ನಿಮ್ಮನ್ನು ಒಲ್ಲೆ ಎಂದ ಯುವತಿಯನ್ನು ತೋರಿಸಿ ನಾನು ಕಿಡ್ನಾಪ್ ಮಾಡಿ ತಂದು ನಿಮ್ಮ ಜೊತೆ ಸೇರಿಸುತ್ತೇನೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದ ಶಾಸಕನ ವರ್ತನೆ ಇದೀಗ ಅವರ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಮಧ್ಯೆ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದು ಇದೇ ಶಾಸಕ ರಾಮ್ ಕದಮ್ ಟ್ವೀಟ್ ಮಾಡಿ ಛೀ..ಥೂ ಅನ್ನಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ನಂದಬಿ ಶಾಸಕ ರಾಮ್ ಕದಮ್ ಕೂಡಾ ಹಿಂದೆ ಮುಂದೆ ನೋಡಲಿಲ್ಲ. ಸುದ್ದಿ ಸತ್ಯವೋ ಎಂದು ಪರೀಕ್ಷೆ ಮಾಡಲಿಲ್ಲ. ಬದಲಿಗೆ ಟಿವಿಗಿಂತ ನಾನೇ ಮೊದಲು ಬ್ರೇಕಿಂಗ್ ಸುದ್ದಿ ಕೊಡಬೇಕು ಎಂದು ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದು ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾಗಿದ್ದಾರೆ.
ಕ್ಯಾನ್ಸರ್ ಟ್ರೀಟ್ಮೆಂಟ್ ನಡುವೆ ಮಗನಿಗೆ ಪತ್ರ ಬರೆದ ಸೋನಾಲಿ ಬೇಂದ್ರೆ
ಮರಾಠಿ ಭಾಷೆಯಲ್ಲಿ ರಾಮ್ ಕದಮ್ ಟ್ವೀಟ್ ಮಾಡಿದ್ದು. ಟ್ವೀಟ್ ನಲ್ಲಿ ಅಮೋಘ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸಿದ ಬಾಲಿವುಡ್ ಮತ್ತು ಮರಾಠಿ ದಿವಾ ಸೋನಾಲಿ ಬೇಂದ್ರೆ ಇನ್ನಿಲ್ಲ. ಅಮೆರಿಕದಲ್ಲಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಸತ್ಯ ಗೊತ್ತಾಗುತ್ತಿದ್ದಂತೆ ರಾಮ್ ಕದಮ್ ಮತ್ತೊಂದು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸೋನಾಲಿ ಬೇಂದ್ರೆ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಸೋನಾಲಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಟ್ವೀಟ್ ನಲ್ಲಿ ಹಾರೈಸಿದ್ದಾರೆ.
About Sonali Bendre ji It was rumour . Since last two days .. I pray to God for her good health & speedy recovery
— Ram Kadam (@ramkadam) September 7, 2018
Discussion about this post