ಬೆಂಗಳೂರು : ಅಕ್ರಮ ಸಂಬಂಧದ ಕಾರಣದಿಂದ ಈ ಜಗತ್ತಿನ ಏನೇನೋ ಆಗಿ ಹೋಗಿದೆ. ಆದರೆ ಜನ ಮಾತ್ರ ಇನ್ನೂ ಪಾಠ ಕಲಿತಿಲ್ಲ. ಅಕ್ರಮ ಸಂಬಂಧ ಕಾರಣದಿಂದ ಆಗಿರುವ ಕೊಲೆಗಳಿಗೂ ಲೆಕ್ಕವಿಲ್ಲ.
ಈ ನಡುವೆ ತಾಯಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಮಗನನ್ನು ತಾಯಿಯ ಪ್ರಿಯಕರನೇ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಮರ್ಫಿ ಟೌನ್ ನಿವಾಸಿ ನಂದು ( 17) ಎಂದು ಗುರುತಿಸಲಾಗಿದೆ.
ಮರ್ಫಿ ಟೌನ್ ಗೀತಾ ಆರು ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರಿಗೆ ಫೇಸ್ ಬುಕ್ ನಲ್ಲಿ ಶಕ್ತಿವೇಲು ಅನ್ನುವ ಅವಿವಾಹಿತ ಆಟೋ ಚಾಲಕನ ಪರಿಚಯವಾಗಿದೆ. ಹೀಗೆ ಪರಿಚಯವಾದವರು ಹೊತ್ತಲ್ಲದ ಹೊತ್ತಲ್ಲಿ ಸೇರಲಾರಂಭಿಸಿದ್ದರು. ಈ ನಡುವೆ ತನ್ನ ತಾಯಿ ಹಾದಿ ತಪ್ಪಿರುವ ವಿಚಾರ ನಂದುವಿಗೆ ಗೊತ್ತಾಗಿದೆ.
ಹೀಗಾಗಿ ಕಳೆದ ಸೋಮವಾರ ರಾತ್ರಿ ಮನೆಗೆ ಶಕ್ತಿವೇಲುವನ್ನು ನಂದು ಪ್ರಶ್ನಿಸಿದ್ದಾನೆ. ನಮ್ಮ ಮನಗೆ ಯಾಕೆ ಬರ್ತಿಯಾ, ಬರಬೇಡ ಅಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಕ್ತಿವೇಲು ಮನೆಯಲ್ಲಿದ್ದ ಚಾಕುವಿನಿಂದ ನಂದುವನ್ನು ಇರಿದಿದ್ದಾನೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ನಂದುವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ತ್ರಾವವಾದ ಕಾರಣ ದಾರಿ ಮಧ್ಯೆ ನಂದು ಮೃತಪಟ್ಟಿದ್ದಾರೆ. ಇದೇ ಶಕ್ತಿವೇಲುವನ್ನು ಬಂಧಿಸಿರುವ ಪೊಲೀಸರು, ಕೊಲೆಯಲ್ಲಿ ಗೀತಾ ಪಾತ್ರವಿದೆಯೇ ಅನ್ನುವ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.
Discussion about this post