ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ರಕ್ಷಾ ಸೋಮಶೇಖರ್ ಬಿಗ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಈಗಾಗಲೇ ಕಲರ್ಸ್ ವಾಹಿನಿ ಪ್ರೋಮೋ ಕೂಡ ರಿಲೀಸ್ ಮಾಡಿದ್ದು, ಆದರೆ ಆ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎಂದು ಬಹಿರಂಗ ಮಾಡಿಲ್ಲ.
ಆರ್‌ಜೆ ಪ್ರಥ್ವಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದರು. ತದನಂತರದಲ್ಲಿ ರಕ್ಷಾ ಸೋಮಶೇಖರ್ ಎರಡನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ಮೇ1′ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಮಾಡೆಲ್ ಕಮ್ ನಟಿ ರಕ್ಷಾ ಸೋಮಶೇಖರ್. ಅಷ್ಟೇ ಅಲ್ಲದೆ ಕನ್ನಡದಲ್ಲಿ ‘ಗೋದ್ರಾ’ ಸಿನಿಮಾದಲ್ಲಿ ವಸಿಷ್ಠಗೆ ಜೋಡಿಯಾಗಿ ಇವರು ಕಾಣಿಸಿಕೊಂಡಿದ್ದರು. ‘ಮಿಸ್ಟರ್ ಜೈ, ಮತ್ತು ಮಸ್ತ್ ನನ್ನ ಪ್ರೇಮ ಕಹಾನಿ’ ಎಂಬ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ರಕ್ಷಾ ಅವರು ಕಿಶನ್ ಬೆಳಗಲಿ ಅವರ ಗೆಳತಿ ಎಂಬ ಗಾಸಿಪ್ ಹಬ್ಬಿದೆ. ಆದರೆ ಇದಕ್ಕೆ ಅಧಿಕೃತ ಪುರಾವೆ ಇಲ್ಲ. ರಕ್ಷಾ ಮತ್ತು ಕಿಶನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಕೂಡ ಇದೆ.
Discussion about this post