ಹೊಸಪೇಟೆ : ದಶಕಗಳ ಹೋರಾಟದ ಫಲವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ಜನ್ಮ ತಳೆದಿರುವ ರಾಜ್ಯದ ವಿಜಯನಗರ ಜಿಲ್ಲೆ ಇಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.ಜಿಲ್ಲೆ ಉದ್ಘಾಟನೆ ಹಿನ್ನಲೆಯಲ್ಲಿ ಅಕ್ಟೋಬರ್ 2 ಹಾಗೂ 3 ರಂದು ವಿಜಯನಗರ ಉತ್ಸವ ಕೂಡಾ ನಡೆಯಲಿದೆ.
ಹಂಪಿಯ ಹೆಬ್ಬಾಗಿಲು ಅನ್ನಿಸಿಕೊಂಡಿರುವ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆ ಘೋಷಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉಪಸ್ಥಿತರಿರುತ್ತಾರೆ.
ಇನ್ನು ಜಿಲ್ಲಾ ಉದ್ಘಾಟನಾ ಸಮಾರಂಭಕ್ಕಾಗಿ ವಿಜಯನಗರದ ಗತ ವೈಭವ ಮರುಕಳಿಸುವಂತೆ ಶ್ರೀವಿದ್ಯಾರಣ್ಯ ವೇದಿಕೆ ನಿರ್ಮಾಣವಾಗಿದ್ದು, ಮಾತಂಗ ಪರ್ವತದ ವಿಹಂಗಮ ನೋಟ ಹಾಗೂ ಶ್ರೀವಿರೂಪಾಕೇಶ್ವರ ದೇಗುಲದ ರಾಜಗೋಪರ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯಲ್ಲಿ ಕಲ್ಲಿನ ರಥ, ಉಗ್ರ ನರಸಿಂಹ ವಿನ್ಯಾಸವನ್ನು ಕೂಡಾ ಕಾಣಬಹುದಾಗಿದ್ದು, ಮಹಾನವಮಿ ದಿಬ್ಬದ ಮಾದರಿಯಲ್ಲಿ ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.ವಿಜಯನಗರ ಜಿಲ್ಲೆ ಸಚಿವ ಆನಂದ್ ಸಿಂಗ್ ಅವರ ಹೋರಾಟದ ಫಲವಾಗಿದ್ದು, ಹೀಗಾಗಿ ಇಡೀ ಕಾರ್ಯಕ್ರಮದ ಯಶಸ್ವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಅವರು ಓಡಾಡುತತಿದ್ದಾರೆ.
ವಿಜಯನಗರ ಜಿಲ್ಲೆಯ ಇತಿಹಾಸ
1997ರಲ್ಲಿ ಕೊಪ್ಪಳ ಜಿಲ್ಲೆ ರಚನೆಯಾಗುವ ಸಂದರ್ಭದಲ್ಲೇ ಹೊಸಪೇಟೆಯನ್ನು ಕೇಂದ್ರವಾಗಿರಿಸಿ ಜಿಲ್ಲೆ ರಚನೆ ಮಾಡಬೇಕು ಅನ್ನುವ ಆಗ್ರಹವಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ಆಗಿನ ಮುಖ್ಯಮಂತ್ರಿ ಜೆಎಚ್ ಪಟೇಲರನ್ನು ಭೇಟಿಯಾಗಿದ್ದ ನಿಯೋಗ ಜಿಲ್ಲೆ ರಚನೆಗೆ ಮನವಿ ಮಾಡಿತ್ತು. ಬಳಿಕ ನಡೆದ ಹೋರಾಟಕ್ಕೆ ರಾಜಕೀಯ ಬಲ ಸಿಗಲಿಲ್ಲ.
ಇನ್ನು ರೆಡ್ಡಿಗಳು ರಾಜಕೀಯ ಪ್ರಾಬಲ್ಯಕ್ಕೆ ಬಂದಾಗ ಬಳ್ಳಾರಿಯನ್ನು ಒಡೆದು ಮತ್ತೊಂದು ಜಿಲ್ಲೆ ರಚನೆ ಮಾಡುವುದು ಸಾಧ್ಯವೇ ಇರಲಿಲ್ಲ. ಹಾಗಿದ್ದರೂ 2005ರಲ್ಲಿ ಧರಂಸಿಂಗ್ ಸಿಎಂ ಆಗಿದ್ದ ವೇಳೆ ಜಿಲ್ಲೆಗಾಗಿ ಹೋರಾಟ ತೀವ್ರವಾಯ್ತು. ಆಗ್ಲೂ ಮನವಿ ಸಲ್ಲಿಸಿದ ಜಿಲ್ಲಾ ಹೋರಾಟ ಸಮಿತಿ 100 ದಿನಗಳ ಕಾಲ ನಿರಂತರ ಹೋರಾಟ ನಡೆಸಿತು. ಆದರೆ ಫಲ ಸಿಗಲಿಲ್ಲ.
ಯಾವಾಗ ಆನಂದ್ ಸಿಂಗ್ ಹೋರಾಟಕ್ಕೆ ಕೈ ಜೋಡಿಸಿದರೋ, ಹೋರಾಟದ ದಿಕ್ಕು ಬದಲಾಯ್ತು. ರಾಜಕೀಯ ಸ್ಥಾನ ಮಾನ ತ್ಯಾಗಕ್ಕ ಮುಂದಾದ ಸಿಂಗ್, ಯಡಿಯೂರಪ್ಪ ಜೊತೆ ಕೈ ಜೋಡಿಸಿದರು. ಜೊತೆಗೆ ಜಿಲ್ಲೆಯನ್ನೂ ಪಡೆದರು.
Karnataka’s 31st district of Vijayanagara will be officially unveiled by Chief Minister Basavaraj Bommai on October 2 (Gandhi Jayanti). In February
Discussion about this post