ಉಡುಪಿ : ಪರಶುರಾಮ ಸೃಷ್ಟಿಯ ನಾಡು ಎಂದೇ ಪ್ರಸಿದ್ಧವಾಗಿರುವ ಕರಾವಳಿಯಲ್ಲಿ ಇದೀಗ ಪವಾಡಗಳದ್ದೇ ಸುದ್ದಿ. ಕೊರಗಜ್ಜ ಪವಾಡದ ಬೆನ್ನಲ್ಲೇ ಇದೀಗ ಉಡುಪಿಯಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ.
ಕುಂದಾಪುರ ತಾಲೂಕು ಬಿಲ್ಲಾಡಿಯ ಕದ್ರಂಜೆಯ ಮಹಾಲಿಂಗೇಶ್ವರ ದೇವಾಲಯ ಒಂದು ಕಾಲದಲ್ಲಿ ಸಾಕಷ್ಟು ಪ್ರಸಿದ್ಧವಾಗಿತ್ತು. ದೇವಾಲಯದ ಪ್ರಾಂಗಣ ಒಂದು ಕಾಲದಲ್ಲಿ ಶಾಲೆಯಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾ ದಾನ ನಡೆದಿತ್ತು. ಆದರೆ ಕಾಲ ಕ್ರಮೇಣ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋಯಿತು. ದೇವಸ್ಥಾನ ಪಾಳು ಬಿದ್ದಿತ್ತು.

ಇತ್ತೀಚೆಗೆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲು ಮಹಾ ಶಿವನಿಂದ ಆದೇಶವಾದ ಹಿನ್ನಲೆಯಲ್ಲಿ ಊರಿನ ಯುವಕರು ಮುಂದೆ ನಿಂತು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಪ್ರಶ್ನಾ ಚಿಂತನೆ, ಅಷ್ಟಮಂಗಲ ನಡೆಸಿದಾಗ ಭೂ ಗರ್ಭದಲ್ಲಿ ದೇವಾಲಯದ ಗರ್ಭಗುಡಿ ನೆಲ ಸಮವಾಗಿರುವುದು ಗೊತ್ತಾಗಿದೆ. ಹೀಗಾಗಿ ಪ್ರಶ್ನಾ ಚಿಂತನೆಯಲ್ಲಿ ಬಂದ ಸಲಹೆಯಂತೆ ಗರ್ಭಗುಡಿಗಾಗಿ ಶೋಧ ನಡೆಸಿದಾಗ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಈ ಬೆಳವಣಿಗೆ ಇದೀಗ ದೇವಸ್ಥಾನ ನವೀಕರಣಕ್ಕೆ ಹೊರಟವರಿಗೆ ಆನೆ ಬಲ ತಂದುಕೊಟ್ಟಿದೆ.
Discussion about this post