Saturday, May 15, 2021
spot_img

ಭರಣಿ ನಕ್ಷತ್ರದವರು ಧರಣಿ ಆಳ್ತಾರ..ಈ ನಕ್ಷತ್ರದ ಗುಣಲಕ್ಷಣ ಮತ್ತು ವಿಶೇಷತೆಗಳೇನು ಗೊತ್ತಾ..?

Must read

- Advertisement -
- Advertisement -

ಭರಣಿ ನಕ್ಷತ್ರದ ರಾಶಿ – ಮೇಷ
ಭರಣಿ ನಕ್ಷತ್ರದ ಗ್ರಹ- ಶುಕ್ರ
ಭರಣಿ ನಕ್ಷತ್ರದ ಪ್ರಾಣಿ -ಆನೆ
ನಕ್ಷತ್ರದ ದೇವತೆ – ಯಮ
ಭರಣಿ ನಕ್ಷತ್ರದ ಗುಣ- ರಾಜಸ ಗುಣ
ಭರಣಿ ನಕ್ಷತ್ರದಲ್ಲಿ ಜನಿಸಿದ ಮಗುವಿಗೆ ಇಡಬಹುದಾದ ಹೆಸರಿನ ಮೊದಲ ಅಕ್ಷರಗಳು – ಲಿ,ಲೂ,ಲೇ,ಲೋ

ಜ್ಯೋತಿಷ್ಯದ ಪ್ರಕಾರ ಎರಡನೇ ನಕ್ಷತ್ರ ಭರಣಿ . ಭರಣಿ ಎಂದರೆ ರಕ್ಷಿಸು ಎಂದರ್ಥ. ಭರಣಿ ನಕ್ಷತ್ರದ ಗ್ರಹ ಶುಕ್ರ . ಭರಣಿ ನಕ್ಷತ್ರವು ಬೆಂಕಿ ಮತ್ತು ಶಕ್ತಿಯ ಮೂಲವಾಗಿದೆ.ಭರಣಿ ನಕ್ಷತ್ರದ ಅಧಿದೇವತೆ ಯಮಧರ್ಮರಾಜ. ಮನುಷ್ಯನ ದೇಶದಲ್ಲಿ ಭರಣಿ ನಕ್ಷತ್ರವು ಸ್ತ್ರೀಯ ಸಂತಾನೋತ್ಪತ್ತಿಯ ಅಂಗದ (ಯೋನಿಯ) ಸಂಕೇತವಾಗಿದೆ.

ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಬೆಂಕಿಯಂತೆ ತೇಜಸ್ಸನ್ನು ಹೊಂದಿರುತ್ತಾರೆ. ಭರಣಿ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ವಿಷಯದಲ್ಲಿ ಒಮ್ಮೆಲೇ ಧುಮುಕುವ ಪ್ರಯತ್ನ ಮಾಡುವುದಿಲ್ಲ.ಇವರು ಕಾಲಕ್ಕೆ ಅನುಗುಣವಾಗಿ ಉತ್ಸಾಹ, ಬದಲಾವಣೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ಕಡ್ಡಿ ಮುರಿದಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವವನ್ನು ಹೊಂದಿರುವ ಇವರು ಕಲಿಕೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

ಭರಣಿ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಯ ಗುಣ-ಲಕ್ಷಣಗಳು .
ಭರಣಿ ನಕ್ಷತ್ರದವರು ಹೊಳೆಯುವ ಕಣ್ಣುಗಳನ್ನು ಹೊಂದಿದ್ದು ಇವರು ಸಾಮಾನ್ಯವಾಗಿ ಮಧ್ಯಮ ಗಾತ್ರದವರಾಗಿರುತ್ತಾರೆ.ಇವರ ಮುಖದಲ್ಲಿ ಹಣೆಯ ಭಾಗ ದೊಡ್ಡದಾಗಿದ್ದು ತಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕೂದಲುಗಳಿರುತ್ತವೆ ಹಾಗೂ ಮುಖದಲ್ಲಿ ಆಕರ್ಷಕವಾದ ಮತ್ತು ಸುಂದರವಾದ ಹಲ್ಲುಗಳನ್ನು ,ದಟ್ಟವಾದ ಹುಬ್ಬುಗಳು, ಅತ್ಯಂತ ಕಿರಿದಾದ ಗಲ್ಲ (ಕೆನ್ನೆ)ವನ್ನು ಹೊಂದಿರುತ್ತಾರೆ. ಲೈಂಗಿಕ ವಿಷಯದಲ್ಲಿ ತಾವಾಗಿಯೇ ಪಾಲ್ಗೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ ,ಪಾದರಸ ,ದರ್ಪಣಾಂಜನ ಜ್ಯೋತಿಷ್ಯರು
ಮೊ:- 8746999333,6363005876

- Advertisement -
- Advertisement -spot_img
- Advertisement -spot_img

Latest article