ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡವರನ್ನು ಬಿಗ್ ಬಾಸ್ ಮನೆಗೆ ಬರಮಾಡಿಕೊಳ್ಳುವುದು ಈ ಹಿಂದಿನಿಂದ ಬಂದ ಕ್ರಮ.
ಈ ಬಾರಿಯ ಸ್ಪರ್ಧಿಗಳನ್ನು ನೋಡಿದರೆ ಅಂತಹ ಕ್ವಾಂಟ್ರವರ್ಸಿ ಸ್ಟಾರ್ ಗಳು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿಲ್ಲ.
ಆದರೆ ಸ್ಪರ್ಧಿಗಳ ಸಂಪೂರ್ಣ ಜಾತಕ ಪರಿಶೀಲನೆ ಸಂದರ್ಭದಲ್ಲಿ ಸಿಕ್ಕ ಮಾಹಿತಿಗಳು ಸಾಕಷ್ಟು ಕುತೂಹಲಕಾರಿಯಾಗಿದೆ. ಅವರು ವಿವಾದಗಳಲ್ಲಿ ಸಿಲುಕದೇ ಇರಬಹುದು. ಆದರೆ ಅವರ ತೀರಾ ಆಪ್ತರು ಅನ್ನಿಸಿಕೊಂಡವರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡವರಾಗಿದ್ದಾರೆ.
ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿ ಅಂದ್ರೆ ಅದು ದಿವ್ಯಾ ಸುರೇಶ್.
Miss India South 2017ರ ವಿನ್ನರ್ ಆಗಿರುವ ದಿವ್ಯಾ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿಯಾಗಲೇಬೇಕು ಎಂದು ಚಂದನವನಕ್ಕೆ ಬಂದವರು ಸ್ಟಾರ್ ನಟರೊಂದಿಗೆ ಸಿಕ್ಕ ಪಾತ್ರಗಳನ್ನು ನಿರಾಕರಿಸಿದ್ದಾರೆ.
ರಾಜ್ಯ ಮಟ್ಟದ ಕಬ್ಬಡಿ ಆಟಗಾರ್ತಿಯಾಗಿದ್ದ ಇವರು, ಕೆಲ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಹಾಗಾದ್ರೆ ಬಿಗ್ ಬಾಸ್ ಮನೆಗೆ ಹೋಗೋ ಭಾಗ್ಯ ಸಿಕ್ಕಿದ್ದು ಹೇಗೆ ಅನ್ನುವುದನ್ನು ನೋಡಿದ್ರೆ ಸಿಗೋ ಹೆಸರು ರಾಕೇಶ್ ಅಡಿಗ.
ರಾಕೇಶ್ ಅಡಿಗ ಚಂದನವನದ ಡ್ರಗ್ಸ್ ಪ್ರಕರಣ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು,
ಗಾಂಜಾ ಒಂದು ಮೆಡಿಸಿನ್, ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿ ಹೆಡ್ ಲೈನ್ ಆಗಿದ್ದರು.
ಅಷ್ಟು ಮಾತ್ರವಲ್ಲದೆ ಗಾಂಜಾ ಪರ ಬ್ಯಾಟ್ ಬೀಸಿದ್ದ ರಾಕೇಶ್ ಅಡಿಗ ಅದಕ್ಕೆ ವೈಜ್ಞಾನಿಕ ಕಾರಣಗಳನ್ನೂ ಕೂಡಾ ಕೊಟ್ಟಿದ್ದರು. ಆದರೆ ಗಾಂಜಾ ಲೀಗಲ್ ಮಾಡಿ ಎಂದ ನಟನ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಅದೇ ರಾಕೇಶ್ ಅಡಿಗರ ಪ್ರೇಯಸಿ ದಿವ್ಯಾ ಸುರೇಶ್. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಅಡಿಗ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ದಿವ್ಯಾ, ಇವನೇ ನನ್ನ ಬೆಟರ್ ಹಾಫ್ ಅಂದಿದ್ದಾರೆ.
ಮುಂದಿನ ದಿನಗಳಲ್ಲಿ ರಾಕೇಶ್ ಅಡಿಗ ಬಿಗ್ ಬಾಸ್ ಮನೆಗೆ ಬಂದರು ಹೋದರೂ ಅಚ್ಚರಿ ಇಲ್ಲ.
Discussion about this post