ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮೀಟೂ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ನಾನು ಎಂದಿಗೂ ಮುಜುಗರ ಪಟ್ಟುಕೊಂಡಿಲ್ಲ ಎಂದು ನಟಿ ಶ್ರುತಿ ಹರಿಹರನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೀಟೂ ವಿಚಾರದಿಂದ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಆದರೆ ಇದಕ್ಕೆ ವಿಷಾದವಿಲ್ಲ. ಘಟನೆ ಬಗ್ಗೆ ಮಾತನಾಡಿದ ದಿನದಿಂದ ಈ ವರೆಗೂ ಯಾವುದೇ ಸಿನಿಮಾ ಅವಕಾಶ ಬಂದಿಲ್ಲ. ಹಾಗಂತ ಈ ಕುರಿತುನನಗೆ ಚಿಂತೆಯಿಲ್ಲ.

ಮೀಟೂನಂತಹ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಧೈರ್ಯದಿಂದ ಹೋರಾಡಬೇಕು ಎಂದು ತಿಳಿಸಿದರು.
ಈ ಸಮಯದಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಅವಕಾಶ ಸಿಕ್ಕಿತು. ಮಗಳು ಹಾಗೂ ಪತಿಯ ಜೊತೆಗೆ ಸಂತೋಷವಾಗಿದ್ದೇನೆ ಎಂದಿದ್ದಾರೆ ಶೃತಿ.

ಇನ್ನು ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಬಂದ ಕಾರಣದಿಂದ ಮತ್ತೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಿರುವುದಾಗಿ ಶೃತಿ ಹೇಳಿದ್ದಾರೆ.

Discussion about this post