Saturday, May 15, 2021
spot_img

ಭಾರತದಲ್ಲಿ ಕೊರೋನಾ ರಣಕೇಕೆ – ಬಿಹಾರದ ಮುಖ್ಯ ಕಾರ್ಯದರ್ಶಿಯನ್ನೇ ಬಲಿ ಪಡೆದ ಮಹಾಮಾರಿ

Must read

- Advertisement -
- Advertisement -

ಬಿಹಾರ : ದೇಶದಲ್ಲಿ ಕೊರೋನಾ ಅಟ್ಟಹಾಸ ಭೀಕರವಾಗಿದೆ. ಜನ ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಮತ್ತೊಂದು ಅಪಾಯದ ಹೊಂಡಕ್ಕೆ ದೇಶ ಸಿಲುಕಿ ಹಾಕಿಕೊಳ್ಳುವುದು ಖಚಿತ.

ಕೊರೋನಾ ಅಬ್ಬರಿಸುತ್ತಿರುವ ನಡುವೆ ಬಿಹಾರದ ಮುಖ್ಯ ಕಾರ್ಯದರ್ಶಿ ಅರುಣ್​ ಕುಮಾರ್​ ಸಿಂಗ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅರುಣ್​ ಕುಮಾರ್ ಅವರು 1985ರ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿದ್ದು. 2021ರ ಫೆಬ್ರವರಿಯಲ್ಲಿ ಅವರನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಅರುಣ್​ ಕುಮಾರ್​ ಸಿಂಗ್​ ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಪಟನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಆರೋಗ್ಯ ಹದಗೆಡುತ್ತಾ ಹೋಯ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Patna: A health worker collects swab samples from a woman for Covid-19 test, amid a countrywide spike in coronavirus cases, at a government dispensary, in Patna On Friday, 16th April,2021. (Photo:Aftab Alam Siddiqui/IANS)

ಬಿಹಾರದಲ್ಲಿ ಇದೇ ತಿಂಗಳಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿ ಸಾವಿಗೀಡಾದ ನಾಲ್ಕನೇ ಐಎಎಸ್‌ ಅಧಿಕಾರಿ ಇವರಾಗಿದ್ದಾರೆ.

- Advertisement -
- Advertisement -spot_img
- Advertisement -spot_img

Latest article