ಬೆಂಗಳೂರು : ಸರ್ಕಾರಗಳು ಬದಲಾಗುತ್ತಿದ್ದಂತೆ ಪಡಿತರ ನಿಯಮಗಳು ಕೂಡಾ ಬದಲಾಗುತ್ತಿರುತ್ತದೆ. ಹೀಗಾಗಿ ಜನಸಾಮಾನ್ಯರು ಪ್ರತೀ ವರ್ಷ ಪರದಾಡುತ್ತಲೇ ಇರಬೇಕಾಗುತ್ತದೆ. ಕೆಲ ದಿನಗಳ ಹಿಂದೆ ಟಿವಿ, ಫ್ರಿಡ್ಜ್ ಇದ್ರೆ ಬಿಪಿಎಲ್ ಕಾರ್ಡ್ ಇಲ್ಲ ಅಂದ್ರು, ಮತ್ತೊಮ್ಮೆ ದ್ವಿಚಕ್ರ ವಾಹನ ಇದ್ರೆ BPL ಕಾರ್ಡ್ ರದ್ದು ಅಂದ್ರು. ಒಂದು ನಿರ್ದಿಷ್ಟ ನಿಯಮಗಳನ್ನು ರೂಪಿಸಲು ಸರ್ಕಾರ ಸಾಧ್ಯವಾಗಿಲ್ಲ.
ಇನ್ನು ಇದೇ ಸರ್ಕಾರ ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ಗಳನ್ನು ಕೊಟ್ಟಿತ್ತು. ಇದೀಗ ಅನರ್ಹರಿಂದ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಕೊಟ್ಟ ಅಧಿಕಾರಿಗೆ ಮಾತ್ರ ಶಿಕ್ಷೆಯಿಲ್ಲ.
ವಾರ್ಷಿಕ 1. 20 ಲಕ್ಷ ಆದಾಯ ಹೊಂದಿದವರು, ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಹೊಂದಿದ್ದರೆ, ಮೂರು ಎಕರೆ ಒಣಭೂಮಿ ಹೊಂದಿದ್ದರೆ ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಹೊಂದಿದ್ದರೆ, ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ.
ಈಗಾಗಲೇ ಈ ಸಂಬಂಧ ಬಿಪಿಎಲ್ ಕಾರ್ಡ್ ಹಿಂತಿರುಗಿಸುವಂತೆ ಸೂಚಿಸಲಾಗಿದ್ದು ಕೆಲವರು ಹಿಂತಿರುಗಿಸಿದ್ದಾರೆ. ಈ ಪ್ರಕಾರ ಕೆಲವರು ಕಾರ್ಡ್ ಹಿಂದಿರುಗಿಸಿದ್ದಾರೆ, ಇನ್ನೂ ಅನೇಕರು ಅನರ್ಹರು ಕಾರ್ಡ್ ಹೊಂದಿದ್ದಾರೆ. ಅವರಿಂದ ಕಾರ್ಡ್ ಹಿಂಪಡೆಯಲು ಆಹಾರ ಇಲಾಖೆ ನಿರ್ಧರಿಸಿದೆ.
Discussion about this post