ಬೆಂಗಳೂರು : ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ನಮ್ಮ ಮೆಟ್ರೋ ತಮ್ಮ ರೈಲು ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಇಂದಿನಿಂದ ಈ ಆದೇಶ ಜಾರಿಗೆ ಬರಲಿದ್ದು, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ತನಕ ರೈಲು ಸಂಚರಿಸಲಿದೆ.
ಕೊನೆಯ ಮೆಟ್ರೋ ರೈಲು ಕೆಂಗೇರಿ, ಬೈಯಪ್ಪನಹಳ್ಳಿ, ಸಿಲ್ಕ್ ಬೋರ್ಡ್ ಹಾಗೂ ನಾಗಸಂದ್ರದಿಂದ ರಾತ್ರಿ 9.30ಕ್ಕೆ ಹೊರಡಲಿದೆ. ಈ ಹಿಂದೆ ಬೆಳಗ್ಗೆ 7 ರಿಂದ ರಾತ್ರಿ 8ರ ತನಕ ಮೆಟ್ರೋ ಸೇವೆ ಜಾರಿಯಲ್ಲಿತ್ತು. ಜೊತೆಗೆ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದ ಹಿನ್ನಲೆಯಲ್ಲಿ ಮೆಟ್ರೋ ಸೇವೆ ವಿಸ್ತರಿಸಲು ಸಾಧ್ಯವಿಲ್ಲ ಅಂದಿದ್ದು.
Discussion about this post