ಮಾರ್ಗಸೂಚಿಯನ್ನು ಜಾರಿಗೊಳಿಸೋ ನಿಯತ್ತು ಬಿಬಿಎಂಪಿ ಅಧಿಕಾರಿಗಳಗೆ ಬೇಕಲ್ವ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲ ಪೇಯಿಂಗ್ ಗೆಸ್ಟ್- ಪಿಜಿಗಳಿಗೆ ಬಿಬಿಎಂಪಿ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಪಿಜಿಗಳಲ್ಲಿ ಎಲ್ಲ ಪ್ರವೇಶ, ನಿರ್ಗಮನ ದ್ವಾರ ಹಾಗೂ ಆವರಣದ ಸುತ್ತಮುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸಿಸಿಟಿವಿಯ ಎಲ್ಲಾ ಜೃಶ್ಯಗಳನ್ನು 90 ದಿನಗಳವರೆಗೆ ಸಂರಕ್ಷಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು,. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-೨೦೨೦ ರ ಕಾಯ್ದೆಯಡಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುವ ಬಿಬಿಎಂಪಿ, ಎಲ್ಲಾ ಪಿಜಿಗಳು ಪಾಲಿಕೆಯಿಂದ ಪರವಾನಗಿ ಪತ್ರ ಪಡೆಯುವ ಮುನ್ನ ಅಗ್ನಿ ಸುರಕ್ಷಿತಾ ಕ್ರಮಗಳನ್ನು ಖಚಿತಪಡಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣಪತ್ರವನ್ನು ಪಡೆದುಕೊಂಡಿರಬೇಕು ಅಂದಿದೆ.
ಪಿಜಿಯಲ್ಲಿ ಕನಿಷ್ಠ ಒಬ್ಬ ಸುರಕ್ಷತಾ ಸಿಬ್ಬಂದಿಯನ್ನು ದಿನದ ೨೪ ಗಂಟೆಯೂ ಸೇವೆಗೆ ನಿಯೋಜಿಸಿರಬೇಕು. ಹಾಗೆಯೇ ಸ್ವಚ್ಚತೆಯನ್ನು ಕಾಪಾಡುವ ಜೊತೆಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬಿಬಿಎಪಿ ಹೊರಡಿಸಿರುವ ಮಾರ್ಗಸೂಚಿ ಚೆನ್ನಾಗಿದೆ. ಆದರೆ ಇದನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಯತ್ತು ಬಿಬಿಎಂಪಿ ಅಧಿಕಾರಿಗಳಿದೆಯೇ ಅನ್ನೋದು ಈಗಿರುವ ಪ್ರಶ್ನೆ.
Bengaluru: After brutal murder, BBMP tightens rules for paying guest accommodations A 24-year-old woman was brutally murdered in her paying guest (PG) accommodation in Bengaluru on July 23.
Days after a woman was murdered inside a Paying Guest (PG) accommodation in Bengaluru, the Bruhat Bengaluru Mahanagara Palike (BBMP) has issued stringent guidelines for issuing and renewing trade licences for PG facilities within its jurisdiction.