ಈ ಬಿಗ್ ಬಾಸ್ ಕಾರ್ಯಕ್ರಮದ ಹಣೆ ಬರಹವೇ ಇಷ್ಟು. ಬಿಗ್ ಬಾಸ್ ಮನೆಗೆ ಹೋದವರು ತಮ್ಮ ಮುಖವಾಡವನ್ನು ಮಾತ್ರವಲ್ಲಜೆ ಬಿಗ್ ಬಾಸ್ ಮನೆಯ ಹೊರಗಿರುವವರ ಕಥೆಯನ್ನು ಟಾಂ..ಟಾಂ ಮಾಡಿ ಬಿಡುತ್ತಾರೆ.
ಇದೀಗ ನಿಧಿ ಸುಬ್ಬಯ್ಯ ವಿತಾಪದಲ್ಲೂ ಹೀಗೆ ಆಗಿದೆ. ಯಶ್ ತುಂಟಾಟದ ಕುರಿತಾದ ಕುತೂಹಲಕಾರಿ ವಿಷಯವೊಂದನ್ನು ಇದೀಗ ಅವರು ಹಂಚಿಕೊಂಡಿದ್ದಾರೆ.
ಈಗ ಇದು ಫನ್ನಿಯಾಗಿದೆ. ಮುಂದೊಂದು ದಿನ ದಿನ ಇದೇ ಟಾಪಿಕ್ ಯಶ್ ಸುತ್ತ ಸುತ್ತಿಕೊಂಡರೂ ಅಚ್ಚರಿಪಡಬೇಕಾಗಿಲ್ಲ.
ಬಿಗ್ ಬಾಸ್ 8 ರ ಎರಡನೇ ದಿನದ ರಾತ್ರಿ ಮಾತನಾಡುತ್ತಿದ್ದ ನಿಧಿ, ಓದು ಮೈಸೂರಿನಲ್ಲಿ ಓದುತ್ತಿದ್ದ ದಿನಗಳು, ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದೆ. ರೋಸ್ ಡೇ ಬಂದ್ರೆ ಸಾಕು ರಾಶಿ ರಾಶಿ ಗುಲಾಬಿ ಹೂಗಳು ನನಗೆ ಬರುತ್ತಿತ್ತು. ಇದರಿಂದ ನನಗೆ ಕಿರಿ ಕಿರಿಯಾಗುತ್ತಿತ್ತು.
ಅದೊಂದು ದಿನ ಅಜ್ಜಿ ಮನೆ ಬಳಿ 4 ಬೈಕ್ ಗಳಲ್ಲಿ ಬಂದ 8 ಹುಡುಗರು, ನಮ್ಮ ಮನೆಯ ಮೇಲೆ ಮಾಲೆ ಪಟಾಕಿ ಎಸೆದು ಹೋಗಿದ್ದರು.
ಅವರು ಎಸೆದಿದ್ದು ನನ್ನ ಕೋಣೆ ಎಂದು, ಆದರೆ ಅದು ತಾತನ ಕೋಣೆಯಾಗಿತ್ತು. ಘಟನೆಯಲ್ಲಿ ಕಿಟಕಿಯ ಕರ್ಟನ್ ಪೂರ್ತಿ ಸುಟ್ಟು ಹೋಗಿತ್ತು.
ಆದರೆ ಎಸೆದವರು ಯಾರು ಅನ್ನುವುದು ಗೊತ್ತೇ ಆಗಿರಲಿಲ್ಲ.
ಕಾಲ ಕಳೆದಂತೆ ವಿಷಯ ಕೂಡಾ ಮರೆತು ಹೋಯ್ತು. ಓದು ಮುಗಿಸಿದ ನಾನು ಚಿತ್ರರಂಗಕ್ಕೆ ಬಂದೆ.
ಅದೊಂದು ದಿನ ನಾನು ಯಾವುದೋ ಸ್ಟೇಜ್ ಫಂಕ್ಷನ್ ನ ರಿಹರ್ಸ್ ನಲ್ಲಿದ್ದೆ.
ಈ ವೇಳೆ ಬಂದ ವ್ಯಕ್ತಿಯೊಬ್ಬರು ಪಟಾಕಿಯ ವಿಷಯವನ್ನು ನೆನಪಿಸಿದರು, ಹೌದಲ್ಲ ಇದು ಇವರಿಗೆ ಹೇಗೆ ಗೊತ್ತು ಎಂದು ನಾನೇ ಯೋಚಿಸಿದೆ.
ಕೊನೆಗೆ ಅದನ್ನು ಅವರೇ ಒಪ್ಪಿಕೊಂಡು ಈ ಕೃತ್ಯ ಎಸಗಿದ್ದು ನಾವೇ ಕ್ಷಮಿಸಿ ಬಿಡಿ ಅಂದರು.
ಅಂದ ಹಾಗೇ ಅವತ್ತು ಪಟಾಕಿ ಎಸೆದವರು ಇಂದಿನ ರಾಕ್ ಬಾಯ್ ಯಶ್ ಎಂದು ಮಾತು ಮುಗಿಸಿದ್ದಾರೆ ನಿಧಿ ಸುಬ್ಬಯ್ಯ.