ಬೆಂಗಳೂರು : ಹುಡುಗಿಯೊಬ್ಬಳ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡ ಪಿಯುಸಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮೊಹಮ್ಮದ್ ಫೈಜ್ (17) ಎಂದು ಗುರುತಿಸಲಾಗಿದೆ. ಕೊಲೆಗಾರರು ಅಪ್ರಾಪ್ತರಾಗಿರುವ ಕಾರಣ ಅವರನ್ನು ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮೊಹಮ್ಮದ್ ಫೈಜ್, ಹುಡುಗಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರ ಮತ್ತೊಂದು ಗುಂಪಿನ ಜೊತೆ ಕಿತ್ತಾಡಿಕೊಂಡಿದ್ದ. ಈ ವೇಳೆ ಎರಡು ಗುಂಪುಗಳು ಪರಸ್ಪರ ಜೀವ ಬೆದರಿಕೆ ಹಾಕಿ ಹೋಗಿತ್ತು.
ಮಂಗಳವಾರ ಸಂಜೆ ಮತ್ತೆ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದೆ. ಈ ವೇಳೆ ಮತ್ತೊಂದು ಗುಂಪು ಮೊಹಮ್ಮದ್ ಫೈಜ್ ಗೆ ಡ್ರ್ಯಾಗರ್ ನಿಂದ ಇರಿದಿದೆ.
ಗಂಭೀರವಾಗಿ ಗಾಯಗೊಂಡ ಮೊಹಮ್ಮದ್ ಫೈಜ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವವಾಗಿದ್ದ ಕಾರಣ ಆತ ಬದುಕಲಿಲ್ಲ.
ಇದೀಗ ಬಹುತೇಕ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಪಿಯುಸಿ ವಿದ್ಯಾರ್ಥಿಗಳು ಡ್ರ್ಯಾಗರ್ ಹಿಡಿದು ಓಡಾಡುತ್ತಿದ್ದಾರೆ ಅಂದ್ರೆ , ಮುಂದೆ ಬೆಂಗಳೂರಿನಲ್ಲಿ ಓಡಾಡಲು ಆತಂಕ ಪಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.
Discussion about this post