Advertisements

Category: News

ಕೇರಳಕ್ಕೆ ಹರಿದು ಬಂದ ಸಹಾಯವೆಷ್ಟು ಗೊತ್ತಾ…?

ದೇವರನಾಡು ಕೇರಳ ಪ್ರವಾಹದೊಂದಿಗೆ ಸೆಣಸಾಡುತ್ತಿದೆ.ಶತಮಾನದಲ್ಲಿ ಕಂಡರಿಯದ ಮಳೆ ಕೇರಳವನ್ನು ಜರ್ಜರಿತವನ್ನಾಗಿ ಮಾಡಿದೆ.ಈಗಿನ ಅಂದಾಜಿನ ಪ್ರಕಾರ 19,512 ಕೋಟಿ ನಷ್ಟ ಅಂದಾಜಿಸಲಾಗಿದೆ.ಆದರೆ ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ.ಯಾಕೆಂದರೆ ಇದು ಪ್ರಾಥಮಿಕ ಅಂದಾಜು ಪಟ್ಟಿ. ಈ ನಡುವೆ ಕೇರಳಕ್ಕೆ ಸಹಾಯ ಕೂಡಾ ಮಹಾ ಪ್ರವಾಹದಂತೆ ಹರಿದು ಬರುತ್ತದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.ಜೊತೆಗೆ ಕೇಂದ್ರ ಸರ್ಕಾರದ ಹಲವು…

Advertisements

ಕರ್ನಾಟಕ ಏಳು ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಗಳನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿತಾಭಸ್ಮವನ್ನು ಇಂದು ಕುಟುಂಬಸ್ಥರು ಸಂಗ್ರಹಿಸಿದ್ದಾರೆ. ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಧಾರ್ಮಿಕ ವಿಧಿ ವಿಧಾನಗಳ ನಂತರ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ…

ಕೊಡಗಿನವರು ಮನುಷ್ಯರಲ್ವ ಮೋದಿಯವರೇ…?

ಕರ್ನಾಟಕವನ್ನು ಮೋದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನುವ ಆರೋಪ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಇಂತಹ ಆರೋಪಗಳು ಕೇಳಿ ಬಂದಿದೆ. ಇದೀಗ ಕೊಡಗು ಜನರ ಆಕ್ರೋಶ ಮೋದಿಯತ್ತ ತಿರುಗಿದೆ. ಕೇರಳ ಹೋಗಿ ಬಂದ ಮೋದಿ 500 ಕೋಟಿ ಮಧ್ಯಂತರ ಘೋಷಣೆ ಮಾಡಿ ಬಂದಿದ್ದಾರೆ. ಆದರೆ ಕರ್ನಾಟಕ ಕಡದ ಮೋದಿ ನೋಡಿಯೇ ಇಲ್ಲ. ನಾವೇನೂ ಮನುಷ್ಯರಲ್ವ, ಕರ್ನಾಟಕ ಭಾರತದಲ್ಲಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ….

ದೇವರು ಮುನಿದ ನಾಡು – ನಾಯಿ ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಸಾವು

ಕೇರಳದಲ್ಲಿ ಮರಣ ಮಳೆ ಅಬ್ಬರಿಸುತ್ತಿದೆ. ಈ ನಡುವೆ ಪ್ರಕೃತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದೆ. ಆದರೆ ಅಪಾಯವನ್ನು ಲೆಕ್ಕಿಸದ ರಕ್ಷಣಾ ಪಡೆಗಳು ಜನರತ್ತ ಧಾವಿಸುತ್ತಿದೆ. ಈ ನಡುವೆ ಪ್ರವಾಹಕ್ಕೆ ಸಿಲುಕಿದ್ದ ಸಾಕು ನಾಯಿಗಳನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ರಾಜ್ಯದ ಮಲಪ್ಪುರಂನ ಪೆರಿಗಂವು ಎಂಬಲ್ಲಿ ನಡೆದಿದೆ. ಮನೆ ಮಾಲೀಕ ಶುಭ ಸಮಾರಂಭಕ್ಕೆ ಎಂದು ಹೊರಗಡೆ…

ಕೊಡಗಿಗೆ ಸ್ಪಂದಿಸಿದ ನ್ಯೂಸ್ ಚಾನೆಲ್ ಗೆ ಧನ್ಯವಾದ – ಎಂಟರ್ ಟೈನ್ ಮೆಂಟ್ ಚಾನೆಲ್ ಗಳಿಗೆ ಧಿಕ್ಕಾರ

ಮರಣ ಮಳೆಗೆ ತತ್ತರಿಸಿದ ರಾಜ್ಯದ ಸುದ್ದಿವಾಹಿನಿಗಳು ಕೇವಲ ಸುದ್ದಿಯನ್ನು ಪ್ರಸಾರ ಮಾಡಲಿಲ್ಲ. ನಮ್ಮ ಸಹೋದರರು ಸಂಕಷ್ಟದಲ್ಲಿದ್ದಾರೆ ಅನ್ನುವಂತೆ ನೆರವಿನ ಹಸ್ತ ಚಾಚಿದೆ. ಆ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಸುದ್ದಿ ವಾಹಿನಿಗಳು ತೋರಿಸಿದೆ. ಪಬ್ಲಿಕ್ ಟಿವಿ, ಸುವರ್ಣ, ಟಿವಿ9 ಬಿಟಿವಿ ವಾಹಿನಿ ಸೇರಿದಂತೆ ಇತರ ಸುದ್ದಿ ವಾಹಿನಿಗಳ ಕೆಲಸವನ್ನು ಮೆಚ್ಚಲೇಬೇಕು. ಕೇವಲ TRP ಗಾಗಿ ಕಿತ್ತಾಡಿ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದ ವಾಹಿನಿಗಳು, ಸಂಕಷ್ಟದಲ್ಲಿರುವ…

ಆಹಾರ ಧಾನ್ಯ- ಬಟ್ಟೆಯನ್ನು ಕೊಡಗಿಗೆ ಕಳುಹಿಸಬೇಡಿ – ಔಷಧಿ, ನಗದು ಈಗಿನ ಆದ್ಯತೆ

ವರುಣದೇವನ ಆಕ್ರೋಶ ತುತ್ತಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ಕಳಿಸಬೇಡಿ, ಬಟ್ಟೆ ಬರೆಗಳನ್ನು ಕೂಡಾ ಕಳುಹಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅದರ ಬದಲಾಗಿ ಔಷಧಿ, ನಗದು ರೂಪದಲ್ಲಿ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದಾರೆ. ಆಹಾರ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಸರ್ಕಾರದ ಸಹಾಯದೊಂದಿಗೆ ಜಿಲ್ಲಾಡಳಿತ ಮಾಡುತ್ತಿದೆ. ಬಟ್ಟೆ ಬರೆಗಳು ಮತ್ತು ಆಹಾರ…

ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….!

ಹೆಡ್ ಲೈನ್ ನೋಡಿ ಏನಪ್ಪ ಇದು ಎಂದು ಅಚ್ಚರಿಯಾಗಬಹುದು. ಹೌದು ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ತನ್ನದೇ ಒಡೆತನದ ಪಬ್ಲಿಕ್ ಟಿವಿಯನ್ನು ಬೋಗಸ್ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಡ್ಯಾಂ ಗಳಲ್ಲಿ ಬಿರುಕು ಬಂದಿದೆ ಅನ್ನುವ ವದಂತಿಗಳ ಕುರಿತಂತೆ ಮಾತನಾಡಿದ ರಂಗನಾಥ್ ಅವೆಲ್ಲವೂ ಬೋಗಸ್..ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸುವವರ ಕಪಾಳಕ್ಕೆ ಹೊಡೆಯರಿ ಎಂದು ಹೇಳಿದ್ದಾರೆ. ದುರಂತ ಅಂದರೆ ರಂಗನಾಥ್ ಹೀಗೆಲ್ಲಾ ಮಾತನಾಡುತ್ತಿರಬೇಕಾದರೆ,ಅವರದ್ದೇ…

ಕೇರಳಕ್ಕೆ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ ಮೋದಿ

ದೇವರನಾಡಿನಲ್ಲಿ ದೇವರು ಮುನಿದಿದ್ದಾನೆ. ಅಬ್ಬರಿಸುತ್ತಿರುವ ಮಳೆಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಈ ನಡುವೆ ನಿನ್ನೆ ರಾತ್ರಿ ಕೇರಳ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಮುಂಗಾರು ಮಳೆಯಿಂದ ಹಾನಿಯಾಗಿರುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೇರಳ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇರಳ ರಾಜ್ಯಕ್ಕೆ ರೂ.500…

ಜೈಜಗದೀಶ್ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

ಚಿತ್ರನಟ ಜೈಜಗದೀಶ್​ ಅವರ ಕಾರು ಅಪಘಾತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಅವರು, ತಾವೇ ಕಾರ್ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಜೈಜಗದೀಶ್ ಅವರ ತಲೆ ಹಾಗೂ ಮುಖಕ್ಕೆ ತೀವ್ರ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ…

ಸೆಲೆಬ್ರೆಟಿಗಳೇ ಎಚ್ಚೆತ್ತುಕೊಳ್ಳಿ – ಕಿಕಿ ಎಂದು ಕೇಕೆ ಹಾಕಿದ ನಿವೇದಿತಾ ಹೊಸ ಚಾಲೆಂಜ್ ಸ್ವೀಕರಿಸೋದಿಲ್ವ..?

ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಗಳಿಗೆ ಭರವಿಲ್ಲ. ಆದರೆ ಸಮಾಜಕ್ಕೆ ಅದರಿಂದ ನಯಾ ಪೈಸೆ ಲಾಭವಿಲ್ಲ, ಐಸ್ ಬಕೆಟ್ ಅಂತೆ, ಕೀಕೀ ಡ್ಯಾನ್ಸ್ ಅಂತೆ… ಹೀಗೆ ಕಂತೆ ಕಂತೆ ಸವಾಲುಗಳು. ಆದರೆ ನಟ ಸಿದ್ದಾರ್ಥ್ ಈ ಚಾಲೆಂಜ್ ಗೆ ಹೊಸ ರೂಪ ಕೊಟ್ಟಿದ್ದಾರೆ. ಕಂಗೆಟ್ಟಿರುವ ಕೇರಳಕ್ಕೆ ಸಹಾಯಕ್ಕೆ ಮಾಡಿ ತೋರಿಸಿ ಎಂದು ಚಾಲೆಂಜ್ ಹಾಕಿದ್ದಾರೆ. ಮಾತ್ರವಲ್ಲದೆ ತಾವೇ 10 ಲಕ್ಷ ರೂಪಾಯಿ ಹಣವನ್ನು…