ಬೆಂಗಳೂರು : ಗೋವಿಂದಪುರ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನಶೆ ಸುಂದರಿ ಸೋನಿಯಾ ಅಗರ್ ವಾಲ್ ಮತ್ತು ಆಕೆಯ ಇನಿಯ ದಿಲೀಪನ ವಿಚಾರಣೆ ಎರಡನೇ ದಿನವೂ ಮುಂದುವರಿದಿದೆ. ನಿನ್ನೆ ಪೊಲೀಸರ ಮುಂದೆ ನಾನು ಅಂತವಳಲ್ಲ ಎಂದು ಹೇಳಿದ್ದ ಸೋನಿಯಾ ಮುಂದೆ ಪೊಲೀಸರು ಇಂದು ಅನೇಕ ಸಾಕ್ಷಿಗಳನ್ನು ತೆರೆದಿಟ್ಟಿದ್ದಾರೆ. ಡ್ರಗ್ಸ್ ಪೆಡ್ಲರ್ ಥಾಮಸ್ ಜೊತೆಗಿನ ನಂಟಿಗೂ ಸಾಕ್ಷಿ ಕೊಟ್ಟಿದ್ದಾರೆ.

ಈ ನಡುವೆ ಸೋನಿಯಾ ಜೊತೆ ಸೇರಿ ಅಮಲು ಏರಿಸಿಕೊಂಡರ ಅಮಲು ಇಳಿಸಲು ಮುಂದಾಗಿರುವ ಪೊಲೀಸರು ಸೋನಿಯಾ ಸಂಪರ್ಕದಲ್ಲಿರುವ ನಟಿಯರ ಪಟ್ಟಿ ನೋಡಿ ದಂಗಾಗಿದ್ದಾರೆ. ಮೂಲಗಳ ಪ್ರಕಾರ 15ಕ್ಕೂ ಹೆಚ್ಚು ನಟಿಯರು ಸೋನಿಯಾ ಸಂಪರ್ಕದಲ್ಲಿದ್ದು, ಆದರೆ ಸೋನಿಯಾ ಸಂಪರ್ಕದಲ್ಲಿರುವ ಎಲ್ಲರೂ ನಶೆಯ ದಾಸರಾಗಿದ್ದರೆ ಅನ್ನುವ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಸೋನಿಯಾ ಬ್ಯೂಟಿಷಿಯನ್ ಮತ್ತು ಕಾಸ್ಮೆಟಿಕ್ ಡೀಲರ್ ಆಗಿರುವ ಕಾರಣ ಕೆಲ ನಟಿಯರು ಈ ಕಾರಣಕ್ಕಾಗಿ ಸಂಪರ್ಕದಲ್ಲಿರುವ ಸಾಧ್ಯತೆಗಳಿದೆ.

ಹೀಗಾಗಿ ಎಲ್ಲಾ 15 ನಟಿಯರಿಗೂ ನೋಟೀಸ್ ಕೊಡಲು ಪೊಲೀಸರು ಮುಂದಾಗಿದ್ದು, ಈ ಪೈಕಿ ಕೆಲವರು ಈ ಹಿಂದೆ ಸಿಸಿಬಿ ವಿಚಾರಣೆ ಎದುರಿಸಿದ್ದರು ಎನ್ನಲಾಗಿದೆ. ಆಗ ಸೂಕ್ತ ಸಾಕ್ಷಿಗಳಿಲ್ಲ ಕಾರಣ ಈ ನಟಿಯರು ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಥಾಮಸ್ ಮತ್ತು ಸೋನಿಯಾ ನೆಟ್ ವರ್ಕ್ ನಲ್ಲಿ ಈ ನಟಿಯರು ಇದ್ದಾರೆಯೇ ಅನ್ನುವ ಬಗ್ಗೆ ತನಿಖೆ ನಡೆಯಲಿದೆ.
Discussion about this post