Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ

Radhakrishna Anegundi by Radhakrishna Anegundi
30-06-21, 9 : 42 am
in ಸೀರಿಯಲ್ ಸಂತೆ
nidhi aravindh
Share on FacebookShare on TwitterWhatsAppTelegram

ಬಿಗ್ ಬಾಸ್ ಕನ್ನಡ ಸೀಸನ್‌ 8ರ ಸೆಕೆಂಡ್ ಇನಿಂಗ್ಸ್‌ ಪ್ರಾರಂಭದಿಂದಲೇ ಬೆಂಕಿಯಾಗಿದೆ.ಮನೆಯಿಂದ ಹೊರ ಹೋದ ಮಂದಿ ಎಪಿಸೋಡ್ ಗಳನ್ನು ನೋಡಿ ಬಂದಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೂತು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ಬಂದಿದ್ದಾರೆ. ಹಲವು ಸ್ಪರ್ಧಿಗಳು ಗೋಮುಖ ವ್ಯಾಘ್ರಗಳು ಅನ್ನುವುದು ಕೂಡಾ ಗೊತ್ತಾಗಿದೆ.

ಪ್ರಶಾಂತ್ ಸಂಬರಗಿಯಂತು, ದಿವ್ಯಾ ಸುರೇಶ್ ಅವರಿಗೆ ಟಾಂಟ್ ಕೊಡುವ ಭರದಲ್ಲಿ ನಿಮ್ಮ ಫೇಕ್ ಲವ್ ಸ್ಟೋರಿಗಳ ಬಗ್ಗೆ ಹೊರಗಡೆ ಬೇರೆ ಬೇರೆ ಚಾನೆಲ್ ಗಳಲ್ಲಿ ಎನೆಲ್ಲಾ ಮಾತನಾಡಿದ್ದೇನೆ ಗೊತ್ತಾ ಅನ್ನುವ ಮೂಲಕ ಹುಡುಗಿಯೊಬ್ಬಳ ಮಾನ ಮರ್ಯಾದೆ ಹರಾಜು ಹಾಕಿದ್ದೇನೆ ಎಂದು ಸಂಭ್ರಮಿಸಿದ್ದಾರೆ.

ಈ ನಡುವೆ ಮಂಗಳವಾರ ಪ್ರಸಾರದವಾದ ಸಂಚಿಕೆಯಲ್ಲಿ ಪ್ರಿಯಾಂಕ ಹಾಗೂ ಚಂದ್ರಚೂಡ್ ಕಚ್ಚಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಕಿತ್ತಾಡಿಕೊಂಡಿದ್ದಾರೆ. ಪರಿಸ್ಥಿತಿ ನೋಡಿದರೆ ಎಲ್ಲಾ ಸ್ಪರ್ಧಿಗಳಿಗೂ ಚೂಡ್ ಭೂತ ಹಿಡಿದಿದೆಯೇನೋ ಅನ್ನುವ ಅನುಮಾನ ಬರುತ್ತಿದೆ.

ಮನೆಯ ಸದಸ್ಯರನ್ನು ಸೂರ್ಯ ಸೇನಾ ಮತ್ತು ಕ್ವಾಟ್ಲೆ ಕಿಲಾಡಿಗಳು ಎಂದು ಎರಡು ತಂಡಗಳನ್ನಾಗಿ ಮಾಡಲಾಗಿದೆ. ಇದೀಗ ಸೂರ್ಯ ಸೇನಾ ತಂಡದ ನಾಯಕ ಅರವಿಂದ್ ಆಗಿದ್ರೆ, ಕ್ವಾಟ್ಲೆ ಕಿಲಾಡಿ ತಂಡವನ್ನು ಮಂಜು ಮುನ್ನಡೆಸುತ್ತಿದ್ದಾರೆ.

nidhi 1 3
ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ 1

ಈ ತಂಡಗಳಿಗೆ ಟಿಶ್ಯೂ ರೋಲ್‌ ಜೋಡಿಸೋ ಟಾಸ್ಕ್‌ ನೀಡಲಾಗಿದ್ದು, ಆಟದ ಮಧ್ಯೆ ಮಂಜು ಮತ್ತು ಅರವಿಂದ್ ಮಾತಿಗೆ ಮಾತು ಬೆಳೆದಿತ್ತು, ಈ ಅಸಮಾಧಾನ ಆಟ ಮುಗಿದ ಬಳಿಕವೂ ಮುಂದುವರಿದು ಕಿಚನ್ ನಲ್ಲೂ ಚರ್ತೆ ನಡೆದಿತ್ತು. ಆಗ ಮಂಜು ಟೀಮ್‌ನಲ್ಲಿದ್ದ ನಿಧಿ ಮಾತನಾಡಲು ಬಂದರು. ಅದಕ್ಕೆ ಅರವಿಂದ್ ಆಕ್ಷೇಪಾರ್ಹ ಪದ ಬಳಸಿ, ಸುಮ್ಮನಿರಿಸಿದರು, ಇದು ನಿಧಿಗೆ ತುಂಬ ಹರ್ಟ್ ಮಾಡಿತು. ಮುಚ್ಚುಕೊಂಡಿರುವ ಅನ್ನುವ ಶಬ್ಧ ಇಬ್ಬರ ನಡುವೆ ಕಂದಕ ಸೃಷ್ಟಿಸಿದೆ.

ಈ ಶಬ್ಧದಿಂದ ರೊಚ್ಚಿಗೆದ್ದ ನಿಧಿ, ಅರವಿಂದ್‌ ಸ್ಪೋರ್ಟ್ಸ್‌ ಹಿನ್ನೆಲೆಯಿಂದ ಬಂದಿದ್ದರೂ, ಕ್ರೀಡಾಸ್ಫೂರ್ತಿ ಇಲ್ಲ. ಯಾವಾಗಲೂ ಗೆಲ್ಲಲೇ ಬೇಕು ಎಂದು ಯೋಚಿಸುತ್ತಾನೆ. ಸೋತಾಗ ಅದನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.

nidhi bb
ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ 2

ಇದಾದ ಬಳಿಕ ತನ್ನ ತಪ್ಪಿನ ಅರಿವಾದ ಅರವಿಂದ್ ನಾನು ಮಾತನಾಡಿದ್ದು ತಪ್ಪಾಯಿತು ಎಂದು ನಿಧಿ ಬಳಿ ಕ್ಷಮೆ ಕೇಳಲು ಬಂದಿದ್ದಾರೆ. ಈ ವೇಳೆ ನಿಧಿ ಹಳೆಯ ಕೋಪಕ್ಕೆ ಪ್ರತೀಕಾರ ತೀರಿಸಿದ್ದಾರೆ. ನಿನಗೆ ಕ್ರೀಡಾ ಸ್ಫೂರ್ತಿಯೇ ಇಲ್ಲ, ಮುಚ್ಚಿಕೊಂಡು ಹೋಗು ಎಂದು ಅರವಿಂದ್ ಪದದಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಇವರಿಬ್ಬರ ನಡುವಿನ ಕಿತ್ತಾಟ ಇದು ಮೊದಲಲ್ಲ, ಮೊದಲ ಇನ್ನಿಂಗ್ಸ್ ನ ಎರಡನೇ ವಾರ ಟಾಸ್ಕ್ ಸಂದರ್ಭದಲ್ಲಿ ಹೊಲಸು ನಿಧಿ ಅನ್ನುವ ಶಬ್ಧ ದೊಡ್ಡರಂಪಾಟ ಸೃಷ್ಟಿಸಿತ್ತು. ಆದರೆ ಅರವಿಂದ್ ಅವತ್ತು ಹೇಳಿದ್ದು ಹೊಲಸು ನಿದ್ದೆ ಅಂತಾ, ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ನಿಧಿ ಸುಬ್ಬಯ್ಯ ರಾಡಿ ರಂಪಾಟ ಮಾಡಿದ್ದರು.

Tags: bbk8
Share1TweetSendShare

Discussion about this post

Related News

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

tanishakuppanda

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್