ಬೆಂಗಳೂರು : ಕನ್ನಡದ ಬಿಗ್ ಬಾಸ್ ಈ ತಿಂಗಳ 21 ಅಥವಾ 28 ರಂದು ಪ್ರಾರಂಭವಾಗುವುದು ಖಚಿತ.
ಈ ನಡುವೆ ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಮುನ್ನ ಮಲಯಾಳಂ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಮೋಹನ್ ಲಾಲ್ ನಡೆಸಿಕೊಡಲಿರುವ ಮಲಯಾಳಂ ಬಿಗ್ ಬಾಸ್ ಗೆ ಫೆ 14ರ ರಾತ್ರಿ 7.00 ಗಂಟೆಗೆ ಚಾಲನೆ ಸಿಗಲಿದೆ. ಏಷ್ಯಾ ನೆಟ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರತಿ ದಿನ 9.30ಕ್ಕೆ ಪ್ರಸಾರವಾಗಲಿದೆ,
ಈಗಾಗಲೇ ಮಲಯಾಳಂ ಬಿಗ್ ಬಾಸ್ ಪ್ರೋಮೋ ಅದ್ಭುತವಾಗಿ ಮೂಡಿ ಬಂದಿದೆ.
ಅಲ್ಲೂ ಈ ಬಾರಿ ಸ್ಪರ್ಧಿಗಳು ಯಾರೆಲ್ಲಾ ಇರುತ್ತಾರೆ ಅನ್ನುವ ಕುತೂಹಲವಿದೆ.
ಕಳೆದ ಸೀಸನ್ ಸ್ಪರ್ಧಿಗಳೇ ಈ ಬಾರಿ ಇರ್ತಾರೋ ಅಥವಾ ಹೊಸ ಮುಖಗಳು ಎಂಟ್ರಿ ಕೊಡ್ತಾವೋ ಗೊತ್ತಿಲ್ಲ.
ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾದ ಬಿಗ್ ಬಾಸ್ ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿತ್ತು.
ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಿ ಎಲ್ಲಾ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿತ್ತು.
ಇದೀಗ ಮೂರನೇ ಆವೃತ್ತಿಯ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಹೀಗಾಗಿ ಅರ್ಧಕ್ಕೆ ಮನೆಯಿಂದ ಹೊರಗೆ ಹೋದವರು ಮತ್ತೆ ಬರುತ್ತಾರೋ ಅತಾ ಹೊಸಬರು ಬರ್ತರೋ ಅನ್ನುವುದೇ ಕುತೂಹಲ.
Discussion about this post