ಹೊಳೆಯುತ್ತಿರುವ ಗದ್ಧ, ಚಿಗುರು ಮೀಸೆ, ಕನ್ನಡಕದಡಿಯ ನಗು. ನೋಡಿದರೆ ಪಕ್ಕಾ ಚಾಕೊಲೇಟ್ ಬಾಯ್. ಇವರ ಹಿಂದಿನ ಪುಟಗಳನ್ನು ಕೆದಕಿದರೆ ಇವರೇನಾ ಅನ್ನುವ ಉದ್ಗಾರ ಖಂಡಿತಾ ಹೊರಬೀಳುತ್ತದೆ.
ಯಾಕಂದ್ರೆ ರಾಮಾ ರಾಮಾರೇ ಸಿನಿಮಾದ ಗೀತೆಗಳಿಗೆ ಸಂಗೀತ
ಸಂಯೋಜಿಸಿದ್ದು ಇದೇ ಯುವಕ. ಅವರೇ ವಾಸುಕಿ ವೈಭವ್.
ಸಂಗೀತ ಸಂಯೋಜನೆ ಮಾತ್ರವಲ್ಲದೆ ಗಾಯನ.ನಟನೆ, ಗೀತ ರಚನೆ
ಹೀಗೆ ಪ್ರತಿಭೆಗಳ ಸಾಗರ ಈ ತುಂಟ ಕಣ್ಣಿನ ಹುಡುಗ.
ಒಂದು ನಿಟ್ಟಿನಲ್ಲಿ ಹೇಳುವುದಾದರೆ ಸೃಜನಶೀಲತೆಯನ್ನು ಮೈ ಎಲ್ಲಾ ಹೊತ್ತುಕೊಂಡ ಪ್ರತಿಭೆ.
2016ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ 26ರ ಯುವಕ
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕಾಗದದ ದೋಣೆಯಲ್ಲಿ ಅನ್ನುವ ಹಾಡು ಹಾಡುವ ಮೂಲಕ ಚಂದನವನದ
ಹೆಬ್ಬಾಗಿಲಿಗೆ ಬಂತು ನಿಂತಿದ್ದರು,.
ನಂತರ ರಿಶಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಆನಂತರ ಹಲವು ಸಿನಿಮಾಗಳು ವಾಸುಕಿ ವೈಭವ್ ಅವರ ಪ್ರತಿಭೆಗೆ ಅವಕಾಶ ದೊರಕಿಸಿತ್ತು.
Discussion about this post