ಬೆಂಗಳೂರು : ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಆಡಿ ಕಾರು ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯಿಂದ ವಾಹನ ಸವಾರರು ಒಂದೆಡೆ ಆತಂಕಿತರಾಗಿದ್ದಾರೆ. ಸಂಚಾರಿ ವಿಭಾಗದ ಪೊಲೀಸರು ಕೂಡಾ ತಲೆ ಕೆಡಿಸಿಕೊಂಡಿದ್ದಾರೆ.
ಈ ನಡುವೆ ಈ ಘಟನೆ ಸೇಫ್ಟಿಗೆ ಹೆಸರಾಗಿರುವ ಆಡಿ ಕಂಪನಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಆಡಿ ಕಾರು ಖರೀದಿಸುವವರೆಲ್ಲಾ ದೊಡ್ಡ ದೊಡ್ಡ ಶ್ರೀಮಂತರು. ಸೇಫ್ಟಿ ಮತ್ತು ಪ್ರತಿಷ್ಟೆಯ ಕಾರಣದಿಂದ ಈ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಆದರೆ ಇದೀಗ ಈ ಅಪಘಾತದಲ್ಲಿ ಆಡಿ ಕಾರಿನಲ್ಲಿದ್ದವರೆಲ್ಲಾ ಮೃತಪಟ್ಟಿದ್ದಾರೆ ಅಂದರೆ ಸಹಜವಾಗಿಯೇ ಕಾರಿನ ಸೇಫ್ಟಿಯ ಪ್ರಶ್ನೆ ಎದ್ದಿದೆ. ಜೊತೆಗೆ ರೇಟಿಂಗ್ ಮೇಲೂ ಪರಿಣಾಮ ಬೀರಿದೆ.

ಹೀಗಾಗಿ ಈ ಅಪಘಾತದ ಬಗ್ಗೆ ಆಡಿ ಕಂಪನಿಯ ಹೆಡ್ ಆಫೀಸನಲ್ಲೇ ಚರ್ಚೆಗಳು ನಡೆದಿದ್ದು, ಬೆಂಗಳೂರು ವಿಭಾಗದ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಈ ಸಂಬಂಧ ಪೊಲೀಸರನ್ನು ಭೇಟಿಯಾಗಿರುವ ಅಧಿಕಾರಿಗಳು ಮಾಹಿತಿಯನ್ನು ಕೂಡಾ ಕೇಳಿದ್ದಾರಂತೆ. ಒಟ್ಟಿನಲ್ಲಿ ನಿರ್ಲಕ್ಷ್ಯದಿಂದ ನಡೆದಿರುವ ಅಪಘಾತಕ್ಕೆ ದೊಡ್ಡ ದೊಡ್ಡವರು ತಲೆ ಕೆಡಿಸಿಕೊಳ್ಳುವಂತಾಗಿದೆ.

Discussion about this post