Category: Politics

ಪ್ರಾಮಾಣಿಕ ಅಧಿಕಾರಿಗಳು ಗಡಿ ಕಾಯಲು ಹೋಗಬೇಕಂತೆ

ಅಂಬಿಡೆಂಟ್ ಪ್ರಕರಣದಲ್ಲಿ ಜೈಲು ವಾಸ ಮುಗಿಸಿ ಹೊರ ಬಂದಿರುವ ಜನಾರ್ಧನ ರೆಡ್ಡಿ ತನ್ನ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ದೂರಿದ ಜನಾರ್ಧನ ರೆಡ್ಡಿ ಸಿಸಿಬಿ ಹಿರಿಯ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ತನ್ನದೇ ಶೈಲಿಯಲ್ಲಿ ಅಧಿಕಾರಿಗಳ ಎಡವಟ್ಟುಗಳಿಗೆ ಚಾಟಿ ಬೀಸಿದ…

ರೆಡ್ಡಿ ಜೈಲು ಪಾಲಾಗಿರುವುದಕ್ಕೆ ಸಿದ್ದರಾಮಯ್ಯ ಹೇಳಿದ್ದೇನು..?

57 ಕೆಜಿ ಚಿನ್ನದ ಗಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಭಾನುವಾರ ಮತ್ತೆ ಜೈಲು ಸೇರಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಕಾನೂನು ಎಲ್ಲರಿಗೂ ಒಂದೇ….

ಬಿಜೆಪಿಯ ಡಿಕೆಶಿಯಾಗ್ತಾರ ಕಮಲ ಪಾಳಯದ ಸಾಮ್ರಾಟ್…..

ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಬಿಜೆಪಿಗೆ ತಕ್ಕ ಪಾಠವೇ ಸರಿ. ಈ ಬಾರಿ ಮೈತ್ರಿ ಪಕ್ಷಗಳು ಗೆದ್ದಿದೆ. ಹಾಗಂತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಜನ ಒಪ್ಪಿಕೊಂಡಿದ್ದಾರೆ ಎಂದು ಅರ್ಥವಲ್ಲ. ಒಂದು ವೇಳೆ ಜನ ಮೈತ್ರಿಯನ್ನು ಒಪ್ಪಿಕೊಂಡಿದ್ದರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಬೇಕಿತ್ತು. ಮಂಡ್ಯದಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಅವರಿಗೆ ಇನ್ನಷ್ಟು ಲಕ್ಷ ಮತಗಳು ಬರಬೇಕಾಗಿತ್ತು. ಇನ್ನುಳಿದಂತೆ…

ಪುತ್ರ ಶೋಕ ನಿರಂತರ –  ಜನಾರ್ಧನ ರೆಡ್ಡಿಗೂ ಟಿಎ ಶರವಣ ಅವರಿಗೂ ವ್ಯತ್ಯಾಸವೇನಿದೆ..?

ಈ ಬಾರಿಯ ಉಪಚುನಾವಣೆಯಲ್ಲಿ ರಾಜಕಾರಣಿಗಳ ಮಾತಿನ ಸಮರ ನೋಡಿದರೆ ಛೀ..ಥೂ ಅನ್ನಿಸುತ್ತಿದೆ. ಪ್ರಜಾತಂತ್ರದಲ್ಲಿ ಚುನಾವಣೆಗಳು ಪ್ರಣಾಳಿಕೆಯ ಆಧಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ನಡೆಯಬೇಕು. ಆದರೆ ಈ ಬಾರಿ ವೈಯುಕ್ತಿಕ ವಿಷಯಗಳೇ ಮೇಳೈಸುತ್ತಿದೆ. ಅದರಲ್ಲೂ ಜನಾರ್ಧನ ರೆಡ್ಡಿ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ವಿಚಾರ ಪ್ರಸ್ತಾಪಿಸಿರುವುದನ್ನು ನಾಗರಿಕ ಅನ್ನಿಸಿಕೊಂಡವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದ್ಯಾವ ಶತ್ರುವೇ ಇರಲಿ ಇಂತಹ ಮಾತುಗಳನ್ನು ಜನಾರ್ಧನ ರೆಡ್ಡಿ ಹೇಳಬಾರದಿತ್ತು. ಪುತ್ರ…

ಕುರುಬರಾಗಿರುವ ಸಿದ್ದರಾಮಯ್ಯ ಬೀಫ್ ತಿನ್ನುತ್ತಾರೆಯೇ..?

ರಾಜ್ಯ ಹಾಗೂ ದೇಶದಲ್ಲಿ ಕುರುಬ ಸಮುದಾಯದವರು ಗೋಮಾಂಸ ತಿನ್ನುವುದಿಲ್ಲ,ಸಿದ್ದರಾಮಯ್ಯ ಅವರದ್ದು ಬೀಫ್‌ ತಿನ್ನುವ ಮನೆತನವೇ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ. ಟಿ. ರವಿ ಪ್ರಶ್ನಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಕುರುಬರು ದೈವ ನಿಷ್ಠೆ ಇರುವವರು, ಅವರು ಗೋವಿನ ಪೂಜೆ ಮಾಡುತ್ತಾರೆ. ನಾನು ಕುರುಬ ಅನ್ನುವುದು ಅದೇ ಕಾಲಕ್ಕೆ ದನದ ಮಾಂಸ…

ಕೇರಳ : ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್

ಕೇರಳ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಸಂಜೆ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನು ಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್, ಟ್ರಾವಂಕೂರು ದೇವಸ್ವಮ್ ಬೋರ್ಡ್ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಿ. ರಾಮನ್ ನಾಯರ್ ಬಿಜೆಪಿ ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. “ನಾನು…

ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಾಲಿಡದಂತೆ ಮಾಡಲು ಯತ್ನಿಸಿತೇ ಪಿಣರಾಯಿ ಸರ್ಕಾರ..?

ಶನಿವಾರ ಕೇರಳ ರಾಜ್ಯಕ್ಕೆ ಭೇಟಿ ಕೊಟ್ಟ ರಾಜ್ಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೊಸದೊಂದು ಇತಿಹಾಸ ಬರೆದಿದ್ದಾರೆ. ಕಣ್ಣೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಮೊಟ್ಟ ಮೊದಲ ಪ್ರಯಾಣಿಕನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಪೂರ್ವನಿಗದಿತ ಕಾರ್ಯಕ್ರಮದನ್ವಯ ಬಿಜೆಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11.50ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಈ ಮೂಲಕ ಉದ್ಘಾಟನೆಗೂ…

ಲೇಟ್ ಲತೀಫ್ – ಮುಖ್ಯಮಂತ್ರಿಯನ್ನೇ ಬಿಟ್ಟು ಹೋದ ಪೈಲೆಟ್

ಸಿಎಂ ಕುಮಾರಸ್ವಾಮಿ ಹೆಲಿಪ್ಯಾಡ್‌ಗೆ ನಿಗದಿತ ಸಮಯಕ್ಕೆ ಬಂದಿಲ್ಲ ಎಂದು ಸಿಎಂ ಅವರನ್ನು ಬಿಟ್ಟು ಹೆಲಿಕಾಪ್ಟರ್‌ ಬೆಂಗಳೂರಿಗೆ ತೆರಳಿದ ಘಟನೆ ಶನಿವಾರ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಸಿಎಂ 3.35ಕ್ಕೆ  ಶ್ರವಣಬೆಳಗೊಳ ಹೆಲಿಪ್ಯಾಡ್‌ ಗೆ ಬರಬೇಕಾಗಿತ್ತು. ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು ಪ್ರಚಾರ ಮುಗಿಸಿ ಕೆ.ಆರ್‌.ಪೇಟೆ ಮಾರ್ಗವಾಗಿ ಶ್ರವಣಬೆಳಗೊಳ ಹೆಲಿಪ್ಯಾಡ್‌ಗೆ…

ಮುಖ್ಯಮಂತ್ರಿಗಳಿಗೆ ಅಧಿಕಾರ ಹಂಚಿಕೆ ಸೂತ್ರದ ಪಾಠ ಮಾಡಿದ ಕೆಪಿಸಿಸಿ ಅಧ್ಯಕ್ಷರು

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಆರೋಪ ಇಂದು ನಿನ್ನೆಯದಲ್ಲ. ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಇದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ ಯಾವಾಗ ಉಪಚುನಾವಣೆ ಬಿಸಿ ಕಾವೇರತೊಡಗಿತೋ…ಕಾರ್ಯಕರ್ತರ ಆಕ್ರೋಶದ ಬಿಸಿ ಪಕ್ಷದ ನಾಯಕರಿಗೆ ತಟ್ಟಿದೆ. ಇನ್ನು ಸುಮ್ಮನಿದ್ದರೆ ಕಾರ್ಯಕರ್ತರು ಕೈ ಕೊಡುವುದು ಗ್ಯಾರಂಟಿ ಅನ್ನುವುದು ಅರ್ಥವಾಗಿದೆ. ಹೀಗಾಗಿ ಆಗಿರುವ ಎಡವಟ್ಟನ್ನು ಅದನ್ನು ಸರಿಪಡಿಸಲು ಕಾಂಗ್ರೆಸ್ ಮುಂದಾಗಿದೆ. ಸರ್ಕಾರದಲ್ಲಿ…

ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ದೇವೇಗೌಡರಿಂದ ಸಿಕ್ತು ಆಯುಧ ಪೂಜೆ ಗಿಫ್ಟ್ …

ಜೆಡಿಎಸ್​ ರಾಜ್ಯಾಧ್ಯಕ್ಷರಾಗಿರುವ ಹುಣಸೂರು ಶಾಸಕ ಹೆಚ್​.ವಿಶ್ವನಾಥ್​ ಅವರಿಗೆ ಪಕ್ಷ ಸಂಘಟನಾ ಕಾರ್ಯಕ್ಕಾಗಿ ಆಯುಧ ಪೂಜೆಯಂದು ದೇವೇಗೌಡರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಮುಂಬರುವ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಸಿದ್ದತೆ ಸಲುವಾಗಿ ಅವರಿಗೆ ಹೊಸ ಇನ್ನೋವಾ ಕ್ರಿಸ್ಟಾ ಕಾರು ನೀಡಲಾಗಿದೆ. ಪದ ಸಂಘಟನೆ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿದೆ. ಹೀಗಾಗಿ  ಹೊಸ ಕಾರು ಬೇಕು ಎಂದು ರಾಷ್ಟ್ರಾಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ…

ಮಧ್ಯರಾತ್ರಿ ಕಾರ್ಯಾಚರಣೆ : ಮಧು ಕೈಗೆ ಭಿ ಪಾರಂ ಸಿಕ್ಕಾಗ ಮುಂಜಾನೆ 4 ಗಂಟೆ

ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಯಡಿಯೂರಪ್ಪ ಪುತ್ರನನ್ನು ಸೋಲಿಸಿದರೆ, ಯಡಿಯೂರಪ್ಪರನ್ನು ರಾಜಕೀಯ ಅಖಾಡದಲ್ಲಿ ಮಣ್ಣು ಮುಕ್ಕಿಸಿದಂತಾಗುತ್ತದೆ. ಅದರಿಂದ ಆಗುವ ಲಾಭಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ಅರಿತಿರುವ ದೊಡ್ಡ ಗೌಡರು ದೊಡ್ಡ ದಾಳವನ್ನೇ ಉರುಳಿಸಿದ್ದಾರೆ. ಹಾಗಂತ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ದೇವೇಗೌಡರಿಗೆ ಸುಲಭವಾಗಿತ್ತು ಅಂದುಕೊಂಡರೆ ಸುಳ್ಳು. ಕಾಂಗ್ರೆಸ್ ಇಲ್ಲಿ ಅಭ್ಯರ್ಥಿಗಾಗಿ ಹೇಗೆ…

ಅನಿತಾಕ್ಕ ಹೆಸರಿನಲ್ಲಿದೆ ಹಾರ್ಲೆ ಡೆವಿಡ್ ಸನ್ ಬೈಕ್…..?

ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿರುವ ವಿವರ ಪ್ರಕಾರ ಅವರ ಕುಟುಂಬದ ಆಸ್ತಿ ಬರೋಬ್ಬರಿ 167 ಕೋಟಿ ರೂಪಾಯಿ. 2013ರಲ್ಲಿ…