ಕೇಂದ್ರ ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ Captain Amarinder singh ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ. ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದ ಕ್ಯಾಪ್ಟನ್ ಅವರನ್ನು ಮನವೊಲಿಸಲು ಹಲವು ಕೈ ನಾಯಕರು ಆಗಮಿಸಿದ್ದರು.
ಆದರೆ ಅವರಿಗೆಲ್ಲಾ ಒಂದೇ ಸಾಲಿನಲ್ಲಿ ಉತ್ತರಿಸಿರುವ ಅವರು ಇನ್ನೂ ಅವಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪಕ್ಷ ಬಿಡುತ್ತೇನೆ ಅಂದಿದ್ದಾರೆ.
ಇನ್ನು ತಾವು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವುದರ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಪ್ಟನ್ ಅಮರೆಂದರ್ ಸಿಂಗ್, ನಾನು ಕಾಂಗ್ರೆಸ್ ಬಿಡುತ್ತಿದ್ದೇನೆ, ಹಾಗಂತ ಬಿಜೆಪಿ ಸೇರುವುದಿಲ್ಲ ಅಂದಿದ್ದಾರೆ. ಹಾಗಾದ್ರೆ ಪಂಜಾಬ್ ಕಾಂಗ್ರೆಸ್ ನಾಯಕನ ಮುಂದಿನ ನಡೆಯೇನು ಅನ್ನುವುದೇ ಕುತೂಹಲ.
Discussion about this post