ಬೆಂಗಳೂರು : ಇನ್ಮುಂದೆ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ನೇರವಾಗಿ ಪ್ರಯಾಣ ಬೆಳೆಸಬಹುದಾಗಿದ್ದು, ರಾಜಧಾನಿಯನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಯ ಸಣ್ಣಮಟ್ಟಿನ ಪರಿಹಾರವೊಂದು ದೊರೆಯಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿಗೆ ಮೆಟ್ರೋ ಸಂಚಾರ ಇಂದಿನಿಂದ ಪ್ರಾರಂಭವಾಗಲಿದ್ದು, ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಕೆಂಗೇರಿಯಿಂದ ನಾಯಂಡಹಳ್ಳಿಗೆ 7.53 ಕಿಮೀ ಉದ್ದದ ಮಾರ್ಗ ಇದಾಗಿದ್ದು, 15 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದೆ. ಜೊತೆಗೆ ಈ ಮಾರ್ಗ ತೆರೆದಿರುವ ಕಾರಣ ಕೆಂಗೇರಿಯಿಂದ ಬೈಯಪ್ಪನಹಳ್ಳಿಯ 25 ಕಿಮೀ ಮೆಟ್ರೋ ಮಾರ್ಗವನ್ನು 1 ಗಂಟೆಯಲ್ಲಿ ಕ್ರಮಿಸಬಹುದಾಗಿದ್ದು, 56 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ. ರಸ್ತೆ ಮಾರ್ಗದಲ್ಲಾದರೆ ಸಮಯ ಮತ್ತು ಹಣವೂ ದುಬಾರಿಯಾಗಲಿದೆ.
Discussion about this post