ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದಿರುವ ಧನುಶ್ರೀ ಮಾತುಗಳನ್ನು ಕೇಳಿದ್ರೆ ಈಕೆ ಒಂದಿಷ್ಟು ದಿನ ಮನೆಯೊಳಗೆ ಇರಬೇಕು ಅನ್ನಿಸುತ್ತಿದೆ.
ನೇರವಾಗಿ ಮಾತನಾಡುವ ಹುಡುಗಿ ಟಿಕ್ ಟಾಕ್ ಗಳಲ್ಲಿ ಕಾಣಿಸಿಕೊಂಡಷ್ಟು ನೆಗೆಟಿವ್ ಅಲ್ಲ ಅನ್ನುವುದು ಸ್ಪಷ್ಟವಾಗುತ್ತಿದೆ.
ಟ್ರೋಲ್ ಪೇಜ್ ಗಳು ಈಕೆಯನ್ನು ಸಿಕ್ಕಾಪಟ್ಟೆ ನೆಗೆಟಿವ್ ಆಗಿ ಬಿಂಬಿಸಿದ ಕಾರಣಕ್ಕೆ ಬಿಗ್ ಬಾಸ್ ವೀಕ್ಷಕರು ಕೂಡಾ ಧನ್ಯಶ್ರೀಯನ್ನು ಅದೇ ದೃಷ್ಟಿ ಕೋನದಲ್ಲಿ ನೋಡಿದಂತಿದೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಈಗಷ್ಟೇ ಒಂದು ವಾರವಾಗಿದೆ. ಬಿಗ್ ಬಾಸ್ ಮನೆಯ ಮತ್ತಷ್ಟು ಜನರ ಬಣ್ಣ ಬಯಲಾಗಲಿದೆ. ಹೊರಗಡೆ ಕಂಡ ಹಾಗೇ ಒಳಗಡೆ ಯಾರೂ ಇಲ್ಲ. ಅದರೆ ಶುಭ ಪೂಂಜಾ ಒಳ್ಳೆಯವರು ಅಂದಿದ್ದಾರೆ.
ಜೊತೆಗೆ ಶುಭ ಪೂಂಜಾ ಅವರ ಬಗ್ಗೆ ಬರುತ್ತಿರುವ ಟ್ರೋಲ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಧನ್ಯಶ್ರೀ ಹುಡುಗಿಯನ್ನು ಬಾಡಿ…. ಅವಳ ಪಾರ್ಟ್ ನೋಡಿ ಅಳೆಯಬೇಡಿ ಎಂದು ಟ್ರೋಲ್ ಪೇಜ್ ಗಳಿಗೆ ಸೂಕ್ಷ್ಮವಾಗಿ ಹೇಳಿದ್ದಾರೆ.
Discussion about this post