Wednesday, March 3, 2021

ನಡುವೆ ಅಂತರವಿರಲಿ – ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾರಕಿಹೊಳಿ, ಹೆಬ್ಬಾಳ್ಕರ್ ನಡುವೆ ಒಂದು ಕುರ್ಚಿ ಗ್ಯಾಪ್

Must read

ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರಾದ . ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ ಜಾರಕಿಹೊಳಿ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ.

ಒಂದೇ ಸೋಫಾ ಮೇಲೆ ಇಬ್ಬರೂ ಅಕ್ಕ ಪಕ್ಕ ಕುಳಿತರೂ ನಡುವೆ ಒಬ್ಬರೂ ಕೂರುವಷ್ಟು ಜಾಗವನ್ನು ಬಿಟ್ಟು ನಮ್ಮ ನಡುವೆ ಎಲ್ಲವೂ ಸರಿ ಇಲ್ಲ ಅನ್ನುವುದನ್ನು ಸಾರಿದ್ದಾರೆ.
ಇನ್ನು ಅಕ್ಕ ಪಕ್ಕ ಕೂತಿದ್ದರು ಪರಸ್ಪರ ಮಾತನಾಡಿಲ್ಲ. ಹೆಬ್ಬಾಳ್ಕರ್ ಶಾಸಕ ಅಭಯ ಪಾಟೀಲ್, ಅನಿಲ್ ಬೆನಕೆ ಜೊತೆ ಚರ್ಚೆ ಮಾಡಿದ್ರೆ ಸತೀಶ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಜೊತೆಗೆ ಚರ್ಚೆ ನಡೆಸಿ ಕಾಲ ಸವೆಸಿದ್ರು.

ಹೆಬ್ಬಾಳ್ಕರ್ ವಿರುದ್ಧ ತೊಡೆ ತಟ್ಟಿದ್ದ ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟಿದ್ದರು. ಆಗ ಬಂಡಾಯ ಸಾರಿದ್ದ ರಮೇಶ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಸತೀಶ್, ಅವನು ಒಂದು ವಸ್ತುವಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದಾನೆ ಅಂದಿದ್ದರು.

- Advertisement -
- Advertisement -

Latest article