Monday, April 19, 2021

ರಘು ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡಿಕೊಂಡಿದ್ದಾನಂತೆ… ಉರಿವ ಗಾಯಕ್ಕೆ ಉಪ್ಪು ಸುರಿದ ಚಂದ್ರಚೂಡ

Must read

- Advertisement -
- Advertisement -

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಚಂದ್ರಚೂಡ, ಇಡೀ ಮಹಾಮನೆಯನ್ನು ತಮ್ಮ ಕೈವಶ ಮಾಡಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಇಡೀ ಮನೆ ನನ್ನ ನಿಯಂತ್ರಣದಲ್ಲಿರಬೇಕು ಎಂದು ಬಯಸಿರುವ ಅವರು ಇದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.

ಈ ನಡುವೆ ಸಹ ಸ್ಪರ್ಧಿ ರಘು ಅವರ ಮನಸ್ಸಿನ ನೋವನ್ನು ಅರಿತುಕೊಂಡಿದ್ದ ಚಂದ್ರಚೂಡ, ವೈಷ್ಣವಿ ಕಣ್ಣಲ್ಲಿ ನಿನ್ನ ತಾಯಿಯನ್ನು ನೋಡು, ಮನಸ್ಸಿನ ನೋವನ್ನು ಹೇಳಿಕೊಂಡು ಮನಸ್ಸು ಹಗುರಾಗಿಸು ಎಂದು ಸಲಹೆ ಕೊಟ್ಟಿದ್ದರು. ಈ ಮೂಲಕ ರಘು ಒಂದಿಷ್ಟು ಮನಸ್ಸು ಹಗುರಾಗಿಸಿದ್ದರು ಕೂಡಾ.

ಆದರೆ ಇದೀಗ ಇದೇ ರಘುವಿನ ನೋವನ್ನೇ ಬಳಸಿಕೊಳ್ಳಲು ಚಂದ್ರಚೂಡ ಮುಂದಾಗಿದ್ದಾರೆ. ಅದು ಪ್ರಶಾಂತ್ ಸಂಬರಗಿ ಜೊತೆಗಿನ ಮಾತುಕತೆಯಲ್ಲಿ ಬಯಲಾಗಿದೆ.

ವೈಷ್ಣವಿ ಕಣ್ಣಲ್ಲಿ ತನ್ನ ತಾಯಿಯನ್ನು ಕಂಡಿದ್ದು ಇದೀಗ ಮಾರ್ಕೆಟಿಂಗ್​ ತಂತ್ರ ಅನ್ನುವುದು ಚಂದ್ರಚೂಡ್ ಮಾತು.

ಪ್ರಶಾಂತ್ ಹಾಗೂ ಚಂದ್ರಚೂಡ್​ ಮನೆಯಲ್ಲಿ ಗ್ಯಾಂಗ್ ಕಟ್ಟಿಕೊಳ್ಳಲು ಮುಂದಾಗಿದ್ದು ತಮ್ಮ ತಂಡಕ್ಕೆ ಕೆಲ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು ಈ ವೇಳೆ ಯಾರನ್ನು ಸೇರಿಸಿಕೊಳ್ಳಬೇಕು ಅನ್ನುವಾಗ, ರಘು ಒಳ್ಳೆಯ ವ್ಯಕ್ತಿ. ಆದರೆ, ಅವರು ತಮ್ಮ ನೋವು ಹಾಗೂ ದುಃಖವನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. ತಮ್ಮ ನೋವನ್ನು ಮಾರ್ಕೆಟಿಂಗ್​ ತಂತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂದಿದ್ದಾರೆ.

- Advertisement -
- Advertisement -
- Advertisement -

Latest article