Saturday, May 15, 2021
spot_img

ಕಮ್ಯೂನಿಸ್ಟರ secularism : ಮುಸ್ಲಿಮರು ದೇವಸ್ಥಾನ ಪ್ರವೇಶಿಸುವಂತಿಲ್ಲ – ದೇವರನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದ ಬೋರ್ಡ್

Must read

- Advertisement -
- Advertisement -

ಕೇರಳ : ಹಿಂದೂಗಳಲ್ಲದವರಿಗೆ ದೇವರನಾಡಿನ ಬಹುತೇಕ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ಕೇರಳದ ಸಾಕಷ್ಟು ದೇವಸ್ಥಾನಗಳು ಹಿಂದೂಯೇತರರು ದೇವಸ್ಥಾನ ಪ್ರವೇಶಿಸುವ ಹಾಗಿಲ್ಲ ಎಂದು ಬೋರ್ಡ್ ಹಾಕಿದೆ.

ಆದರೆ ಇದೀಗ ಕಣ್ಣೂರು ಜಿಲ್ಲೆಯ ಕುಂಜ್ಞಿಮಂಗಳಂನ ಶ್ರೀ ಮಲಿಯೊಟ್ಟು ಪಾಲೊಟ್ಟು ಕಾವು ದೇವಸ್ಥಾನದಲ್ಲಿ ಹಾಕಿರುವ ಬೋರ್ಡ್ ವಿವಾದದ ಕಿಡಿ ಹೊತ್ತಿಸಿದೆ. ಧರ್ಮವೊಂದನ್ನು ಟಾರ್ಗೇಟ್ ಮಾಡಿಯೇ ಈ ಬೋರ್ಡ್ ಹಾಕಿರುವುದೇ ವಿವಾದಕ್ಕೆ ಕಾರಣ. ಅಂದ ಹಾಗೇ ಈ ಬೋರ್ಡ್ ಅನ್ನು ಈ ವರ್ಷ ಅಳವಡಿಸಿರುವುದಲ್ಲ. ಬದಲಾಗಿ ಮೂರು ದಶಕಗಳಿಂದ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ತೂಗಿ ಹಾಕಲಾಗುತ್ತದೆ. ಈ ಬಾರಿ ಮಾತ್ರ ವಿವಾದ ಪ್ರಾರಂಭವಾಗಿದೆ.

ಮಜಾ ಅಂದ್ರೆ ಈ ಬೋರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತಿದೆ. ಕೆಲವರಂತು ಸಂಘ ಪರಿವಾರವನ್ನು ಟಾರ್ಗೇಟ್ ಮಾಡಿ ಕಮೆಂಟ್ ಹಾಕುತ್ತಿದ್ದಾರೆ. ಸಂಘ ಪರಿವಾರದ ಅಜೆಂಡಾವನ್ನು ದೇವಸ್ಥಾನದಲ್ಲಿ ಅಳವಡಿಸಲಾಗುತ್ತಿದೆ ಅನ್ನುವ ದೂರುಗಳು ಕೂಡಾ ಕಮೆಂಟ್ ನಲ್ಲಿ ದಾಖಲಾಗಿದೆ.

ವಾಸ್ತವ ಅಂದ್ರೆ ದೇವಸ್ಥಾನವಿರುವ ಪ್ರದೇಶ ಸಿಪಿಐಎಂನ ಭದ್ರಕೋಟೆ. ಇಲ್ಲಿರುವ ಬಹುತೇಕ ಮನೆ ಮಂದಿ ಕಮ್ಯೂನಿಸ್ಟ್ ಪಕ್ಷದ ಹಿಂಬಾಲಕರು. ಸಂಘ ಪರಿವಾರಕ್ಕೆ ಧ್ವಜ ಕಟ್ಟಲು ಕೂಡಾ ಇಲ್ಲಿ ಬೆಂಬಲಿಗರಿಲ್ಲ. ಮತ್ತೊಂದು ಗಮನಾರ್ಹ ಅಂಶ ಅಂದ್ರೆ ದೇವಸ್ಥಾನದ ಸಮಿತಿಯಲ್ಲಿ ಇರುವವರೆಲ್ಲಾ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು. ಇದೇ ಕಾರಣಕ್ಕಾಗಿ ಕಮ್ಯೂನಿಸ್ಚ್ ಪಕ್ಷದ ಸೆಕ್ಯೂಲರಿಸಂ ಅನ್ನು ಜನ ಪ್ರಶ್ನಿಸುತ್ತಿದ್ದಾರೆ.

- Advertisement -
- Advertisement -spot_img
- Advertisement -spot_img

Latest article