Advertisements

Category: Politics

ಕರ್ನಾಟಕಕ್ಕೆ ಯಡಿಯೂರಪ್ಪ ಬೇಡ…ದೇಶಕ್ಕೆ ರಾಹುಲ್ ಬೇಡ

ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೇನಾಗುತ್ತದೋ ಅನ್ನುವ ಆತಂಕದ ಕರಿ ಮೋಡ ಆವರಿಸಿದೆ. ಭಾರತ ಸರ್ಕಾರ ಸೇನಾ ಪಡೆಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದು, ಉಗ್ರರನ್ನು ಸದೆ ಬಡಿಯಿರಿ ಎಂದು ರಣ ವೀಳ್ಯ ಕೊಟ್ಟಿದೆ. ಆದರೆ ರಾಜಕಾರಣಿಗಳು ಯುದ್ದದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾರಂಭಿಸಿದ್ದಾರೆ. ಅದರಲ್ಲೂ ನಾಚಿಕೆಗೇಡಿನ ಹೇಳಿಕೆ ಬಂದಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಡೆಯಿಂದ, ನಿನ್ನೆ ಮಾತನಾಡಿದ್ದ ಅವರು ಉಗ್ರರ…

Advertisements

ಮೋದಿ ಜೌಟ್ :ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿ : ಸಿದ್ದರಾಮಯ್ಯ

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.  ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ಗಂಗಾಮತಸ್ಥರ ಜಿಲ್ಲಾ ಮಟ್ಟದ ಸಮಾವೇಶ ದಲ್ಲಿ ಮಾತನಾಡಿದ ಅವರು, ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂದು ಆತ್ಮವಿಶ್ವಾಸ ದಿಂದ ಹೇಳಿದರು.  ರಾಹುಲ್ ಗಾಂಧಿ ಪ್ರೈ ಮಿನಿಸ್ಟರ್ ಆಗ್ತಾರೆ. ಆಗ ಗಂಗಾಮತಸ್ಥ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಪ್ರಯತ್ನಿಸುತ್ತೇನೆ. ನಾನು ಸಿಎಂ ಆದ್ಮೇಲೆ ಅಂಬಿಗರ ಸಮಾಜ…

ಡ್ರಿಂಕ್ಸ್ ಮಾಡಿ ಕಾರು ಓಡಿಸಿದ್ರಾ ಶಾಸಕ ಸಿಟಿ ರವಿ..?

ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ. ರವಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟು ಮೂವರು ಗಾಯಗೊಂಡಿರುವ ಧಾರುಣ ಘಟನೆ ಕುಣಿಗಲ್‌ನ ಊರ್ಕೇನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಮೃತರನ್ನು ಕನಕಪುರದ ಸೂರೇನಹಳ್ಳಿಯ ವಾಸಿಗಳಾದ ಶಶಿಕುಮಾರ್ (28) ಹಾಗೂ ಸುನೀಲ್‌ಗೌಡ…

90% ದಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್

ದೇಶದಲ್ಲಿನ ಶೇ.90ರಷ್ಟು ಮುಸ್ಲಿಮ್ ಬಾಂಧವರು ಮತದಾನ ಮಾಡಿದರೆ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ. ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ. ಬಾಗೇಪಲ್ಲಿಯಲ್ಲಿ ನೂತನ ಶಾದಿಮಹಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಜಮೀರ್ ಅಹಮದ್, ರಾಹುಲ್ ಗಾಂಧಿ ಪಿಎಂ ಆಗೋ ಬಗ್ಗೆ ಮಾತನಾಡಿದ್ದಾರೆ. ಮುಸ್ಲಿಮರು ಮತದಾನ ಮಾಡೋದೇ…

ನಾನು ಪ್ರಧಾನಿಯಾಗಿರಬೇಕಿತ್ತು… ಅನಂತ್​ ಕುಮಾರ್​ ಹೆಗಡೆಯನ್ನ ಜೈಲಿಗೆ ಹಾಕ್ತಿದ್ದೆ

ನಾನೇನಾದರೂ ಪ್ರಧಾನಿಯಾಗಿದ್ದರೆ ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆಯನ್ನ ಜೈಲಿಗೆ ಹಾಕ್ತಿದ್ದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ರಾಜ್ಯ ಯುವ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಮಾತನಾಡಿ, ಹೋದೆಲೆಲ್ಲಾ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ. ಈ ಬಾರಿಯೂ ಅಧಿಕಾರಕ್ಕೆ ಬರೋರು ನಾವೇ ಅಂತಾರೆ. ಆದರೆ ಅವರಪ್ಪನಾಣೆಗೂ ಬಿಜೆಪಿ ಅಧಿಕಾರಕ್ಕೆ…

ನಿಮ್ಮಿಬ್ಬರಲ್ಲಿ ಬೆಗ್ಗರ್ಸ್ ಯಾರು…ದಯವಿಟ್ಟು ಹೇಳಿ ಸಖತ್ ಆಗಿರೋ ಭಿಕ್ಷೆ ಹಾಕಬೇಕಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಸಂದೇಶ ನೀಡಬೇಕೆಂಬುದು ತಮ್ಮ ಉದ್ದೇಶವಾಗಿದೆ. ಆದರೆ ನಾವು ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‍ಗೆ 7 ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 5,3,7 ಕ್ಷೇತ್ರಗಳು ಎಂಬ ಪ್ರಶ್ನೆಯಲ್ಲ. ವಿ ಆರ್ ನಾಟ್…

ನರೇಂದ್ರ ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗಲ್ಲ : ಸಿದ್ದರಾಮಯ್ಯ

ಕುಮಾರಸ್ವಾಮಿ ಅಪ್ಪನ ಮೇಲೆ ಆಣೆ ಇಟ್ಟಿದಾಯ್ತು..ಈಗ ಮೋದಿ ಅಪ್ಪನ ಮೇಲಾಣೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಪ್ಪನಾಣೆ ಹಾಕುವುದು ಅಂದ್ರೆ ಅದೇನು ಪ್ರೀತಿಯೋ ಗೊತ್ತಿಲ್ಲ. ಯಾವುದಾದರೂ ಚುನಾವಣೆ ಹತ್ತಿರದಲ್ಲಿದೆ ಅಂದ್ರೆ ಸಾಕು, ಅಪ್ಪನಾಣೆ ಶುರುವಿಟ್ಟುಕೊಳ್ಳುತ್ತಾರೆ. ಇದೀಗ ತಂದೆಯ ಸುದ್ದಿಗೆ ಹೋಗಿರುವ ಸಿದ್ದರಾಮಯ್ಯ, ಬಿಜೆಪಿ ತಿಪ್ಪರಲಾಗ ಹಾಕಿದರೂ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರೋದಿಲ್ಲ. ನರೇಂದ್ರ ಮೋದಿಯವರು ಅವರಪ್ಪನ ಆಣೆಗೂ ಮತ್ತೆ ಪ್ರಧಾನಿಯಾಗಲ್ಲ ಎಂದು ಮಾಜಿ ಸಿಎಂ…

ಅರಣ್ಯಧಿಕಾರಿಗಳ ಮೇಲೆ ಬಿಜೆಪಿ ಶಾಸಕನ ಗೂಂಡಾಗಿರಿ..!

 ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಮೂಡಿಗೆರೆ ಶಾಸಕರು ಗೂಂಡಾ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನನ್ನ ಫೋನ್ ರಿಸೀವ್ ಮಾಡ್ದೆ ಇದ್ರೆ ಆಫೀಸ್ ಬಾಗಿಲು ಹಾಕಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಂ.ಪಿ ಕುಮಾರಸ್ವಾಮಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಈ ಸಂಬಂಧದ ವಿಡಿಯೋ ಒಂದು ಮಾಧ್ಯಮಗಳ ಕೈಗೆ ಸಿಕ್ಕಿದ್ದು, ಕುಡಿದ ಮತ್ತಿನಲ್ಲಿ…

ಸೂಪರ್ ಸಿಎಂ ದರ್ಬಾರ್ : ಶಿಷ್ಟಾಚಾರ ಉಲ್ಲಂಘಿಸಿ ವೇದಿಕೆಯಲ್ಲಿ ಮಗನನ್ನು ಕೂರಿಸಿದ ರೇವಣ್ಣ

ಸರ್ಕಾರಿ ಕಾರ್ಯಕ್ರಮ ಅಂದ ಮೇಲೆ ಅಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ವೇದಿಕೆಯಲ್ಲಿ ಕೂರಬೇಕು ಅನ್ನುವುದು ನಿಯಮ. ಈ ಇಬ್ಬರನ್ನೂ ಹೊರತುಪಡಿಸಿದರೆ ಅಧಿಕೃತವಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣವಾದವರಿಗೆ ವೇದಿಕೆ ಹತ್ತಲು ಅವಕಾಶ.ಅದು ಶಿಷ್ಟಾಚಾರ. ಆದರೆ ನಮ್ಮ ರಾಜಕಾರಣಿಗಳಿಂದ ಶಿಷ್ಟಚಾರಕ್ಕೆ ಬೆಲೆ ಸಿಗುತ್ತದೆ ಅಂದುಕೊಂಡರೆ ಅದು ನಮ್ಮ ಮೂರ್ಖತನ. ರಾಜಕಾರಣಿಗಳ ಬೆಂಬಲಿಗರೇ ಚೆಯರ್ ಎಳೆದುಕೊಂಡು ತಮ್ಮ ನಾಯಕನ ಹಿಂದೆ ವಿರಾಜಮಾನರಾಗುತ್ತಾರೆ. ಅದ್ಯಾವ ಪಕ್ಷದ…

ಕಚ್ಚಾಡಿಕೊಳ್ಳುತ್ತಿದ್ದ ಹಳೆಯ ದೋಸ್ತಿಗಳು ಮತ್ತೆ ಒಂದಾದ್ರು

ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ – ಶಿವಸೇನೆ ಲೋಕಸಭಾ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಂಡಿದ್ದು, ಸ್ಥಾನ ಹಂಚಿಕೆಯನ್ನೂ ಘೋಷಣೆ ಮಾಡಿವೆ. ಸೋಮವಾರ (ಫೆ.18)ದಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲೋಕಸಭಾ ಚುನಾವಣೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಯಶಸ್ವಿಯಾಗಿದ್ದು, ಬಿಜೆಪಿ ಮಹಾರಾಷ್ಟ್ರದಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ….