ದೇವರಿಗೆ ಅಭಿಷೇಕ ಮಾಡುವಾಗ ವಿಸ್ಮಯವೊಂದು ನಡೆದಿರುವ ಘಟನೆ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ. ಅರ್ಚಕರು ಒಂದು ಹಂತದ ಅಭಿಷೇಕ ಮುಗಿಸಿ ಬೇರೆ ಅಭಿಷೇಕಕ್ಕೆ ಸಿದ್ದತೆ ಮಾಡಲು ತೆರಳಿದ ವೇಳೆ ಏಕಾಕಏಕಿ ದೇವರ ವಿಗ್ರಹದ ಕೊರಳಿನ ಚೈನು ಹಿಂದಕ್ಕೆ ಸರಿದಿದೆ. ಆದರೆ ಇದನ್ನು ಗಮನಿಸದ ಅರ್ಚಕರು ಚೈನ್ ಸರಿ ಮಾಡಿ ಅಭಿಷೇಕ ಮುಂದುವರಿಸಿದ್ದಾರೆ.
ಬಳಿಕ ವಿಡಿಯೋ ನೋಡಿದಾಗ ಈ ಚಮತ್ಕಾರ ಬೆಳಕಿಗೆ ಬಂದಿದೆ. ಆದರೆ ವಿಗ್ರಹದ ಹಿಂಭಾಗದಲ್ಲಿ ಚೈನಿಗೆ ಸಿಲುಕಿ ಬೇರೆ ಯಾವುದಾದರೂ ವಸ್ತುಗಳಿದ್ರೆ ನೀರಿನ ಭಾರಕ್ಕೆ ಅದು ಜಾರಿರುವ ಸಾಧ್ಯತೆ ಇದೆ. ಅಂದ ಹಾಗೇ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಈ ವಿಸ್ಮಯ ನಡೆದಿದೆ. ಸುಮಾರು 400 ವರ್ಷದ ಇತಿಹಾಸವಿರುವ ದೇವಾಲಯ ಇದಾಗಿರುವ ಕಾರಣ ಈ ಚಮತ್ಕಾರ ಕುತೂಹಲ ಕಾರಣವಾಗಿದೆ.
Discussion about this post