Category: News

ನಟ ವಿಜಿ ಮೇಲೆ ರೌಡಿಶೀಟರ್ ತೆರೆಯಲು ಪೊಲೀಸರಿಂದ ಸಿದ್ದತೆ

ನಟ ದುನಿಯಾ ವಿಜಿ ಒಳ್ಳೆಯ ಕೆಲಸಗಳಿಂದ ಸುದ್ದಿಯಾಗಿದ್ದು ಕಡಿಮೆ, ನೆಗೆಟಿವ್ ಕಾರಣದಿಂದ ಸುದ್ದಿಯಾಗಿದ್ದೇ ಹೆಚ್ಚು. ತನ್ನ ವೈಯುಕ್ತಿಕ ಜೀವನವಿರಬಹುದು, ಸಿನಿಮಾ ರಂಗವಿರಬಹುದು. ಅದರಲ್ಲೂ ಕಾನೂನು ಹಾಗೂ ಪೊಲೀಸರೊಂದಿಗೆ ದುನಿಯಾ ವಿಜಿ ನಿಯತ್ತಿನಿಂದ ವರ್ತಿಸಿದ್ದು ಕಡಿಮೆ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡಿರುವ ಪೊಲೀಸರು, ಜಿಮ್ ಟ್ರೈನರ್ ಮಾರುತಿಗೌಡ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದ ಬೆನ್ನಲ್ಲೇ ನಟ ದುನಿಯಾ ವಿಜಯ್…

ಮಾಜಿ ಯೋಧನಿಗೆ ಅವಾಜ್ ಹಾಕಿದ್ದ ಕರಿ ಚಿರತೆ ವಿಜಿ

ಪೊಲೀಸ್ ಅಧಿಕಾರಿಗಳ ಮುಂದೆ ತಾನೊಬ್ಬ ನಟ, ಸೆಲೆಬ್ರೆಟಿ ಅನ್ನುವುದನ್ನು ಮರೆತ ದುನಿಯಾ ವಿಜಿ ಅಟ್ಟಹಾಸ ಮೆರೆದಿದ್ದಾರೆ. ಘಟ್ಟ ಹತ್ತಿದ್ದರೂ ಹುಟ್ಟು ಗುಣ ಸುಟ್ಟು ಹೋಗುವುದಿಲ್ಲ ಅನ್ನುವ ಗಾದೆ ಮಾತಿಗೆ ಸರಿಯಾಗಿ ವರ್ತಿಸಿದ್ದಾರೆ. ಹೈಗ್ರೌಂಡ್ ಪೊಲೀಸ್ ಠಾಣೆ ಮುಂದೆ ಅಟ್ಟಹಾಸ ಮೆರೆದ ಕರಿ ಚಿರತೆ ಇಂದು ಕಂಬಿ ಎಣಿಸಲೇಬೇಕು.ಭಾನುವಾರವಾಗಿರುವ ಕಾರಣ ಬೇಲ್ ಸಿಗುವುದಿಲ್ಲ. ಈ ನಡುವೆ ಮಾಜಿ ಯೋಧರೊಬ್ಬರನ್ನು ಬೆದರಿಸಿರುವ ಆರೋಪ ದುನಿಯಾ…

ಮೋದಿ ಭೇಟಿ ಹಿಂದಿನ ರಹಸ್ಯ ಅನಾವರಣ ಮಾಡಿದ ಮೋಹನ್ ಲಾಲ್

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಚಿತ್ರ ನಟ ಮೋಹನ್ ಲಾಲ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಅವತ್ತೇ ಅವರು ಭೇಟಿಯ ಬಗ್ಗೆ ಹೇಳಿದ್ದರೂ ಕೂಡಾ, ಅದು ರಾಜಕೀಯ ಬಣ್ಣ ಪಡೆದುಕೊಂಡಿತ್ತು. ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಶಶಿ ತರೂರ್ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ಬರುವಷ್ಟು ಸುದ್ದಿಗಳು ಬರಲಿ ಎಂದು ಕಾದಿದ್ದ ಮೋಹನ್ ಲಾಲ್…

ಬಾಯಿಯಿಂದ ಬೆಂಕಿ ಹತ್ತಿಸಲು ಹೋಗಿ ವಿದ್ಯಾರ್ಥಿ ಸಾವು

ಬಾಯಿಯಿಂದ ಬೆಂಕಿ ಹೊತ್ತಿಸುವ ವಿದ್ಯೆ ಕಲಿಯಲು ಹೋದ 15 ವರ್ಷದ ಯುವಕನೊಬ್ಬನನ್ನು ಅದೇ ಅಗ್ನಿಯ ಕೆನ್ನಾಲಿಗೆ ಬಲಿ ತೆಗೆದುಕೊಂಡ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ. ಶುಕ್ರವಾರ ಮೊಹರಂ ಕಾರಣದಿಂದ ರಜೆ ಇದ್ದ ಕಾರಣ ಮನೆಯ ತಾರಸಿಯಲ್ಲಿ ಈ ತಂತ್ರ ಕಲಿಯುವ ಪ್ರಯತ್ನ ಮಾಡಿದ್ದಾನೆ. ಬಾಯಿಗೆ ಸೀಮೆ ಎಣ್ಣೆ ತುಂಬಿಸಿ ಬಳಿಕ ಬೆಂಕಿ ಕಡ್ಡಿ ಹಚ್ಚಿ ಬಾಯಿಯ ಮುಖಾಂತರ ಸೀಮೆಎಣ್ಣೆ ಊದಲು ಯತ್ನಿಸಿದ್ದಾನೆ….

ರಾಮ..ರಾಮಾ..ಲೇಡಿ ರೌಡಿ ಶೀಟರ್ ಗೆ ಶ್ರೀರಾಮಸೇನೆ ಮಹಿಳಾ ಅಧ್ಯಕ್ಷೆ ಪಟ್ಟ

ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಶಸ್ವಿನಿ ಗೌಡ ಅವರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇಮಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ ಅವರನ್ನು ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಯಶಸ್ವಿನಿ ಗೌಡ ರೌಡಿ ಶೀಟರ್ ಆಗಿದ್ದು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ…

ಒಂದೇ ಒಂದು ವಿದ್ಯಾರ್ಥಿನಿಗಾಗಿ ಮತ್ತೆ ಶಾಲೆ ತೆರೆದ ಸರ್ಕಾರ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಒಬೆನಹಳ್ಳಿಯಲ್ಲಿ 1978ರ ಹೊತ್ತಿಗೆ ನಿರ್ಮಾಣ ಗೊಂಡ ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಆಗೆಲ್ಲಾ ಖಾಸಗಿ ಶಾಲೆಗಳ ದರ್ಬಾರು ಶುರುವಾಗಿರಲಿಲ್ಲ. 2010ರಲ್ಲೂ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿತ್ತು. ಆದರೆ ಸುತ್ತ ಮುತ್ತ ಖಾಸಗಿ ಶಾಲೆಗಳು ಹೆಚ್ಚಾಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಆರ್’ಟಿಇ ಕಾಯ್ದೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯ್ತು ಎಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ದೂಷಿಸಿದರು 2016-17…

ಕಾಲು ಕೆಜಿ ಸ್ವೀಟ್ ಗಾಗಿ ಕ್ಯೂ ಕಟ್ಟಿ ನಿಂತ ಜನ

ಜನ ನೋಟ್ ಬ್ಯಾನ್ ಆದ ವೇಳೆ ಬಾಯಿಗೆ ಬಂದಂತೆ ಟೀಕಿಸಿದರು. ಎಟಿಎಂ ಮುಂದೆ ನಿಂತು ಕಾಲು ನೋವು ಎಂದು ಕಣ್ಣೀರು ಹಾಕಿದರು. ಆದರೆ ಮಲ್ಲೇಶ್ವರಂನಲ್ಲಿ ಕಾಲು ಕೆಜಿ ಸ್ವೀಟ್ ಗಾಗಿ ಜನ ಕ್ಯೂ ನಿಂತ ಪರಿ ಇದೆಯಲ್ಲ ಅದ್ಭುತ. ಮಲ್ಲೇಶ್ವರಂ ಸಿಟಿಆರ್ ಬಳಿ ಇರುವ ಶ್ರೀಕೃಷ್ಣ ಸ್ವೀಟ್ಸ್ ಅಂಗಡಿಯವರು ಮೈಸೂರು ಪಾ ಅನ್ನುವ ಸ್ವೀಟ್ ಅನ್ನು ರಿಯಾಯತಿ ದರ ಕೊಡ್ತೀನಿ ಎಂದು…

ನಿರೀಕ್ಷಿಸಿದಷ್ಟು ಮಕ್ಕಳನ್ನು ಪಡೆಯಬೇಕಾ..ಹೀಗೆ ಮಾಡಿ

ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಂಶೋಧನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸಂಶೋಧನೆಯ ವರದಿಯಲ್ಲಿ, ಸಾಮಾನ್ಯ ಮಹಿಳೆಯರಿಗೆ ಹೋಲಿಕೆ ಮಾಡಿದರೆ, 5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಹೆಚ್ಚೆಚ್ಚು ಮಕ್ಕಳಾಗುತ್ತವೆ ಎಂದು ಹೇಳಲಾಗಿದೆ. 5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಸಂತಾನ ಶಕ್ತಿ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಸಂಶೋಧನೆ ಖಚಿತ ಪಡಿಸಿದೆ….

ಅಕ್ಟೋಬರ್ 29ರ ವರೆಗೆ ಮಂಗಳೂರು ಬೆಂಗಳೂರು ರೈಲು ಓಡುವುದಿಲ್ಲ

ಬೆಂಗಳೂರು: ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 29ರವರೆಗೆ ಬೆಂಗಳೂರು-ಮಂಗಳೂರು ಮಧ್ಯೆ ರೈಲ್ವೆ ಸಂಚಾರ ರದ್ದಾಗಲಿದೆ. ಕೆಂಪೇಗೌಡ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ -ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16511/16513 ರೈಲು ಅಕ್ಟೋಬರ್ 28ರವರೆಗೆ, ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16517/ 16523 ಅಕ್ಟೋಬರ್ 25ರವರೆಗೆ, ಕಣ್ಣೂರು/ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್…

ಕುಮಾರಸ್ವಾಮಿಗಳೇ ರಸ್ತೆ ಗುಂಡಿ ಮುಚ್ಚಿಸಲು ಹೈಕೋರ್ಟ್ ಬರಬೇಕಾಯ್ತಲ್ಲ

ನಿಜಕ್ಕೂ ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಕೋರ್ಟ್ ಗಳಿಗೆ ಮಾಡಬೇಕಾದ ಕೆಲಸ ಸಾವಿರಾರಿದೆ. ಆದರೆ ಜನಪ್ರತಿನಿಧಿಗಳಾದವರು ಬದುಕಿದ್ದಾರೆಯೇ ಅನ್ನುವ ಪ್ರಶ್ನೆ ಉದ್ಭವಿಸಿದ ಕಾರಣ ಜನರ ಜೀವ ಉಳಿಸಲು, ನಗರದ ಸೌಂದರ್ಯ ಕಾಪಾಡಲು ಹೈಕೋರ್ಟ್ ಮಧ್ಯ ಪ್ರವೇಶ ಮಾಡುವಂತಾಗಿದೆ. ಈಗಾಗಲೇ ಫ್ಲೆಕ್ಸ್, ಬ್ಯಾನರ್ ಕುರಿತಂತೆ ಖಡಕ್ಕ್ ಆದೇಶ ಕೊಟ್ಟಿರುವ ಹೈಕೋರ್ಟ್, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗುರುವಾರ ಸಂಜೆ…