ಬ್ರೆಜಿಲ್ ದೇಶದಲ್ಲಿ ಹಸುಗಳಲ್ಲಿ ಹುಚ್ಚು ರೋಗದ ಪ್ರಕರಣ ದೃಢಪಟ್ಟಿದ್ದು, ಈ ಬಗ್ಗೆ ಬ್ರೆಜಿಲ್ ನ ಕೃಷಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಜೊತೆಗೆ ಚೀನಾಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಸೋಂಕಿತ ಗೋಮಾಂಸ ಸೇವನೆಯಿಂದ ಮನುಷ್ಯರ ಆರೋಗ್ಯದಲ್ಲಿ ವ್ಯತ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮಿನಾಸ್ ಗೆರಾಯ್ಸ್ ಹಾಗೂ ಮಟೊ ಗ್ರೋಸೊ ರಾಜ್ಯಗಳಲ್ಲಿ ಎಂದಿನಂತೆ ಹಸುಗಳ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ರೋಗವಿರುವುದು ದೃಢಪಟ್ಟಿದೆ. ಬ್ರೆಜಿಲ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶವಾಗಿದ್ದು , ಚೀನಾ ದೊಡ್ಡ ಗ್ರಾಹಕನಾಗಿದೆ.
1980ರಲ್ಲಿ ಬ್ರಿಟನ್ ನಲ್ಲಿ ಹುಚ್ಚು ರೋಗ ಹಸುಗಳಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಅದು ಇಡೀ ವಿಶ್ವಕ್ಕೆ ಹರಡಿದೆ.
Discussion about this post