ಹೈಕೋರ್ಟ್ ಬೀಸಿದ ಚಾಟಿ ಬಿಬಿಎಂಪಿಗೆ ಸಿಕ್ಕಾಪಟ್ಟೆ ಬಿಸಿ ಮುಟ್ಟಿಸಿದಂತಿದೆ. ಹೀಗಾಗಿ ಹೈಕೋರ್ಟ್ ನಿರ್ದೇಶನದ ನಂತರ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ರಾಜಧಾನಿಯ ಸೌಂದರ್ಯವನ್ನು ಮತ್ತೆ ಮರುಕಳಿಸುವತ್ತ ಬಿಬಿಎಂಪಿ ಹೆಜ್ಜೆ ಇಟ್ಟಿದೆ.
ಇದೀಗ ಪೋಸ್ಟರ್ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದ ಗೋಡೆಗಳಿಗೆ ಅಂಟಿಸಲಾಗಿರುವ ಪೋಸ್ಟರ್ ಗಳನ್ನು ತೆರವುಗೊಳಿಸಲು ಪಾಲಿಕೆ ನಿರ್ಧರಿಸಿದ್ದು, ಇದಕ್ಕೆ ಮುನ್ನುಡಿಯಾಗಿ ಮೇಯರ್ ಸಂಪತ್ ರಾಜ್ ಪ್ಯಾಲೇಸ್ ರಸ್ತೆಯ ಕಾವೇರಿ ಗೆಸ್ಟ್ ಹೌಸ್ ಸಮೀಪ ಇರುವ ಪೋಸ್ಟರ್ ತೆರವುಗೊಳಿಸಿದರು.
ಈ ತೆರವು ಕಾರ್ಯಾಚರಣೆಯಲ್ಲಿ ನಗರದ 198 ಕಾರ್ಪೋರೇಟರ್ ಗಳು ಭಾಗಿಯಾಗಲಿದ್ದು, , ಭಾನುವಾರವು ತೆರವು ಕಾರ್ಯ ನಡೆಯಲಿದೆ.
ಇನ್ನು ಪೌರ ಕಾರ್ಮಿಕರು ಕೂಡ ಇಂದು ಮತ್ತು ನಾಳೆ ಒಂದು ಗಂಟೆ ಕಾಲ ತೆರವು ಪೋಸ್ಟರ್ ತೆರವು ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗೌರವಾನ್ವಿತ ಮೇಯರ್ ಇಟ್ಟಿರುವ ಹೆಜ್ಜೆ ಚೆನ್ನಾಗಿದೆ. ಆದರೆ ಈ ಕೆಲಸ ಎಂದೋ ಪ್ರಾರಂಭವಾಗಬೇಕಾಗಿತ್ತು. ಪರವಾಗಿಲ್ಲ ತಡವಾಗಿಯಾದರೂ, ಹೈಕೋರ್ಟ್ ಬಿಸಿ ಮುಟ್ಟಿಸಿದ ತಕ್ಷಣ ಕಾರ್ಯ ಪ್ರಾರಂಭಿಸಿದ್ದೀರಿ. ಆದರೆ ಚಲನಚಿತ್ರಗಳ ಪೋಸ್ಟರ್ ಗಳೇ ನಗರದ ಸೌಂದರ್ಯವನ್ನು ಕೆಡಿಸುತ್ತಿದೆ. ಫಿಲ್ಮಂ ಚೇಂಬರ್ ಅಥವಾ ನಿರ್ಮಾಪಕರೊಂದಿಗೆ ಸಭೆ ನಡೆಸಿ ಇದಕ್ಕೊಂದು ಇತಿಶ್ರೀ ಹಾಡಿದ್ದರೆ ಚೆನ್ನಾಗಿತ್ತು.
Karnataka: Bengaluru Mayor Sampath Raj started a drive to remove posters and banners in Gandhi Nagar area, earlier today. pic.twitter.com/xZ9PLMjm7N
— ANI (@ANI) August 11, 2018