸರು. ಆದರೆ ಇದೀಗ ಕುಮಾರಸ್ವಾಮಿಯವರದ್ದು ಯು ಟರ್ನ್ ಅದ್ಯಾವ ಲೆಕ್ಕ, ನನಗೆ ಅವರಿಗಿಂತ ಸೂಪರ್ ಆಗಿ ಯು ಟರ್ನ್ ಬರುತ್ತದೆ ಎಂದು ಯಡಿಯೂರಪ್ಪ ತೋರಿಸಿಕೊಟ್ಟಿದ್ದಾರೆ….

ಮಂಡ್ಯದ ಗೌಡ್ತಿಯ ಆದಿಚುಂಚನಗಿರಿ ಭೇಟಿ : ಜೆಡಿಎಸ್ ನಾಯಕರಿಗೆ ಸಿಕ್ಕಾಪಟ್ಟೆ ಗಡಿಬಿಡಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದ್ಯಾವ ಕ್ಷೇತ್ರ ಕಲರ್ ಫುಲ್ ಆಗಿರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡ್ಯ ಮಾತ್ರ ಚುನಾವಣೆ ಘೋಷಣೆಯಾಗಿ, ಅಭ್ಯರ್ಥಿ ಅಂತಿಮವಾಗುವ ತನಕ ಕಲರ್ ಫುಲ್ ಆಗಿರೋದ್ರಲ್ಲಿ ಸಂಶಯವಿಲ್ಲ. ಅಂತಹುದೊಂದು ಮುನ್ಸೂಚನೆ ಶ್ರೀಆದಿಚುಂಚನಗಿರಿಯ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ದೊರೆತಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮಗ ಅಭಿಷೇಕ್ ಜೊತೆ ಭೇಟಿ ಕೊಟ್ಟ ಸುಮಲತಾ ಅಂಬರೀಶ್ ಕಾಲಭೈರವೇಶ್ವರನಿಗೆ ವಿಶೇಷ…

ಸೋ ಕಾಲ್ಡ್ ಸನ್ ಆಫ್ ಸಾಯ್ಲ್ : ಮೋದಿ ಮೇಲೆ ದೊಡ್ಡಗೌಡರ ಸಿಟ್ಟು

ಪ್ರಧಾನಿ ನನ್ನನ್ನು ‘ಸೋ ಕಾಲ್ಡ್ ಸನ್ ಆಫ್ ಸಾಯ್ಲ್’ ಎಂದು ಕರೆದರು.  ಪ್ರಧಾನಿ ಆಡಿದ ಮಾತುಗಳು ನನಗೆ ಬೇಸರ ತಂದಿದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ. ರೈತನ ಮಗನಾಗಿ ಹುಟ್ಟಿದ್ದೇನೆ ರೈತನಾಗಿ ಸಾಯುತ್ತೇನೆ. ಬಜೆಟ್ ಮೇಲೆ ಮಾತನಾಡಲು ಅವಕಾಶ ಕೇಳಿದ್ದೆ. ಇದು ನನ್ನ ಕೊನೆಯ ಭಾಷಣವೂ ಆಗಬಹುದು.  ಇಷ್ಟು ದಿನ ನನಗೆ…

ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ

ಇತ್ತೀಚೆಗೆ ಸುಮಲತಾ ಅಂಬರೀಶ್ ಜಾತಿ ವಿಚಾರದ ಕೆದಕಿದ್ದ ಜೆಡಿಎಸ್ ಮುಖಂಡ ಶ್ರೀಕಂಠೇಗೌಡ ಎಡವಟ್ಟು ಮಾಡಿಕೊಂಡಿದ್ದರು. ಸುಮಲತಾ ಮಂಡ್ಯದ ಗೌಡ್ತಿಯಲ್ಲ, ಅವರು ಆಂಧ್ರದ ಗೌಡ್ತಿ ಅಂದಿದ್ದರು. ಇದು ಅಭಿಮಾನಿಗಳು ಮಾತ್ರವಲ್ಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಕುಮಾರಸ್ವಾಮಿ ಆಡಿದ ಮಾತನ್ನು ಜನ ಟ್ರೋಲ್ ಮಾಡಿದ್ದರು. ನನ್ನ ಪತ್ನಿ ಆಂಧ್ರ ಮೂಲದವರು…

ಭಾರತ ರತ್ನ’ ಗೌರವ ಕೇವಲ ಬ್ರಾಹ್ಮಣರ ಕ್ಲಬ್: ಅಸಾದುದ್ದೀನ್ ಓವೈಸಿ ಟೀಕೆ

ಹೈದರಾಬಾದ್ ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ‘ಭಾರತ ರತ್ನ’ ವಿರುದ್ಧ ಗೇಲಿ ಮಾಡಿದ್ದಾರೆ. ಭಾರತದ ಅತ್ಯುನ್ನತ ನಾಗರಿಕರ ಪ್ರಶಸ್ತಿ ಕೇವಲ ಬ್ರಾಹ್ಮಣರ ಕ್ಲಬ್‌ ಆಗಿದೆ. ಮೇಲ್ಜಾತಿಯವರಿಗೆ ಮಾತ್ರ ಈ ಪ್ರಶಸ್ತಿ ಸಿಗುತ್ತದೆ ಎಂದು ಟೀಕಿಸಿದ್ದಾರೆ.

ಚುನಾವಣಾ ರಾಜಕೀಯ ನಿವೃತಿಯ ಮುನ್ಸೂಚನೆ ಕೊಟ್ಟ ದೇವೇಗೌಡರು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ದೇವೇಗೌಡರು ಹಾಸನದಲ್ಲಿ ಸ್ಪರ್ಧಿಸುವುದಿಲ್ಲ ಬದಲಾಗಿ ಮೊಮ್ಮಗ ಪ್ರಜ್ವಲ್ ಗೆ ಜಾಗ ಬಿಟ್ಟುಕೊಡುತ್ತಾರೆ ಎನ್ನಲಾಗಿದೆ. ಆದರೆ ಭವಾನಿ ರೇವಣ್ಣ, ಮಾವನವರೇ ಹಾಸನದಲ್ಲಿ ಸ್ಪರ್ಧಿಸಬೇಕು ಅನ್ನುತ್ತಿದ್ದಾರೆ. ಮತ್ತೊಂದು ಕಡೆ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಸಿಎಂ, ಹಾಲಿ ಸಂಸದ ಸದಾನಂದಗೌಡ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿ ಇದೆ. ಈ ನಡುವೆ ಮುಂಬರೋ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ…