ಕೊಟ್ಟ ಹಣ ವಾಪಾಸ್ಸು ಕೇಳಿದ ಕಾರಣಕ್ಕೆ ಉದ್ಯಮಿಯೊಬ್ಬರ ಕೊಲೆಗೆ ಕನ್ನಡದ ನಟಿಯೊಬ್ಬಳು ಸುಪಾರಿ ಕೊಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಆಯೋಗ್ಯ ಚಿತ್ರದಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡಿದ್ದ ದೃಶ್ಯ ಮೇಲೆ ಕೊಲೆ ಆರೋಪ ಬಂದಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಉಡುಪಿ ಮೂಲಕ ರಾಜೇಶ್ ಶೆಟ್ಟಿ ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಟಿ ದೃಶ್ಯ ಮತ್ತು ರಾಜೇಶ್ ಶೆಟ್ಟಿ ಕಳೆದ 7 ತಿಂಗಳಿಂದ ಪರಿಚಯಸ್ಥರು. ರಾಜೇಶ್ ಹೇಳುವ ಪ್ರಕಾರ ದೃಶ್ಯ ತಂದೆಯಿಂದ ಈ ಪರಿಚಯ ಪ್ರಾರಂಭವಾಗಿದೆಯಂತೆ. ಈ ವೇಳೆ ದೃಶ್ಯ ತಂದೆಯ ಮಾತನ್ನು ನಂಬಿದ ರಾಜೇಶ್ ಲಕ್ಷ ಗಟ್ಟಲೆ ಹಣವನ್ನು ದೃಶ್ಯಳಿಗೆ ಕೊಟ್ಟಿದ್ದಾನೆ.
ಆದರೆ ದೃಷ್ಯ ನಡವಳಿಕೆ ಬಗ್ಗೆ ಅನುಮಾನಗೊಂಡ ರಾಜೇಶ್ ಕೊಟ್ಟ ವಾಪಾಸ್ ಕೇಳಲು ಹೈದ್ರಬಾದ್ ಗೆ ಹೋಗಿದ್ದಾರೆ ಈ ವೇಳೆ ಅವರ ಮೇಲೆ ತಮ್ಮ ಮೇಲೆ ಹಲ್ಲೆ ಮತ್ತು ಪೊಲೀಸ್ ದೂರು ದಾಖಲಾಗಿದೆ ಎಂದು ಹೇಳಿರುವ ರಾಜೇಶ್ ಇದೀಗ ದೃಶ್ಯ ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಕೆ ಆರ್ ಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಲಮುರಿ ಸಮೀಪ ರಾಜೇಶ್ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್ ದೇಹವನ್ನು ರೇಜರ್ ನಿಂದ ಘಾಸಿಗೊಳಿಸಲಾಗಿದೆ. ಈ ವೇಳೆ ‘ದೃಶ್ಯ ಬಳಿ ಹಣ ಕೇಳ್ತೀಯಾ’ ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಗಾಯಗೊಂಡ ರಾಜೇಶ್ ಕಿರುಚಾಟ ಕೇಳಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿವೆ. 7 ತಿಂಗಳಲ್ಲಿ ಪರಿಚಯವಾದ ತಕ್ಷಣ ಲಕ್ಷ ಗಟ್ಟಲೆ ದುಡ್ಡು ಕೊಡಲು ತಲೆ ಕೆಟ್ಟಿತ್ತಾ. ಇನ್ನು ಕಾಸು ಕೊಟ್ಟಿರುವುದು ಯಾವುದೇ ಸಾಕ್ಷಿ ಇಲ್ವಂತೆ. ಸಾಕ್ಷಿ ಇ್ಲಲದೆ ಉದ್ಯಮಿ ಕಾಸು ಕೊಟ್ಟಿದ್ದಾನೆ ಅಂದ ಮೇಲೆ ಅಲ್ಲೇನೋ ನಡೆದಿದೆ ಅನ್ನುವುದು ಪಕ್ಕಾ.
Discussion about this post