ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೇನಾಗುತ್ತದೋ ಅನ್ನುವ ಆತಂಕದ ಕರಿ ಮೋಡ ಆವರಿಸಿದೆ. ಭಾರತ ಸರ್ಕಾರ ಸೇನಾ ಪಡೆಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದು, ಉಗ್ರರನ್ನು ಸದೆ ಬಡಿಯಿರಿ ಎಂದು ರಣ ವೀಳ್ಯ ಕೊಟ್ಟಿದೆ.
ಆದರೆ ರಾಜಕಾರಣಿಗಳು ಯುದ್ದದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾರಂಭಿಸಿದ್ದಾರೆ.
ಅದರಲ್ಲೂ ನಾಚಿಕೆಗೇಡಿನ ಹೇಳಿಕೆ ಬಂದಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಡೆಯಿಂದ, ನಿನ್ನೆ ಮಾತನಾಡಿದ್ದ ಅವರು ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ನಾಶ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.
ನಿಜಕ್ಕೂ ಯಡಿಯೂರಪ್ಪ ಅವರಿಗೆ ಪ್ರಬುದ್ಧತೆ ಅನ್ನುವುದು ಇರುತ್ತಿದ್ರೆ ಈ ಹೇಳಿಕೆ ಅವರ ಬಾಯಿಂದ ಬರುತ್ತಿರಲಿಲ್ಲ. ಹೋಗ್ಲಿ ಬಾಯಿ ತಪ್ಪಿ ಮಾತು ಬಂದು ಅನ್ನುವುದಾಗಿದ್ರೆ, ಇಂದು ದೇಶದ ಕ್ಷಮೆ ಕೇಳಬಹುದಿತ್ತು. ಆದರ ಬದಲಾಗಿ ರಾಯಚೂರಿನಲ್ಲಿ ಇಂದು ಹೇಳಿಕೆ ಕೊಟ್ಟಿರುವ ಯಡಿಯೂರಪ್ಪ ‘ನಾನು ನೀಡಿದ ಹೇಳಿಕೆ ತಿರುಚಲಾಗಿದೆ’ ಅಂದಿದ್ದಾರೆ.
ಬುಧವಾರ ಕೊಟ್ಟ ಹೇಳಿಕೆಗೆ ವಿಡಿಯೋ ಸಾಕ್ಷಿ ಇದೆ. ಪಾಕಿಸ್ತಾನದಲ್ಲೂ ಸುದ್ದಿಯಾಗಿರುವ ಯಡಿಯೂರಪ್ಪ ಸೈನಿಕ ಶ್ರಮವನ್ನು ನೀರಿನಲ್ಲಿಟ್ಟ ಹೋಮ ಮಾಡಲು ಹೊರಟಿದ್ದಾರೆ. ಇಂತಹ ರಾಜಕಾರಣಿಗಳು ನಮಗೆ ಮುಖ್ಯಮಂತ್ರಿಯಾಗಬೇಕಾ..?
ಇನ್ನು ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಬಾಯಿಗೆ ಬೀಗ ಹಾಕಲಾಗದ ನಾಯಕ, ದೇಶದ ಪ್ರಧಾನಿಯಾಗಲು ಸಾಧ್ಯವೇ. ಸೈನಿಕರು ತಮ್ಮ ಮನೆ ಮಂದಿಯನ್ನು ದೇಶ ಕಾಯಲು ಜೀವ ತೊರೆಯಲು ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರ ಪಕ್ಷಗಳು ಸೈನಿಕರನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಅನ್ನುತ್ತಿದೆ.
ಈ ವೇಳೆ ಬೇಕಾಗಿರುವುದು ಏಕತೆಯ ಮಂತ್ರವೇ ಹೊರತು ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯವಲ್ಲ. ಆದರೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಸೈನ್ಯದ ಕಾರ್ಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಹೇಳಿಕೆ ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.
ಏನೇ ಮಾಡಿ ಕೇಂದ್ರ ಸರ್ಕಾರ ಮತ್ತು ದೇಶದ ಜನತೆಯೊಂದಿಗೆ ನಾವಿದ್ದೇವೆ ಅನ್ನಬೇಕಾಗಿದ್ದ ಪ್ರತಿಪಕ್ಷಗಳು ರಾಜಕೀಯದ ಮಾತುಗಳನ್ನಾಡುತ್ತಿದೆ. ಸೇನೆ ಮಾಡಿದ ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಅನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದೆ.
ಈಗ ಹೇಳಿ ರಾಹುಲ್ ಗಾಂಧಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಯಾರು ಬಯಸುತ್ತಾರೆ.
ಸೈನ್ಯದ ವಿಚಾರದಲ್ಲಿ ರಾಜಕೀಯ ಮಾತನಾಡುವ ಯಾವುದೇ ರಾಜಕಾರಣಿ ಇರಲಿ, ಒಂದು ಮಾತು ಅವರಿಗೆ just shut up
Discussion about this post