ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥ ಕುರಿತಂತೆ ನೂತನ ಗೃಹ ಸಚಿವರು ಸಿಕ್ಕಾಪಟ್ಟೆ ಭರವಸೆ ಕೊಟ್ಟಿದ್ದಾರೆ.ಆದರೆ ಇತ್ತೀಚಿನ ಕೆಲ ಘಟನೆಗಳನ್ನು ನೋಡಿದರೆ ರಾಜಧಾನಿಯಲ್ಲಿ ಪೊಲೀಸ್ ವ್ಯವಸ್ಥೆಯ ಸಿಂಹಾವಲೋಕನ ಅವಶ್ಯಕತೆ ಇದೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಬೇರು ಬಿಟ್ಟಿರುವ ಅಧಿಕಾರಿಗಳಿಗೆ ರಾಜ್ಯದ ಇತರ ಜಿಲ್ಲೆಗಳನ್ನೂ ಪರಿಚಯಿಸುವ ಅಗತ್ಯವಿದೆ.
ಈ ನಡುವೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಅಂಗಾಂಗ ಮುಟ್ಟಿದ ಬಳಿಕ ಹಲ್ಲೆ ನಡೆಸಿ ಆರೋಪಿಯ ಪರಾರಿಯಾಗಿದ್ದಾನೆ. ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಂತಿನಗರದ ನಿವಾಸಿ 22 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.
ಸೆಪ್ಟಂಬರ್ 12 ರಂದು ಬೆಳಗ್ಗೆ 8.10ರ ಸುಮಾರಿಗೆ ಲಾಂಗ್ ಫೋರ್ಡ್ ರಸ್ತೆ ಬಳಿ ಯುವತಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಯುವತಿಯ ಅಂಗಾಂಗ ಮುಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Discussion about this post