Thursday, January 28, 2021
Home Blog

ಶಾಸಕಿ ಸೌಮ್ಯ ಅವರಿಗೊಂದು ನ್ಯಾಯ… ಅಖಂಡ ಅವರಿಗೊಂದು ನ್ಯಾಯ.. ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು…

0

ಬೆಂಗಳೂರು : ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.

ಮಾತ್ರವಲ್ಲದೆ ಈ ಪ್ರತಿಭಟನೆಯಲ್ಲಿ ಘಟಾನುಘಟಿ ನಾಯಕು ಪಾಲ್ಗೊಂಡಿದ್ದರು.

ಆದರೆ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದ ವೇಳೆ ಪ್ರತಿಭಟನೆ ಬಿಡಿ ಅವರ ಪರ ಎತ್ತಲು ಯಾವೊಬ್ಬ ಕಾಂಗ್ರೆಸ್ ನಾಯಕರು ಮುಂದೆ ಬಂದಿರಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಬೆಂಗಳೂರು ಬೆಂಕಿ ಬಿಂದಿದ್ದ ಸಂಪತ್ ರಾಜ್ ಬೆನ್ನಿಗೆ ನಿಂತಿದ್ದರು.

ಈ ವಿಷಯ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾಪವಾಗಿದೆ.

ಸಭೆಯಲ್ಲಿ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಪರ ನಿನ್ನೆ ದೊಡ್ಡ ಪ್ರತಿಭಟನೆ ನಡೆಯಿತು.

ಕೇವಲ ಎಫ್ ಐ ಆರ್ ದಾಖಲಾಗಿದಕ್ಕೆ ಈ ಮಟ್ಟದ ಪ್ರತಿಭಟನೆ ನಡೆಯಿತು. ಆದರೆ ನನ್ನ ಮನೆಗೆ ಬೆಂಕಿ ಹಾಕಿದರೆ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ. ಹೋಗ್ಲಿ ಸಾಂಕೇತಕವಾಗಿ ಪ್ರತಿಭಟನೆ ಅದೂ ಇಲ್ಲ. ಪಕ್ಷದಲ್ಲಿ ಅವರಿಗೊಂದು ನ್ಯಾಯ, ನನಗೊಂದು ನ್ಯಾಯವೇ ಎಂದು ಅಖಂಡ ಪ್ರಶ್ನಿಸಿದ್ದಾರಂತೆ.

ಆದರೆ ಅಖಂಡ ಅವರ ಪ್ರಶ್ನೆಗೆ ಅದ್ಯಾವ ಕಾಂಗ್ರೆಸ್ ನಾಯಕರ ಬಳಿಯೂ ಉತ್ತರವಿರಲಿಲ್ಲ.

ಪತ್ನಿಯ ಅರೆ ಬೆತ್ತಲೆ ಫೋಟೋ ನೋಡಲಾಗದೆ ಹೆಂಡತಿಗೆ ಗುಂಡಿಟ್ಟ ಗಂಡ

0

ಬ್ರೆಜಿಲ್ :  ಟಿಕ್ ಟಾಕ್ ಗಳಲ್ಲಿ ಅರೆ ಬೆತ್ತಲೆ ಫೋಟೋ ಹಾಕದಂತೆ ಮಾಡಿದ ಮನವಿ ಪತ್ನಿ ಕಿವಿಗೊಟ್ಟಿಲ್ಲ ಎಂದು ಆಕ್ರೋಶಗೊಂಡ ಪತಿರಾಯನೊಬ್ಬ ಪತ್ನಿಯನ್ನೇ ಗುಂಡಿಟ್ಟು ಸಾಯಿಸಿದ್ದಾನೆ. ಮಾತ್ರವಲ್ಲದೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಯಾನ ಸಿಯೋಲಿನ್ ಟಿಕ್ ಟಾಕ್ ಗಳಲ್ಲಿ ಅರೆ ಬೆತ್ತಲೆ ಫೋಟೋಗಳನ್ನು ಹಾಕುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಳು.

ಆದರೆ ಗಂಡ ಅಲೆಜಾಂಡ್ರೋ ಗೆ ಇದು ಸರಿ ಬಂದಿರಲಿಲ್ಲ. ಹೀಗಾಗಿಯೇ ಪದೇ ಪದೇ ಇದೇ ವಿಷಯಕ್ಕೆ ಜಗಳ ತೆಗೆಯುತ್ತಿದ್ದ.

ಇವರಿಬ್ಬರ ದಾಂಪತ್ಯ 6 ವರ್ಷದ ಮಗಳಿದ್ದರೂ ಟಿಕ್ ಟಾಕ್ ವಿಷಯದ ಗಲಾಟೆಗೊಂದು ಮುಕ್ತಿ ಕಾಣಲು ಇವರಿಗೆ ಸಾಧ್ಯವಾಗಿರಲಿಲ್ಲ.

ಇದೇ ಅರೆ ಬೆತ್ತಲೆ ವಿಡಿಯೋ ಕಾರಣಕ್ಕೆ ಅದೆಷ್ಟೋ ಬಾರಿ ನಡು ರಸ್ತೆಯಲ್ಲಿ ಇವರು ಕಿತ್ತಾಡಿಕೊಂಡಿದ್ದರು ಎಂದು ಅವರ ಸಂಬಂಧಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯಕ್ಕೆ ಬಳಸಲಾದ ಗನ್ ಹಾಗೂ ಸಜೀವ ಗುಂಡುಗಳಿದ್ದ ಮ್ಯಾಗಜೀನ್ ಅನ್ನು ವಶಪಡಿಸಿಕೊಂಡಿದ್ದಾರೆಸ ಎಂದು dailymail ವರದಿ ಮಾಡಿದೆ.

ತೆಲುಗಿನ ಕೃಷ್ಣ ಲಂಕಕ್ಕೆ ಹಾರಿದ ಅನಿತಾ ಭಟ್

0

ನಟಿ ಅನಿತಾ ಭಟ್ ಕೊರೋನಾ ಆತಂಕ ಕರಗುತ್ತಿದ್ದಂತೆ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಕಿಕೊಳ್ಳಲಾರಂಭಿಸಿದ್ದಾರೆ.

ಇದೀಗ ತೆಲುಗಿನ ಚಿತ್ರವೊಂದಕ್ಕೆ ಸಹಿ ಮಾಡಿರುವ ಅವರು ಈಗಾಗಲೇ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಅನಿತಾ ಭಟ್ ಅವರಿಗೆ ತೆಲುಗಿನ ಮೊದಲ ಪ್ರಾಜೆಕ್ಟ್ ಇದಾಗಿದ್ದು, ಕೃಷ್ಣ ಲಂಕ ಟೈಟಲ್ ನ ಚಿತ್ರವನ್ನು ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ.

ಕನ್ನಡದಲ್ಲಿ ಅನಿತಾ ನಟಿಸಿದ ಸಿನಿಮಾಗಳನ್ನು ನೋಡಿದ ಕೃಷ್ಣ ಲಂಕ ಚಿತ್ರದ ನಿರ್ದೇಶಕರು ಅನಿತಾ ಅವರಿಗೆ ಈ ಆಫರ್ ಕೊಟ್ಟಿದ್ದಾರಂತೆ.

ತೆಲುಗಿನ ಕಥೆಗಾರ ಮತ್ತು ಸಂಭಾಷಣೆಗಾರರಾದ ಪರಚೂರು ಗೋಪಾಲಕೃಷ್ಣ ಅವರ ಪುತ್ರ ಪರಚೂರು ರವಿ ಈ ಚಿತ್ರದ ನಾಯಕರಾಗಿದ್ದಾರೆ.

ಇಬ್ಬರು ಹುಡುಗಿಯರನ್ನು ಇಟ್ಟುಕೊಂಡು ಹನಿ ಟ್ರ್ಯಾಪ್ಸ್ ದಂಧೆ ನಡೆಸುತ್ತಿದ್ದ ನ್ಯೂಸ್ ಚಾನೆಲ್ ಮಾಲೀಕ

0

ಬೆಂಗಳೂರು : ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ಕಾಸು ವಸೂಲಿ ಮಾಡಿದ್ದ ಖಾಸಗಿ ನ್ಯೂಸ್ ಚಾನೆಲ್ ಮಾಲೀಕನ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2019ರಲ್ಲಿ ಚೆನೈ ಮೂಲಕ ಉದ್ಯಮಿಯೊಬ್ಬರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಸುಕನ್ಯ ಅನ್ನುವ ಹುಡುಗಿ ಉದ್ಯಮಿ ಪರಿಚಯ ಬೆಳೆಸಿ ಉದ್ಯಮಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು. ಈ ವೇಳೆ ಉದ್ಯಮಿಗೆ ಗೊತ್ತಿಲ್ಲದಂತೆ ಖಾಸಗಿ ವಿಡಿಯೋ ಗಳು ರೆಕಾರ್ಡ್ ಆಗಿತ್ತು.

2020ರ ಮಾರ್ಚ್ ನಲ್ಲಿ ಉದ್ಯಮಿಗೆ ಕರೆ ಮಾಡಿ ನಂದಿನಿ ಎಂದು ಪರಿಚಯಿಸಿಕೊಂಡಿದ್ದ ಯುವತಿ ವಾಟ್ಸಾಪ್ ನೋಡುವಂತೆ ಹೇಳಿದ್ದಳು. ಉದ್ಯಮಿ ವಾಟ್ಸಾಪ್ ನೋಡಿದ್ರೆ ಈ ಹಿಂದೆ ಸುಕ್ಯನ್ಯಾಳೊಂದಿಗೆ ಖಾಸಗಿ ಕ್ಷಣದ ವಿಡಿಯೋಗಳನ್ನು ಕಳುಹಿಸಲಾಗಿತ್ತು.

ಮತ್ತೆ ಕರೆ ಮಾಡಿದ್ದ ನಂದಿನಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು, ತಪ್ಪಿದ್ರೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಲಾಗಿತ್ತು.

ಬೆದರಿಕೆ ಅಂಜಿದ ಉದ್ಯಮಿ ಈ ಗ್ಯಾಂಗ್ ಹಿಂದಿದ್ದ ಖಾಸಗಿ ಸುದ್ದಿ ವಾಹಿನಿ ಮಾಲೀಕ ವಿರೇಶ್ ಕಚೇರಿಗೆ ತೆರಳಿ ಹಂತ ಹಂತವಾಗಿ 34 ಲಕ್ಷ ನೀಡಿದ್ದರು. ಮತ್ತೆ ಹಣಕ್ಕಾಗಿ ಬೇಡಿಕೆ ಹೆಚ್ಚಿದ ವೇಳೆ ಉದ್ಯಮಿ ಸೈಬರ್ ಕ್ರೈಮ ಪೊಲೀಸರ ಮೊರೆ ಹೋಗಿದ್ದರು. ಇದೀಗ ವಿರೇಶ್, ಸುಕನ್ಯ ,ಶಾಜಿ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಗ್ಯಾಂಗ್ ಇದೀಗ ಮತ್ತಷ್ಟು ಮಂದಿಯನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿರುವ ಶಂಕೆ ವ್ಯಕ್ತವಾಗಿದೆ.

ಅಡಕೆಗೆ ಡ್ರಗ್ಸ್ ಪಟ್ಟ ಕಟ್ಟಿದ ರಾಜ್ಯ ಸರ್ಕಾರ….. ಇದು ರೈತ ಪರ ನಿಲುವೇ ಯಡಿಯೂರಪ್ಪನವರೇ

0

ಬೆಂಗಳೂರು : ಅದ್ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಹೇಳುವುದು ಒಂದೇ ಮಾತು ನಮ್ದು ರೈತ ಪರ ಸರ್ಕಾರ. ಆದರೆ ಮಾಡುವುದು ಮಾತ್ರ ಬೆನ್ನಿಗೆ ಚೂರಿ ಹಾಕುವ ಕೆಲಸ.

ಇದೀಗ ಈಗಿನ ರಾಜ್ಯ ಸರ್ಕಾರದ ಕಥೆಯೂ ಅದೇ ಆಗಿದೆ. ರೈತರ ಪರವಾಗಿದ್ದೇವೆ ಅನ್ನುವ ಸರ್ಕಾರ ಸದ್ದಿಲದ್ದೆ ಅಡಿಕೆಗೆ ಡ್ರಗ್ಸ್ ಪಟ್ಟ ಕಟ್ಟಿದೆ.

ಸಹಕಾರ ಖಾತೆಯ ಅಡಿಯಲ್ಲಿ ಬರುವ  ಕರ್ನಾಟ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕೃತ ವೆಬ್ ಸೈಟ್ ಕೃಷಿ ಮಾರಾಟ ವಾಹಿನಿಯಲ್ಲಿ ಅಡಕೆಯನ್ನು Drugs & Narcotics ವಿಭಾಗದಲ್ಲಿ ತೋರಿಸಲಾಗಿದೆ.

ಈಗಾಗಲೇ ಅಡಕೆಯ ವಿಚಾರದಲ್ಲಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿದೆ. ಅದು ಕ್ಯಾನ್ಸರ್ ಕಾರಕ ಅನ್ನುವ ಪಟ್ಟ ಕಟ್ಟಿ ಅಡಕೆ ಬೆಳೆಗಾರರಿಗೆ ಚಟ್ಟ ಕಟ್ಟುವ ಕೆಲಸ ಈ ಹಿಂದೆ ನಡೆದಿತ್ತು. ಹಾಗೋ ಹೀಗೋ ಹೊಡೆದಾಡಿ ಬಡಿದಾಟಿದ ರೈತರು ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.

ಇದೀಗ ಮತ್ತೆ ಅಡಕೆ ಬೆಳೆಗಾರರನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಕೃಷಿ ಮಾರಾಟ ವಾಹಿನಿಯಲ್ಲೇ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಅಡಕೆಯನ್ನು ಶಾಶ್ವತವಾಗಿ ಅಪಾಯಕಾರಿ ವಸ್ತು ಎಂದು ದಾಖಲಿಸಲು ಹೊರಟಿರುವಂತಿದೆ.

ಚುನಾವಣೆ ಬಂದ್ರೆ ಸಾಕು ಅಡಕೆ ಬೆಳೆಗಾರರ ಮೇಲೆ ಇನ್ನಿಲ್ಲದ ಲವ್ ತೋರಿಸುವ ಜನಪ್ರತಿನಿಧಿಗಳು ಇದೀಗ ಸೈಲೆಂಟ್ ಆಗಿದ್ದಾರೆ. ಮತ್ತೊಂದು ಚುನಾವಣೆ ಬರಲಿ ಅಡಕೆಯನ್ನು ಡ್ರಗ್ಸ್ ಪಟ್ಟಿಯಿಂದ ತೆಗೆಯುತ್ತೇವೆ ಎಂದು ಭರವಸೆ ಕೊಡುತ್ತಾರೆ.

ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ…. ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಆದಿಚುಂಚನಗಿರಿ ಶ್ರೀಗಳು

0

ಬೆಂಗಳೂರು : ಕಳೆದ ಆರು ತಿಂಗಳುಗಳಿಂದ ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಕುಣಿಗಲ್ ನಲ್ಲಿ ತಾಲೂಕು ಒಕ್ಕಲಿಗ ಧರ್ಮ ಮಹಾಸಭಾ ಹಮ್ಮಿಕೊಂಡಿದ್ದ  ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುಣ್ಯ ಸ್ಮರಣೆ ಮತ್ತು ಒಕ್ಕಲಿಗ ಧರ್ಮ ಸಮಾವೇಶದಲ್ಲಿ ಮಾತನಾಡಿದ ಅವರು ಆಳುವ ವ್ಯವಸ್ಥೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದು  ಸರ್ಕಾರದ ವ್ಯವಸ್ಥೆಯಿಂದ ಒಕ್ಕಲಿಗ ಸಮುದಾಯದ ಮೇಲೆ ಅನ್ಯಾಯವಾಗುತ್ತಿದೆ.

ಇದು ಮುಂದುವರಿದ್ರೆ ಮುಂದಿನ ವಿದ್ಯಾಮಾನಗಳಿಗೆ ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.

ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವುದು ರಾಜ್ಯವನ್ನು ಆಳುವ ವ್ಯವಸ್ಥೆಯ ಧರ್ಮ ಅದನ್ನು ತಪ್ಪಿ ಸಮುದಾಯದ ಮೇಲೆ ಒಂದು ವೇಳೆ ಅನ್ಯಾಯವಾದರೆ ಸಹಿಸಲಾಗದು. ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಸಾಹಸಕ್ಕೆ ಕೈ ಹಾಕಂದಂತೆ ಇದೇ ವೇಳೆ ಶ್ರೀಗಳು ಎಚ್ಚರಿಕೆ ನೀಡಿದರು.

ಈ ಸಂಬಂಧ ಒಕ್ಕಲಿಗರ ಸಮುದಾಯ ದನಿ ಎತ್ತದೆ ಹೋದರೆ  ಸಮುದಾಯಕ್ಕೆ ಬೇಕಾದ ಸವಲತ್ತುಗಳು ಸಿಗೋದಿಲ್ಲ. ಮಗು ಅಳದಿದ್ರೆ ತಾಯಿಯೂ ಹಾಲು ಕೊಡೋದಿಲ್ಲ ಅನ್ನುವ ಮೂಲಕ ಮುಂದಿನ ದಿನದಲ್ಲಿ ಒಕ್ಕಲಿಗರು ಹೋರಾಟಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ.

ಸಿಟಿ ರವಿ ಮುಂದೆ ಕೈ ಕಟ್ಟಿ ನಿಂತ ಪೋಟೋ ಹಿಂದಿನ ರಹಸ್ಯವೇನು..? ವೈರಲ್ ಆಯ್ತು ಸಿಂಗಂ ಅಣ್ಣಾಮಲೈ ಫೋಟೋ…

0

ತಮಿಳುನಾಡು : ಅಣ್ಣಾಮಲೈ…. ಕರ್ನಾಟಕದ ಸಿಂಗಂ ಎಂದೇ ಪ್ರಸಿದ್ಧರಾದವರು. ಖಾಕಿ ತೊಟ್ಟುಕೊಂಡಿದಷ್ಟು ದಿನ ಖದರ್ ತೋರಿದ ಅಣ್ಣಾಮಲೈ ಅವರಿಗೆ ಅಭಿಮಾನಿಯಾಗಿದ್ದವರು ಅಸಂಖ್ಯಾತ ಮಂದಿ.

ಅದೇನಾಯ್ತೋ ಗೊತ್ತಿಲ್ಲ ಕಷ್ಟಪಟ್ಟು ಪಡೆದಿದ್ದ ಐಪಿಎಸ್ ಹುದ್ದೆ ತೊರೆಯಲು ನಿರ್ಧರಿಸಿದ ಅಣ್ಣಾಮಲೈ ನಾನು ಮಾಡುವುದು ಬೇರೇನೋ ಇದೆ ಎಂದು ಖಾಕಿ ಕಳಚಿದ್ದರು. ಹಾಗೇ ಹೋದವರು ಕಾಣಿಸಿಕೊಂಡಿದ್ದು ತಮಿಳುನಾಡು ರಾಜಕೀಯದಲ್ಲಿ.

ತಮಿಳುನಾಡಿನಲ್ಲಿ ಕಮಲ ಅರಳಿಸುವ ಸಲುವಾಗಿ ಬಿಜೆಪಿ ಸೇರಿದ ಅಣ್ಣಾಮಲೈ ಇದೀಗ ರಾಜ್ಯ  ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಯುವಕರನ್ನು ಸಂಘಟಿಸುತ್ತಿರುವ ಅಣ್ಣಾಮಲೈ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೀಗ ಅಣ್ಣಾಮಲೈ ಅವರ ಫೋಟೋ ಒಂದು ವೈರಲ್ ಆಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಣ್ಣಾಮಲೈ ಅವರು ಬಿಜೆಪಿ ಸೇರಿರುವ ಬಗ್ಗೆ ಆಕ್ರೋಶವಿರುವ ಮಂದಿ ಅವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಮಂದಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ನೋಡಿ ಅಂದರೆ, ಅಣ್ಣಾಮಲೈ ಬಗ್ಗೆ ಒಲವಿರುವ ಮಂದಿ ಇದು ಅಣ್ಣಾಮಲೈ ಅವರ ವಿಧೇಯತೆಗೆ ಸಾಕ್ಷಿ ಅಂದಿದ್ದಾರೆ.

ಆದರೆ ಈ ಪೋಟೋ ನೋಡಿದರೆ ಸಾವಿರ ಅಭಿಪ್ರಾಯಗಳು ಸಿಗಬಹುದು. ಹೀಗಾಗಿ ಅಸಲಿ ಕಥೆಯನ್ನು ಫೋಟೋದಲ್ಲಿರುವ ಅಣ್ಣಾಮಲೈ ಅಥವಾ ಸಿಟಿ ರವಿಯವರೇ ಹೇಳಬೇಕು.

ಒಟ್ಟಿನಲ್ಲಿ ಈ ಪೋಟೋ ನೋಡಿದರೆ ನಿಮಗೇನು ಅನ್ನಿಸುತ್ತಿದೆ ಕಮೆಂಟ್ ಮಾಡಿ.

ಬ್ರಿಟನ್ ವೈರಸ್ ಅನ್ನು ಮಣಿಸಲಿದೆಯಂತೆ ಭಾರತದ ಸ್ವದೇಶಿ ಕೊರೋನಾ ಲಸಿಕೆ

0

ಬೆಂಗಳೂರು : ಕೊರೋನಾ ಸೋಂಕಿನ ಆತಂಕ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಲಂಡನ್ ನಿಂದ ಬಂದ ರೂಪಾಂತರಿ ತಳಿ ಆತಂಕ ಹುಟ್ಟಿಸಿದೆ.

ಪ್ರಸ್ತುತ ಲಂಡನ್ ವೈರಸ್ ಅನ್ನು ನಿಗ್ರಹಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ಇದು ಶಾಶ್ವತವಲ್ಲ, ಲಂಡನ್ ನಿಂದ ಬಂದವರು ವಿಮಾನ ನಿಲ್ದಾಣದಲ್ಲಿ ಕಣ್ಣು ತಪ್ಪಿಸಿ ರೂಪಾಂತರಿ ವೈರಸ್ ಅನ್ನು ಹರಡುವ ಸಾಧ್ಯತೆ ಖಂಡಿತವಾಗ್ಲೂ ಇದೆ.

ಹೀಗಾಗಿಯೇ ಲಂಡನ್ ವೈರಸ್ ಬಗ್ಗೆ ಆತಂಕ ಕಡಿಮೆಯಾಗಿಲ್ಲ. ಜೊತೆಗೆ ಈಗ ಹೊರ ಬಂದಿರುವ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಕೆಲಸ ಮಾಡೋದಿಲ್ಲ ಎಂದು ಹೇಳಲಾಗಿದೆ.

ಆದರೆ ಬ್ರಿಟನ್ ಮೂಲದ ಹೊಸ ರೂಪಾಂತರಿ ಸೋಂಕು ನಿವಾರಣೆಗೂ ಕೋವ್ಯಾಕ್ಸಿನ್ ಲಸಿಕೆ ಬಹಳ ಪರಿಣಾಮಕಾರಿ ಎಂದು ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ.

ರೂಪಾಂತರಿ ಸೋಂಕಿನ ವಿರುದ್ಧವೂ ಲಸಿಕೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ವೈದ್ಯಕೀಯ ಪರೀಕ್ಷೆಯಿಂದ ಇದು ದೃಡಪಟ್ಟಿದೆ. ರೂಪಾಂತರಿ ವೈರಸ್ ಇನ್ನಷ್ಟು ವೇಗವಾಗಿ ರೂಪಾಂತರ ಹೊಂದುವುದನ್ನು ಕೋವಾಕ್ಸಿನ್ ಲಸಿಕೆ ತಪ್ಪಿಸಲಿದೆ ಎಂದು ಭಾರತ್ ಬಯೋಟೆಕ್ ಘೋಷಿಸಿದೆ.

ಅರಣ್ಯ ಅಭಿವೃದ್ಧಿ ಪಡಿಸಲು ಮೂರು ಸಿನಿಮಾ ಕೈ ಬಿಟ್ಟ ತಾರಾ….

0

ಬೆಂಗಳೂರು : ಚಂದನವನದಲ್ಲಿ ತಾರಾ ತಮ್ಮದೇ ನಟನಾ ಶೈಲಿಯಿಂದ ಗುರುತಿಸಿಕೊಂಡವರು. ಯಾವುದಾದರೂ ಸಿನಿಮಾ ತಾರಾ ಇದ್ದಾರೆ ಅಂದ್ರೆ ಈ ಪಾತ್ರಕೊಂದು ತೂಕವಿರುತ್ತದೆ.

ಈ ಹಿಂದೆ ರಾಜಕೀಯದಲ್ಲಿ ಬ್ಯುಸಿ ಇದ್ದಾಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದ ತಾರಾ ಅದೇಕೋ ಈ ಬಾರಿ ಸಿನಿಮಾದಿಂದ ದೂರ ಸರಿಯುತ್ತಿದ್ದಾರೆ.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲಂತು ತಾರಾ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.

ತಾರಾ ಅವರ ಈ ನಿರ್ಧಾರದಿಂದ ತಾರಾ ಅವರನ್ನೇ ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದ ನಿರ್ದೇಶಕರು ತಲೆ ಕೆಡಿಸಿಕೊಂಡಿದ್ದಾರೆ.

ಧನಂಜಯ್ ನಾಯಕರಾಗಿರುವ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಉತ್ತರ ಕನ್ನಡ ಗೌಡ್ತಿಯಾ ತಾರಾ ಕಾಣಿಸಿಕೊಳ್ಳಬೇಕಾಗಿತ್ತು, ಆದರೆ ನಿಗಮದ ಕಾರ್ಯದ ಒತ್ತಡ ಹೆಚ್ಚಾಗಿರುವ ಕಾರಣ ಇದೀಗ ‘ರತ್ನನ್ ಪ್ರಪಂಚ’ ಚಿತ್ರದಿಂದ ಹೊರ ಬಂದಿದ್ದಾರೆ. ಇದೀಗ ಅದೇ ಪಾತ್ರ ನಟಿ ಶೃತಿ ಜೀವ ತುಂಬಲಿದ್ದಾರೆ.

‘ರತ್ನನ್ ಪ್ರಪಂಚ’ ಮಾತ್ರವಲ್ಲದೆ ಒಪ್ಪಿಕೊಂಡಿದ್ದ ಇನ್ನೆರಡು ಚಿತ್ರಗಳಿಂದ ಹೊರ ಬಂದಿರುವ ಅವರು ನಿಗಮದ ಕಾರ್ಯದ ಒತ್ತಡದಿಂದ ನಟಿಸಲು ಅಸಾಧ್ಯ ಅಂದಿದ್ದಾರೆ.

ಒಟ್ಟಿನಲ್ಲಿ ನಿಗಮದ ಅವಧಿ ಮುಗಿಯೋ ತನಕ ತಾರಾ ಅವರ ಅಭಿನಯ ನೋಡಲು ಸಾಧ್ಯವಿಲ್ಲ

ಮಗಳ ಸಾವಿಗೆ ಇನ್ನೆಲ್ಲಿ ನ್ಯಾಯ…. ಸೌಜನ್ಯಾ ಕೊಲೆ ಪ್ರಕರಣದ ಸಿಬಿಐ ಮರುತನಿಖೆ ಅಸಾಧ್ಯ ಅಂದ ಹೈಕೋರ್ಟ್‌

0

ಬೆಂಗಳೂರು : ಉಜಿರೆ SDM ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ಮರು ತನಿಖೆ ವಹಿಸಿಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ತನಿಖೆ ನಡೆಸಿದ್ದ ಎರಡು ತನಿಖಾ ಸಂಸ್ಥೆಗಳು ಅಂದ್ರೆ ಸಿಐಡಿ ಮತ್ತು ಸಿಬಿಐ ಸಂತೋಷ್‌ ರಾವ್‌ ಪ್ರಮುಖ ಆರೋಪಿಯೆಂದು ಹೇಳಿದೆ.

ಜೊತೆಗೆ ವೈದ್ಯಕೀಯ ಪರೀಕ್ಷೆಯೂ ಸಂತೋಷ್‌ ರಾವ್‌ ಕೃತ್ಯ ಎಸಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ 2012ರ ಅ.9 ರಂದು ಕಾಣೆಯಾಗಿದ್ದಳು.

ಅ.10 ರಂದು ಸೌಜನ್ಯಾ ಶವ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ ವೇಳೆ ಆಕೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಗೊತ್ತಾಗಿದ್ದು.

ಈ ಕೊಲೆ ಪ್ರಕರಣದಲ್ಲಿ ದೊಡ್ಡ ದೊಡ್ಡವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.

ನಂತರ ಕೆಲ ಸಂಘಟನೆಗಳು ಸಿಐಡಿ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತನಿಖೆಯನ್ನು ಸಿಬಿಐಗೆ ಸರ್ಕಾರ ಹಸ್ತಾಂತರಿಸಿತ್ತು.

2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.  ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸೌಜನ್ಯಾ ತಂದೆ ಚಂದಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದರು.

ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಧರ್ಮಸ್ಥಳದ ಮಲ್ಲಿಕ್‌ ಜೈನ್‌, ಉದಯ ಜೈನ್‌ ಮತ್ತು ಧೀರಜ್‌ ಜೈನ್‌ಗೆ ಸೂಚಿಸಿ ಸಿಬಿಐ ವಿಚಾರಣಾ ನ್ಯಾಯಾಲಯ 2016ರಲ್ಲಿ ಜಾರಿಗೊಳಿಸಿದ್ದ ಸಮನ್ಸ್‌ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಹೀಗಾಗಿ ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ್‌ ಜೈನ್‌ ವಿರುದ್ಧ ಸಂಶಯ ವ್ಯಕ್ತಪಡಿಸಿ ಚಂದಪ್ಪ ಗೌಡ ಮರು ತನಿಖೆ ಕೋರಿದ್ದಾರೆ.

21,431FansLike
0FollowersFollow
84FollowersFollow
0FollowersFollow
0SubscribersSubscribe

RECENT POSTS

MOST POPULAR ARTICLES

TRENDING NOW