Thursday, March 4, 2021

ಬ್ರಿಟನ್ ವೈರಸ್ ವಿಚಾರದಲ್ಲಿ ಬೆಂಗಳೂರಿನಿಂದ ಬಂದಿದೆ ಗುಡ್ ನ್ಯೂಸ್

Must read

- Advertisement -
- Advertisement -

ಕೊರೋನಾ ಸೋಂಕಿನ ನಿಯಂತ್ರಣ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕರ್ನಾಟಕ ಇದೀಗ ಮತ್ತೊಂದು ವಿಚಾರದಲ್ಲೂ ಸಾಧನಗೈದಿದೆ.

ಅಪಾಯಕಾರಿ ಅನ್ನಲಾದ ಕೊರೋನಾದ ಬ್ರಿಟನ್ ಪ್ರಬೇದದ ವೈರಸ್ ಮಣಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

ಹೀಗಾಗಿ ಬ್ರಿಟನ್ ವೈರಸ್ ಭೀತಿ ನಿಧಾನವಾಗಿ ಮರೆಯಾಗಲಾರಂಭಿಸಿದೆ.

ಡಿಸೆಂಬರ್ 25 ರಿಂದ ಜನವರಿ 24ರ ಅವಧಿಯಲ್ಲಿ 7308 ಮಂದಿ ರಾಜ್ಯಕ್ಕೆ ಆಗಮಿಸಿದ್ದರು. ಈ ಪೈಕಿ 50 ಮಂದಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಅದರಲ್ಲಿ 14 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿತ್ತು. ಬಳಿಕ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಎಲ್ಲಾ 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 26 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾದವರು ಕೂಡಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬ್ರಿಟನ್ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ತಡವಾಗಿ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ  ಸೋಂಕು ನಿಯಂತ್ರದ ಕ್ರಮಗಳನ್ನು ಕೈಗೆತ್ತಿಕೊಂಡಿತ್ತು. ಕೊರೋನಾ ಪರೀಕ್ಷೆ, ಕ್ವಾರಂಟೈನ್, ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಿತರ ಪತ್ತೆ ಕಾರ್ಯವನ್ನು ಕೂಡಾ ಮಾಡಲಾಗಿತ್ತು.

ಬ್ರಿಟನ್ ವೈರಸ್ ಮಣಿಸಿದ್ದೇವೆ ಅನ್ನುವ ಕಾರಣಕ್ಕೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಬ್ರಿಟನ್ ನಲ್ಲಿ ಕೊರೋನಾ ಸೋಂಕು ಮತ್ತಷ್ಟು ಅಬ್ಬರಿಸುತ್ತಿದೆ. ಹೀಗಾಗಿ ವಿದೇಶದಿಂದ ಬರುವವರ ಮೇಲೆ ನಿಗಾ ಇಡುವ ಪ್ರಕ್ರಿಯೆ ಮುಂದುವರಿಯಬೇಕು. ಬ್ರಿಟನ್ ಮಾತ್ರವಲ್ಲದೆ ಎಲ್ಲಾ ದೇಶಗಳಿಂದ ಬಂದು ವಿಮಾನ ಇಳಿದವರನ್ನು ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಇದ್ರೆ ಮಾತ್ರ ಮನೆಗೆ ಕಳುಹಿಸಬೇಕು. ಆಗ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ.

- Advertisement -
- Advertisement -
- Advertisement -

Latest article