20.2 C
Bengaluru
Saturday, January 16, 2021

ಉಗ್ರ ಹೊಡೆದ ಗುಂಡು ಪ್ರಾಣ ಹಿಂಡುತ್ತಿದ್ದರೂ, ಇಬ್ಬರು ಉಗ್ರರ ರುಂಡ ಚೆಂಡಾಡಿದ ಮೇಜರ್

Must read

ಭಾರತದ ಸೇನೆಯಲ್ಲಿರುವ ವೀರಯೋಧರ ಸಾಹಸಗಾಥೆಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಮನೆ, ಮಠ, ಮಡದಿ, ಮಕ್ಕಳು ಎಲ್ಲವನ್ನೂ ಮರೆತು ದೇಶಕ್ಕಾಗಿ ಉಸಿರು ಚೆಲ್ಲುವ ವೀರ ಸೇನಾನಿಗಳ ಸಾಹಸವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.

ಹೀಗೆ ಮತ್ತೊಬ್ಬ ವೀರ ಸೈನಿಕ ದೇಹದೊಳಗೆ ಹೊಕ್ಕ ಶತ್ರುವಿನ ಗುಂಡನ್ನು ಲೆಕ್ಕಿಸದೇ ಉಗ್ರರ ಮೇಲೆ ಮುಗಿಬಿದ್ದು ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ರಷಿಯಾಬಾದ್ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್ ನಲ್ಲಿ ಮಂಗಳವಾರ ಪಾಪಿ ಪಾಕಿಸ್ತಾನದ ಕೃಪಾಪೋಷಿತ ಉಗ್ರರು ದಾಳಿ ನಡೆಸಿದ್ದರು. ಈ ಪೈಕಿ ಬುಧವಾರ ಮೂವರು ಉಗ್ರರ ತಂಡವನ್ನು ಮೇಜರ್ ಕೌಸ್ತುಭ್ ಪ್ರಕಾಶ್ ರಾಣೆ ತಂಡ ಸುತ್ತುವರೆದಿತ್ತು.

ಈ ವೇಳೆ ಮೇಜರ್ ಕೌಸ್ತುಭ್ ಪ್ರಕಾಶ್ ರಾಣೆಯ ತಂಡ ಉಗ್ರರ ಮೇಲೆ ಗುಂಡಿನ ಮಳೆಗರೆದಿತ್ತು. ಭಾರತೀಯ ಸೈನಿಕರು ಈ ವೇಳೆ ಇಬ್ಬರು ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಿಧಿಗೆ ಮೇಜರ್ ಕೌಸ್ತುಭ್ ಅವರ ಸಾಹಸ ನೋಡಿ ಹೊಟ್ಟೆ ಉರಿದಿತ್ತು. ಇಬ್ಬರು ಉಗ್ರರನ್ನು ಹೊಡೆದುರುಳಿಸುವ ವೇಳೆಗಾಗಲೇ ಅವರ ದೇಹಕ್ಕೆ ಉಗ್ರನೋರ್ವ ಸಿಡಿಸಿದ್ದ ಗುಂಡು ಹೊಕ್ಕಿತ್ತು. ಆದರೆ ಅದರ ಅರಿವೇ ಇಲ್ಲದೇ ಮೇಜರ್ ಕೌಸ್ತುಭ್ ರಾಣೆ ಉಗ್ರರ ವಿರುದ್ಧ ಹೋರಾಟ ಮುಂದುವರಿಸಿದರು. ಮಾತ್ರವಲ್ಲದೆ ದೇಹ ಹೊಕ್ಕ ಗುಂಡು ಪ್ರಾಣ ಹಿಂಡುತ್ತಿದ್ದರೂ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದರು.

ಬಳಿಕ ರಕ್ತದ ಮಡುವಿನಲ್ಲಿ ಬಿದ್ದ ಕೌಸ್ತುಭ್ ರಾಣೆ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಇದೇ ಕದನದಲ್ಲಿ ಇತರ ಮೂವರು ಸೈನಿಕರೂ ಹುತಾತ್ಮರಾಗಿದ್ದಾರೆ.

ಮಹಾರಾಷ್ಟ್ರದ ಮೂಲದ ಮೇಜರ್ ಕೌಸ್ತುಭ್ ರಾಣೆ ಅವರು, ರಕ್ಷಣಾ ಇಲಾಖೆ ಪರೀಕ್ಷೆಗಳನ್ನು ಪೂರ್ಣಗೊಳಿಸಿ, 2011ರಲ್ಲಿ ಚೆನ್ನೆನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಬಳಿಕ ರಾಷ್ಟ್ರೀಯ 36 ರೈಫಲ್ಸ್ ವಿಭಾಗಕ್ಕೆ ಆಯ್ಕೆಯಾದ ಕೌಸ್ತುಭ್ ರಾಣೆ 6 ವರ್ಷ ಸೇವೆ ಸಲ್ಲಿಸಿ ಮೇಜರ್ ಹುದ್ದೆಗೆ ಆಯ್ಕೆಯಾಗಿದ್ದರು.

ಇನ್ನು ಬಾರಾಮುಲ್ಲಾ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಮೇಜರ್ ಕೌಸ್ತುಬ್ ರಾಣೆ ಅವರ ಅಂತ್ಯಕ್ರಿಯೆ ಮಹಾರಾಷ್ಟದ ಥಾಣೆಯಲ್ಲಿ ನಡೆಯಿತು. ಥಾಣೆಯ ಪ್ರತಿಷ್ಟಿತ ಮೀರಾ ರೋಡ್ ನಲ್ಲಿ ಮೇಜರ್ ಕೌಸ್ತುಬ್ ನಿವಾಸವಿದ್ದು, ಅಲ್ಲಿಂದಲೇ ಅವರಿಗೆ ಹೂವಿನ ಮಳೆಗರೆಯುವ ಮೂಲಕ ಅವರನ್ನು ಭಾವಾನತ್ಮಕವಾಗಿ ಬೀಳ್ಕೊಡಲಾಯಿತು.

rane

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article