ಪಾಕಿಸ್ತಾನ : ತಾಲಿಬಾನ್ ಉಗ್ರರಿಂದ ಪಾಕ್ ಸೈನಿಕ ಅಪಹರಣದ ಬೆನ್ನಲ್ಲೇ, ಪಾಕಿಸ್ತಾನದ ಉತ್ತರ ಭಾಗದಲ್ಲಿ ಬಸ್ ಸ್ಫೋಟಗೊಂಡಿದ್ದು 13 ಮಂದಿ ಮೃತಪಟ್ಟಿದ್ದಾರೆ.ಮೃತರಲ್ಲಿ 9 ಮಂದಿ ಚೀನೀ ಪ್ರಜೆಗಳು ಹಾಗೂ ಒಬ್ಬ ಪಾಕಿಸ್ತಾನಿ ಸೈನಿಕ ಸೇರಿದ್ದಾನೆ ಎಂದು ಗೊತ್ತಾಗಿದೆ.
ಕೊಹಿಸ್ತಾನ್ ಜಿಲ್ಲೆಯಲ್ಲಿ ಬಸ್ ಅನ್ನು ಗುರಿಯಾಗಿರಿಸಿಯೇ ದಾಳಿ ನಡೆಸಲಾಗಿದ್ದು ಮೊದಲು ಬಸ್ ಎಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಇಡೀ ಬಸ್ ಅನ್ನು ಆವರಿಸಿದ ಬೆಂಕಿಯ ಜ್ವಾಲೆ 13 ಮಂದಿಯನ್ನು ಬಲಿ ಪಡೆದಿದೆ. ಸ್ಫೋಟದ ಬಳಿಕ ಬಸ್ ರಸ್ತೆ ಪಕ್ಕದ ಬಂಡೆಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಇದರಿಂದ ಅಪಾರ ಸಾವು ನೋವು ಸಂಭವಿಸಿದೆ ಅನ್ನುವ ಮಾಹಿತಿ ಲಭಿಸಿದೆ. ಘಟನೆಯಲ್ಲಿ ಇನ್ನೂ 31 ಚೀನಿ ಪ್ರಜೆಗಳು ಗಾಯಗೊಂಡಿದ್ದಾರೆ. ಜೊತೆಗೆ ಬಸ್ ನಲ್ಲಿದ್ದ ಒಬ್ಬ ಚೀನೀ ಎಂಜಿನಿಯರ್ ಹಾಗೂ ಪಾಕ್ ಸೈನಿಕ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಈ ಸ್ಫೋಟಕ್ಕೆ ರಸ್ತೆ ಬದಿ ಇರಿಸಲಾಗಿದ್ದ ಸ್ಫೋಟಕ ಕಾರಣ ಎಂದು ಸಂಶಯಿಸಲಾಗಿದೆ. ಜೊತೆಗೆ ಯೋಜಿತ ದಾಳಿ ಅನ್ನುವ ಮಾತುಗಳು ಕೇಳಿ ಬಂದಿದೆ.
Discussion about this post