2050ರ ವೇಳೆಗೆ ಇಡೀ ವಿಶ್ವದಲ್ಲಿ ಕೈಸ್ತರು ಮತ್ತು ಮುಸ್ಲಿಮರ ಜನಸಂಖ್ಯೆ ಒಂದೇ ಆಗಿರಲಿದೆ ಎಂದು ಅಮೇರಿಕಾದ ಚಿಂತಕರ ಚಾವಡಿ ‘ಫ್ಯೂ’ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಜೊತೆಗೆ ಜಗತ್ತಿನಲ್ಲೇ ಅತೀ ಹೆಚ್ಚು ಮುಸ್ಲಿಮರಿರುವ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ ಅನ್ನುವ ಮಾಹಿತಿಯನ್ನು ಕೂಡಾ ಈ ಸಂಶೋಧನೆ ನೀಡಿದೆ. ಪ್ರಸ್ತುತ ಇಂಡೋನೇಷ್ಯಾ ಅತೀ ಹೆಚ್ಚು ಮುಸ್ಲಿಮರು ಇರುವ ದೇಶ ಎಂದು ಗುರುತಿಸಿಕೊಂಡಿದೆ.
ಇದೇ ಸಂಶೋಧನೆ ಭಾರತ ಧರ್ಮ ಸಹಿಷ್ಣು ದೇಶವಾಗಿದ್ದು, ಇತರ ಧರ್ಮಗಳನ್ನು ಗೌರವಿಸುತ್ತಾರೆ. ಇದು ಭಾರತೀಯ ತತ್ವಗಳ ಮೂಲವಾಗಿದೆ. ಎಲ್ಲಾ ಧರ್ಮಿಯರು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದೆ. ಭಾರತದಲ್ಲಿರುವ ಪ್ರಮುಖ 6 ಧರ್ಮಗಳ ಮಂದಿಯನ್ನು ಈ ಸಂಶೋಧನೆಯಲ್ಲಿ ಪ್ರಶ್ನಿಸಲಾಗಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್, ಮತ್ತು ಬೌದ್ಧರು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಅಂದಿದ್ದಾರೆ.

ಈ ಸಮೀಕ್ಷೆ ಪ್ರಕಾರ ಶೇ97ರಷ್ಟು ಮಂದಿ ಭಾರತೀಯರು, ತಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ ಅಂದಿದ್ದಾರೆ. ಶೇ72ರಷ್ಟು ಮಂದಿ ಹಿಂದೂಗಳು ಗೋಮಾಂಸ ತಿನ್ನುವವರು ಹಿಂದೂಗಳಲ್ಲ ಅಂದಿದ್ದಾರೆ. ಶೇ66ರಷ್ಟು ಮಂದಿ ಹಿಂದೂಗಳು ಅಂತರ್ ಧರ್ಮಿಯ ವಿವಾಹವನ್ನು ವಿರೋಧಿಸಿದ್ದಾರೆ. ಶೇ78ರಷ್ಟು ಭಾರತೀಯ ಮುಸ್ಲಿಮರು ಅಂತರ್ ಧರ್ಮಿಯ ಮದುವೆಗೆ ಒಪ್ಪಿಗೆ ಇಲ್ಲ ಅಂದಿದ್ದಾರೆ. ಶೇ95ರಷ್ಟು ಹಿಂದುಗಳು, ದೀಪಾವಳಿಯೇ ನಮ್ಮ ಅತ್ಯಂತ ದೊಡ್ಡ ಹಬ್ಬ ಅಂದಿದ್ದಾರೆ.
ಇನ್ನು ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾದರೂ ಹಿಂದೂಗಳೇ ಬಹುಸಂಖ್ಯಾತರೆಂದು ಸಮೀಕ್ಷೆ ಹೇಳಿದ್ದು, ಈಗಿನ ಮಟ್ಟಿಗೆ ಕ್ರೈಸ್ತ ಧರ್ಮವೇ ವಿಶ್ವದ ಅತೀ ದೊಡ್ಡ ಧರ್ಮ ಅಂದಿದೆ. ಇನ್ನು ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕಾ ಮತ್ತು ಫ್ರಾನ್ಸ್ ನಲ್ಲಿ ಅತ್ಯಂತ ಹೆಚ್ಚು ನಾಸ್ತಿಕರಿದ್ದಾರಂತೆ.
ಒಟ್ಟಿನಲ್ಲಿ ಭಾರತದಲ್ಲಿ ನೆಮ್ಮದಿ ಇಲ್ಲ, ಭಾರತವನ್ನು ದೊರೆಯಬೇಕು ಅನ್ನಿಸುತ್ತಿದೆ ಎಂದು ಪ್ರಶಸ್ತಿ ವಾಪಾಸ್ ಕೊಟ್ಟವರಿಗೆ ಈ ಸಂಶೋಧನೆ ಉತ್ತರವೊಂದನ್ನು ಕೊಟ್ಟಿದೆ.
Discussion about this post