ಬೆಂಗಳೂರು : ಬಸ್ ಪ್ರಯಾಣ ಪ್ರಿಯರಿಗೊಂದು ಗುಡ್ ನ್ಯೂಸ್ ಅನ್ನು ಸಾರಿಗೆ ಸಂಸ್ಥೆ ಕೊಟ್ಟಿದೆ.ನಾಳೆಯಿಂದ ಎಲೆಕ್ಟಿಕ್ ಬಸ್ ಬೆಂಗಳೂರಿನ ರಸ್ತೆಗಿಳಿಯಲಿದೆ. ಈ ಮೂಲಕ ರಾಜಧಾನಿಯಲ್ಲಿ ಇಲೆಕ್ಟ್ರಿಕ್ ಬಸ್ ಓಡಿಸಬೇಕು ಅನ್ನುವ ಹಲವು ವರ್ಷಗಳ ಕನಸನ್ನು BMTC ಸಾಕಾರಗೊಳಿಸಲಿದೆ.
ಹೆಚ್ಚುತ್ತಿರುವ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ ತರಲು ಬಿಎಂಟಿಸಿ ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ರಾಜಕೀಯ ಇಚ್ಛಾಶಕ್ತಿ ಮತ್ತು ಲಾಬಿ ಇದಕ್ಕೆ ಅಡ್ಡಿಯಾಗಿತ್ತು. ಈ ನಡುವೆ ಚೀನಾ ಬಾಸ್ ಗಳನ್ನು ತರುವ ಬಗ್ಗೆಯೂ ಚರ್ಚೆಯಾಗಿತ್ತು. ಇದೀಗ ಕೇಂದ್ರ ಸರ್ಕಾರವೇ ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಬೇಕು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಇತ್ತೀಚಿನ ವರ್ಷಗಳಿಂದ ಈ ಕಾರ್ಯಕ್ಕೆ ವೇಗ ದೊರೆತಿತ್ತು. ಅಕ್ಟೋಬರ್ 2020ರಲ್ಲಿ ಈ ಬಸ್ ಅನ್ನು ಪ್ರಾಯೋಗಿಕವಾಗಿ ರಸ್ತೆಗೆ ಇಳಿಸಲಾಗಿತ್ತು.
ಇದಾದ ಬಳಿಕ ಎಲೆಕ್ಟ್ರಿಕ್ ಬಸ್ ಅನ್ನು ಗುತ್ತಿಗೆ ಆಧಾರದ ಮೇಲೆ ಪೂರೈಕೆ ಮಾಡಲು ಬಿಎಂಟಿಸಿ 3 ಬಾರಿ ಟೆಂಡರ್ ಕರೆದಿತ್ತು. ಮೊದಲ ಬಾರಿ ಪ್ರತಿ ಕಿ. ಮೀ.ಗೆ 105 ರೂ. ದರ ನಮೂದು ಮಾಡಲಾಗಿತ್ತು. ಹೀಗಾಗಿ ಟೆಂಡರ್ ರದ್ದುಗೊಂಡಿತ್ತು. ಎರಡನೇ ಬಾರಿಗೆ ಟೆಂಡರ್ ಒಪ್ಪಿದ್ದ ಒಲೆಕ್ಟ್ರಾ ಕಂಪನಿ ಪ್ರತಿ ಕಿ. ಮೀ.ಗೆ 89.64 ರೂ. ದರವನ್ನು ನಿಗದಿ ಮಾಡಿತ್ತು. ಆಗ್ಲೂ ಟೆಂಡರ್ ಅಂತಿಮವಾಗಲಿಲ್ಲ. ಕೊನೆಗೆ ಪ್ರತಿ ಕಿ. ಮೀ. ಗೆ 51.67 ರೂ. ದರವನ್ನು NTPC JBM ಕಂಪನಿ ಒಪ್ಪಿಕೊಂಡಿದೆ.

ಹೀಗಾಗಿ ಇದೀಗ ನಾಳೆಯಿಂದ ಬಸ್ ರಸ್ತೆಗಿಳಿಸಲು ಟೆಂಡರ್ ಪಡೆದ ಕಂಪನಿ ಒಪ್ಪಿಕೊಂಡಿದ್ದು, ಬಿಎಂಟಿಸಿಗೆ ಒಟ್ಟು 90 ಬಸ್‌ಗಳನ್ನು NTPC JBM ಕಂಪನಿ ಪೂರೈಕೆ ಮಾಡಲಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಬಸ್‌ಗಳು ರಸ್ತೆಗಿಳಿಯಲಿದೆ. ಮೊದಲ ಹಂತದಲ್ಲಿ ನಮ್ಮ ಮೆಟ್ರೋಗೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಾತ್ರ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಲಿದೆ. ಬಸ್ ಪೂರೈಕೆ ಮಾಡೋ ಕಂಪನಿಯೇ ಚಾಲಕರನ್ನು ನೇಮಿಸಿ, ವೇತನ ನೀಡಲಿದೆ. ಬಸ್ ನಿರ್ವಹಣಾ ವೆಚ್ಚ, ವಿದ್ಯುತ್ ಶುಲ್ಕವನ್ನು ಕೂಡಾ ಕಂಪನಿಯೇ ಭರಿಸಲಿದೆ. ಬಸ್‌ನ ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೇಮಿಸಬೇಕಾಗಿದೆ. ಇದಕ್ಕಾಗಿ ಬಿಎಂಟಿಸಿ ನಿಲ್ದಾಣಗಳಲ್ಲಿ ಜಾರ್ಜಿಂಗ್ ಪಾಯಿಂಟ್ ಗಳನ್ನು ಕೂಡಾ ಹಾಕಲಾಗಿದೆ.
ಇನ್ನು FAME II ಅಡಿಯಲ್ಲಿ BMTC ಕಳೆದ ವಾರ ಬಿಡ್ ಗಳನ್ನು ತೆರೆದಿದ್ದು ಪ್ರತೀ ಕಿಮೀಗೆ ಅಶೋಕ್ ಲೈಲ್ಯಾಂಡ್ 48.9 ರೂಪಾಯಿ, ಟಾಟಾ ಮೋಟಾರ್ಸ್ 54.9 ರೂಪಾಯಿ, JBM 57.97 ರೂಪಾಯಿ ಹಾಗೂ ಒಲೆಕ್ಟ್ರಾ 59.5 ರೂಪಾಯಿಗೆ ಬಿಡ್ ಮಾಡಿದೆ. ಅಶೋಕ್ ಲೈಲಾಂಡ್ ಈ ಬಿಡ್ ಪಡೆದಿದ್ದು ಒಟ್ಟು 300 ಬಸ್ ಗಳನ್ನು ಪೂರೈಕೆ ಮಾಡಬೇಕಾಗಿದೆ.
ಮತ್ತೊಂದು ಕಡೆ KSRTC ಕೂಡಾ FAME II ಅಡಿಯಲ್ಲಿ ಟೆಂಡರ್ ಕರೆದಿದ್ದು ಒಲೆಕ್ಟ್ರಾ ಕಂಪೆನಿ ಪ್ರತೀ ಕಿಮೀ 55 ರೂಪಾಯಿಗೆ ಬಿಡ್ ಮಾಡಿದ್ದು, ಇದೇ ಕಡಿಮೆ ಮೊತ್ತವಾಗಿದೆ. ಹೀಗಾಗಿ 50 ಎಸಿ ಬಸ್ ಗಳನ್ನು ಕೆಎಸ್ಆರ್ಟಿಸಿ ಗೆ ಪೂರೈಕೆ ಮಾಡಬೇಕಾಗಿದೆ.
ಈ ಎರಡೂ ಆರ್ಡರ್ ಕುರಿತಂತೆ ಅಂತಿಮ ಆದೇಶ ಇನ್ನೂ ಹೊರ ಬಿದ್ದಿಲ್ಲ. ಇನ್ನು FAME II ಯೋಜನೆ ಪ್ರಕಾರ ಮಾರ್ಚ್ 2021ಕ್ಕೆ ಬಸ್ ಗಳು ಪೂರೈಕೆಯಾಗಬೇಕಾಗಿತ್ತು. ಕೊರೋನಾ ಹಾಗೂ ಬಿದ್ ಬಗ್ಗೆ ಕಂಪನಿಗಳು ನಿರಾಸಕ್ತಿ ಹೊಂದಿದ ಕಾರಣ ಮುಂದಕ್ಕೆ ಹೋಗಿದೆ.
Discussion about this post