ಮಹಾ ಮನೆಯಿಂದ ಮೊದಲ ವಾರ ಯಾರು ಹೋಗ್ತಾರೆ ಅನ್ನುವ ಕುತೂಹಲ ಇನ್ನೂ ಜೀವಂತವಾಗಿದೆ.
ಶನಿವಾರ ಬಿಗ್ ಬಾಸ್ ಮನೆಯಿಂದ ಶುಭ ಪೂಂಜಾ ಹೊರಗೆ ಹೋಗ್ತಾರೆ ಅನ್ನುವ ಸುದ್ದಿಗಳು ಸುಳ್ಳಾಗಿದ್ದು, ಶುಭ ಪೂಂಜಾ ಎರಡನೇ ವಾರವೂ ಮನೆಯಲ್ಲಿ ಮುಂದುವರಿಯಲಿದ್ದಾರೆ.

ಈ ವಾರ ರಘು ಗೌಡ, ಧನುಶ್ರಿ, ನಿರ್ಮಲಾ, ವಿಶ್ವ, ಶುಭ ಪೂಂಜಾ ಅವರು ನಾಮಿನೇಟ್ ಆಗಿದ್ದರು.
ನಟಿ ಶುಭಾ ಪೂಂಜಾ ಹಾಗೂ ಗಾಯಕ ವಿಶ್ವ ಈ ಬಾರಿ ಸೇಫ್ ಆಗಿದ್ದು, ಮನೆಯಲ್ಲೇ ಮುಂದುವರಿಯಲಿದ್ದಾರೆ.
ಈಗ ಟಿಕ್‌ಟಾಕ್ ಸ್ಟಾರ್ ಧನುಶ್ರಿ, ನಿರ್ಮಲಾ ಹಾಗೂ ರಘು ಗೌಡ ಮೂವರಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಅನ್ನುವುದೇ ಕುತೂಹಲ. ಇದಕ್ಕೆ ಉತ್ತರ ಭಾನುವಾರ ಸಿಗಲಿದೆ.

ಈ ನಡುವೆ ಸೀಸನ್ 8ರ ಮೊದಲ ಕಿಚ್ಚನ ಜೊತೆ ವಾರದ ಕಥೆ ಅದ್ಭುತವಾಗಿ ಮೂಡಿ ಬಂದಿದ್ದು, ಅದರಲ್ಲೂ ಪಾವಗಡ ಮಂಜು ಸಖತ್ ಮಜಾ ಕೊಟ್ಟಿದ್ದಾರೆ. ಜೊತೆಗೆ ಬೆಂಕಿಯನ್ನೂ ಹಚ್ಚಿದ್ದಾರೆ.
ದಿವ್ಯಾ ಸುರೇಶ್ ಅವರನ್ನು ಕನ್ನಿಂಗ್ ಎಂದು ಕರೆಯುವ ಮೂಲಕ ಮುಂದಿನ ವಾರಕ್ಕೆ ಕಟೆಂಟ್ ಕೊಟ್ಟಿದ್ದಾರೆ. ಜೊತೆಗೆ ಸಂಬರಗಿ ಅವರನ್ನು ನಾರದನಿಗೆ ಹೋಲಿಸಿದ್ದಾರೆ.
Discussion about this post