ಬೆಂಗಳೂರು : ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಗ್ರಾಹಕರಿಗೆ ಮೋಸ ಮಾಡಿದ್ದ ಥಿಂಕ್ ಅಂಡ್ ಲರ್ನ್ ಸಂಸ್ಥೆ ಬೈಜೂಸ್ APP ಗೆ ಗ್ರಾಹಕರ ಹಕ್ಕುಗಳ ವೇದಿಕೆ ಸರಿಯಾದ ಪಾಠ ಕಲಿಸಿದೆ.
ಜಾಲಹಳ್ಳಿ. ನಿವಾಸಿ ಸುಜ್ ಮೋನ್ 2019ರ ಮೇ 29 ರಂದು 42,044 ರೂಪಾಯಿ ಕೊಟ್ಟು ಬೈಜೂಸ್ APP ಖರೀದಿಸಿದ್ದರು.
ಜೂನ್ 12 ರಂದು ನಿಮ್ಮ APP ನಮಗೆ ತೃಪ್ತಿ ಕೊಟ್ಟಿಲ್ಲ, ಹೀಗಾಗಿ APP ನೋಂದಣಿ ರದ್ದುಗೊಳಿಸುತ್ತಿದ್ದೇವೆ ಎಂದು ಇ – ಮೇಲ್ ಮೂಲಕ ಮನವಿ ಮಾಡಿದ್ದರು.
ಸಂಸ್ಥೆಯೇ ಕೊಟ್ಟಿರುವ ಭರವಸೆ ಪ್ರಕಾರ ನೋಂದಣಿಯಾದ 15 ದಿನಗಳ ಒಳಗೆ ಸೇವೆ ತೃಪ್ತಿದಾಯಕವಾಗಿಲ್ಲವಾದರೆ ಸಂಪೂರ್ಣ ಮೊತ್ತ ಹಿಂದಿರುಗಿಸಲಾಗುತ್ತದೆ.
ಆದರೆ ಸುಜ್ ಮೋನ್ ಪ್ರಕರಣ ಹಾಗಾಗಿಲ್ಲ, ಕಳುಹಿಸಿದ ಮೇಲ್ ಗೆ ಉತ್ತರ ಬರಲಿಲ್ಲ ಎಂದು, ಲಾಯರ್ ನೊಟೀಸ್ ಕಳುಹಿಸಿದ್ರೆ ಅದಕ್ಕೂ ಕ್ಯಾರೆ ಅನ್ನಲಿಲ್ಲ.
ಕೊನೆಗೆ ಗ್ರಾಹಕರ ಹಕ್ಕುಗಳ ವೇದಿಕೆ ಹತ್ತಿದ್ದ ಸುಜ್ ಮೋನ್ ಆಗಿರೋ ಮೋಸವನ್ನು ವಿವರಿಸಿದ್ದಾರೆ.
ಇದೀಗ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ಹಕ್ಕುಗಳ ವೇದಿಕೆಯ ಅಧ್ಯಕ್ಷ ಎಸ್ ಎಲ್ ಪಾಟೀಲ್, ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಪಿಕೆ ಶಾಂತ ಅವರ ತ್ರಿಸದಸ್ಯ ಪೀಠ ಗ್ರಾಹಕರು ಪಾವತಿಸಿರುವ ಸಂಪೂರ್ಣ ಮೊತ್ತ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 5 ಸಾವಿರ ರೂಪಾಯಿಗಳನ್ನು ನೀಡುವಂತೆ ನಿರ್ದೇಶಿಸಿದೆ.
Discussion about this post