ಬಿಗ್ ಬಾಸ್ ಮನೆ ಪ್ರವೇಶಿಸಿದ್ದ, ಧನುಶ್ರೀ ಟಿಕ್ ಟಾಕ್ ಫೇಮಸ್ ಕಾರಣಕ್ಕೆ ಒಂದಿಶ್ಟು ವಾರಗಳ ಕಾಲ ಮಹಾಮನೆಯಲ್ಲಿ ಇರುತ್ತಾರೆ ಎನ್ನಲಾಗಿತ್ತು.
ಆದರೆ ಎಲ್ಲಾ ಊಹೆಗಳು ಉಲ್ಟಾ ಹೊಡೆದಿದೆ. ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಧನುಶ್ರೀ ಹೊರ ಬಂದಿದ್ದಾರೆ.
ಶತಕ ಬಾರಿಸುತ್ತೇನೆ ಎಂದು ಹೋದವರ ವಿಕೆಟ್ ಮೊದಲ ವಾರವೇ ಪತನವಾಗಿದೆ.
ಈ ನಡುವೆ ಬಿಗ್ ಬಾಸ್ ಮನೆಯಿಂದ ಬಂದಿರೋ ಧನುಶ್ರೀ ತಮ್ಮ ಮಹಾಮನೆಯ ಪ್ರವಾಸ ಕುರಿತಂತೆ ಮಾತನಾಡಿದ್ದಾರೆ.
ಟ್ರೋಲ್ ಗಳ ಬಗ್ಗೆ ಹಾಗೂ ಟ್ರೋಲರ್ ಗಳ ಬಗ್ಗೆಯೂ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದ, ಸ್ನಾನಕ್ಕಿಂತ ಮುಂಚೆ ಮೇಕಪ್ ಮಾಡಿಕೊಂಡ ಟ್ರೋಲ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಹ ಸ್ಪರ್ಧಿ ಲ್ಯಾಗ್ ಮಂಜು ಬಗ್ಗೆ ಕೆಂಡ ಕಾರಿದ್ದಾರೆ.
ಈ ಟ್ರೋಲ್ ಬಗ್ಗೆ ಧನುಶ್ರೀ ಲ್ಯಾಗ್ ಮಂಜು ಅವರನ್ನೇ ಟಾರ್ಗೇಟ್ ಮಾಡಿದ್ದಾರೆ. ಈ ಟ್ರೋಲ್ ಗೆ ಅವರೇ ಕಾರಣ ಅನ್ನುವುದು ಅವರಿಗೆ ಗೊತ್ತಿದೆ.
ಅಲ್ಲಿರುವ 17 ಸ್ಪರ್ಧಿಗಳಿಗೆ ಇರುವುದು ಎರಡೇ ಬಾತ್ ರೂಮ್ ಅದರಲ್ಲಿ ಎಲ್ಲರೂ ಸ್ನಾನ ಮಾಡಬೇಕಿತ್ತು. ಟೈಮ್ ಉಳಿಸಿಕೊಳ್ಳುವ ಸಲುವಾಗಿ ನಾನು ಸ್ನಾನಕ್ಕಿಂತ ಮುಂಚೆ ಮೇಕಪ್ ಮಾಡಿಕೊಂಡೆ. ಆದರೆ ಮಂಜು ಅದನ್ನು ಬೇರೆಯದ್ದೇ ರೀತಿಯಲ್ಲಿ ಜೋಕ್ ಕ್ರ್ಯಾಕ್ ಮಾಡಿದ್ರು.
ಜೋಕ್ ಮಾಡಬೇಕು, ಆದರೆ ಅದು ಬೇರೆಯವರ ಮನಸ್ಸಿಗೆ ಹರ್ಟ್ ಮಾಡೋ ತರ ಇರಬಾರದು ಎಂದು ಕಿಡಿ ಕಾರಿರುವ ಧನುಶ್ರೀ, ಲ್ಯಾಗ್ ಮಂಜನಿಗಿಂತ ರಘು ಒಳ್ಳೆಯ ಹಾಸ್ಯ ಕಲಾವಿದ ಅಂದಿದ್ದಾರೆ.
Discussion about this post