ಬಿಗ್ ಬಾಸ್ ಸೀಸನ್ ಎಂಟರ ಮೊದಲ ವಾರಾಂತ್ಯದಲ್ಲಿ ನಟಿ ಶುಭಾ ಪೂಂಜಾ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.
ಮೊದಲ ವಾರ ಮಹಾಮನೆಯಿಂದ ಹೊರಹೋಗಲು ವಿಶ್ವನಾಥ್, ರಘು ಗೌಡ, ಧನುಶ್ರೀ, ಶುಭ ಪೂಂಜಾ ಹಾಗೂ ನೇರವಾಗಿ ನಾಮಿನೇಟ್ ಆಗಿದ್ದ ನಿರ್ಮಲಾ ಚೆನ್ನಪ್ಪ ಸಿದ್ದರಾಗಿದ್ದರು.
ಸೋಮವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಶುಭಾ ಪೂಂಜಾ ನಾಮಿನೇಟ್ ಆಗಿರಲಿಲ್ಲ. ವಾರದ ಮಧ್ಯೆ ನಡೆದ ನಾಮಿನೇಷನ್ ವರ್ಗಾವಣೆ ಟಾಸ್ಕ್ ಕಾರಣಕ್ಕೆ ಶುಭಾ ಪೂಂಜಾ ಮನೆಯಿಂದ ಒಂದು ಕಾಲ ಹೊರಗಿಟ್ಟಿದ್ದರು.
ನಿಧಿ ಸುಬ್ಬಯ್ಯ ವಿರುದ್ಧ ಸೋಲುಂಡಿದ್ದ ಶುಭಾ ನಾಮಿನೇಟ್ ಆಗಿದ್ದರು
ಮಾಹಿತಿಗಳ ಪ್ರಕಾರ ಶುಭ ಪೂಂಜಾ ಒಂದೇ ವಾರದ ಒಪ್ಪಂದದಲ್ಲಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

ಕಳೆದ ಏಳು ಸೀಸನ್ ಗಳಲ್ಲಿಯೂ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದ ಶುಭ ಪೂಂಜಾ 8ನೇ ಸೀಸನ್ ಒಪ್ಪಿಕೊಳ್ಳಲು ಈ ಕಂಡೀಷನ್ ಹಾಕಿದ್ದರು ಎನ್ನಲಾಗಿದೆ.
ಮತ್ತೊಂದು ಮೂಲಗಳ ಪ್ರಕಾರ ಅವರ ವಿರುದ್ಧ ಕಲರ್ಸ್ ಕನ್ನಡಕ್ಕೆ ಬಂದ ದೂರಿನ ಹಿನ್ನಲೆಯಲ್ಲಿ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಎಲ್ಲವೂ ಅಂತೆ ಕಂತೆಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಬರೋರು ಯಾರು ಅನ್ನುವುದಕ್ಕೆ ಉತ್ತರ ಸಿಗಬೇಕಾದರೆ ಭಾನುವಾರ 9.30ರ ತನಕ ಕಾಯಬೇಕು.
Discussion about this post