ಅಮೆರಿಕಾ : ಡೋನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುತ್ತಿದ್ದಂತೆ ಇದೀಗ ನಾಯಿ ಬೊಗಳುವ ಸದ್ದು ಕೇಳಿಸಲಾರಂಬಿಸಿದೆ.
ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರಾಗಿದ್ದು, ತಮ್ಮ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಶ್ವೇತ ಭವನಕ್ಕೆ ಕರೆ ತಂದಿದ್ದಾರೆ. ಭಾನುವಾರವೇ ಚ್ಯಾಂಪ್ ಮತ್ತು ಮೇಜರ್ ವೈಟ್ ಹೌಸ್ ಗೆ ಆಗಮಿಸಿದ್ದು, ಹೊಸ ಜಾಗಕ್ಕೆ ಹೊಂದಿಕೊಳ್ಳುತ್ತಿದೆ.
ಈ ಹಿಂದೆ ಜೊ ಬೈಡನ್ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲೂ ತಮ್ಮ ನೆಚ್ಚಿನ ಸಾಕುನಾಯಿಗಳನ್ನು ಅವರು ಶ್ವೇತಭವನಕ್ಕೆ ಕರೆತಂದು ನೋಡಿಕೊಳ್ಳುತ್ತಿದ್ದರು.
ಈ ನಡುವೆ ಜೊ ಬೈಡನ್ ಶ್ವೇತ ಭವನದಲ್ಲಿ ಬೆಕ್ಕುಗಳನ್ನು ಸಹ ಸಾಕೋದಿಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
Discussion about this post