ಬಿಗ್ ಬಾಸ್ ಸೀಸನ್ 8 ರ ಎರಡನೇ ಸ್ಪರ್ಧಿಯಾಗಿ ನಟಿ ಶುಭ ಪೂಂಜಾ ಮನೆ ಪ್ರವೇಶಿಸಿದ್ದಾರೆ.
ಅಚ್ಚರಿ ಅಂದ್ರೆ ಈ ಹಿಂದಿನ 7 ಸೀಸನ್ ಗಳಿಗೂ ಶುಭ ಪೂಂಜಾ ಅವರನ್ನು ಆಹ್ವಾನಿಸಲಾಗಿತ್ತು.
ಆದರೆ ಶುಭ ಪೂಂಜಾ ಹಲವು ಕಾರಣಗಳಿಂದ ಬಿಗ್ ಬಾಸ್ ಮನೆಗೆ ಹೋಗಲು ಒಪ್ಪಿರಲಿಲ್ಲ.
ಎಂಟನೇ ಬಾರಿಯೂ ಶುಭ ಪೂಂಜಾ ಅವರನ್ನು ಅವಕಾಶ ಕೈ ಬೀಸಿ ಕರೆದಿದೆ. ಈ ಬಾರಿ ಅವರು ಅವಕಾಶವನ್ನು ನಿರಾಕರಿಸಿಲ್ಲ.
ಬದಲಾಗಿ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಈ ಬಾರಿ ಬಿಗ್ ಪ್ರವೇಶದ ರಹಸ್ಯವನ್ನು ವೇದಿಕೆಯಲ್ಲೇ ಬಿಚ್ಚಿಟ್ಟಿರುವ ಶುಭ, ಮದುವೆಯಾಗುವ ಹುಡುಗ ಹೇಳ್ದ, ಈಗ ಹೋಗಿಲ್ಲ ಅಂದ್ರೆ ಯಾವಾಗ ಹೋಗ್ತಿಯಾ, ಮದುವೆಯಾದ ಮೇಲೆ ಹೋಗಲು ನಾನು ಬಿಡಲ್ಲ ಅಂತಾ.ಹೀಗಾಗಿ ಶುಭ ಪೂಂಜಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಹಾಗಂತ ಇದೊಂದೆ ಕಾರಣಕ್ಕೆ ಶುಭ ಪೂಂಜಾ ಬಿಗ್ ಬಾಸ್ ಅವಕಾಶವನ್ನು ಒಪ್ಪಿಕೊಂಡಿಲ್ಲ. ಜೊತೆಗೆ ಸಿನಿಮಾ ರಂಗದಲ್ಲಿ ಮತ್ತಷ್ಟು ಅವಕಾಶಗಳು ಸಿಗಬೇಕು.
ಈಗ ಬರುತ್ತಿರುವ ಅವಕಾಶಗಳು ಒಂದೇ ರೀತಿಯಲ್ಲಿದೆ. ಬದುಕಿನಲ್ಲಿ ಒಂದಿಷ್ಟು ಛೇಂಜ್ ಅನ್ನಿಸುವ ಪಾತ್ರಗಳು ಬೇಕು ಅನ್ನೋದು ಶುಭ ಅವರ ಆಸೆ.
Discussion about this post