ಮಧ್ಯಾಹ್ನ ತನಕ ದೇವಾಲಯದ ಮುಂದೆ ಹೂ ಮಾರಿ ಬಳಿಕ ಆನ್ಲೈನ್ ನಲ್ಲಿ ಪಾಠ ಕೇಳಿಸಿಕೊಂಡು ಈ ಬಾರಿಯ SSLC ಪರೀಕ್ಷೆ ಬರೆಯಲು ಮುಂದಾಗಿರುವ ಬಡ ವಿದ್ಯಾರ್ಥಿನಿಗೆ ತಮ್ಮ ಸ್ವಂತ ಹಣದಿಂದ ಲ್ಯಾಪ್ಟ್ಯಾಪ್ ಕೊಡಿಸಲು ಬಿಬಿಎಂಪಿ ಆಯುಕ್ತ ಗೌರವ್ಗುಪ್ತಾ ತೀರ್ಮಾನಿಸಿದ್ದಾರೆ.
ಸಂಪಗಿರಾಮನಗರದ ಆದಿ ಶಕ್ತಿ ದೇವಾಲಯದ ಮುಂದೆ ಬನಶಂಕರಿ ಹೂ ಮಾರಿ ಜೀವನ ನಡೆಸುವ ಕುರಿತಂತೆ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ನೋಡಿದ ಆಯುಕ್ತರು ತಾವೇ ಬಾಲಕಿ ಬನಶಂಕರಿ ಇದ್ದ ಜಾಗಕ್ಕೆ ತೆರಳಿದ್ದಾರೆ. ಆಕೆಯ ಯೋಗ ಕ್ಷೇಮ ವಿಚಾರಿಸಿ ಲ್ಯಾಪ್ ಕೊಡಿಸುವ ಭರವಸೆ ಕೊಟ್ಟಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಧಾರಣ ಹಿನ್ನೆಲೆ ಕುಟುಂಬದ ಬಾಲಕಿಯ ಉತ್ಸಾಹ ಕಂಡು ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದೆ. ಕಷ್ಟದಲ್ಲಿ ಓದಿ ಮುಂದೆ ಬರಬೇಕು ಎಂದು ಬಾಲಕಿಗೆ ತಿಳಿ ಹೇಳಿ, ಆಕೆಯ ಆನ್ಲೈನ್ ಕ್ಲಾಸಿಗೆ ಸಹಕಾರಿಯಾಗಲಿ ಎಂದು ನಾನು ನನ್ನ ಸ್ವಂತ ಹಣದಿಂದ ಲ್ಯಾಪ್ಟ್ಯಾಪ್ ಕೊಡಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಬನಶಂಕರಿಯ ತಂದೆ ನೇಕಾರರಾಗಿದ್ದು, ತಾಯಿ ದೇವಸ್ಥಾನದ ಬಳಿ ಹೂ ಮಾರುತ್ತಾರೆ. ಆದರೆ ಲಾಕ್ ಡೌನ್ ಕಾರಣದಿಂದ ನೇಕಾರಿಯೂ ನಿಂತು ಹೋಗಿದೆ. ದೇವಸ್ಥಾನದ ಬಾಗಿಲು ಮುಚ್ಚಿದ ಮೇಲೆ ವ್ಯಾಪಾರವೆಲ್ಲಿ. ಹೀಗಾಗಿ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.
Discussion about this post